ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕದ್ದುಮುಚ್ಚಿ ಮೊಬೈಲ್ ಬಳಕೆ; 16 ಮೊಬೈಲ್ ಪುಡಿ ಮಾಡಿದ ಪ್ರಿನ್ಸಿಪಾಲ್

By ಶಿರಸಿ ಪ್ರತಿನಿಧಿ
|
Google Oneindia Kannada News

Recommended Video

ಸ್ವಚ್ಛತೆ ಇಲ್ಲದೇ ವಸತಿ ಶಾಲೆ ಮಕ್ಕಳಲ್ಲಿ ಹಬ್ಬಿದ ಚರ್ಮ ರೋಗ; ಸಚಿವ ಸುರೇಶ್ ಕುಮಾರ್ ಎಚ್ಚರಿಕೆ | Oneindia Kannada

ಶಿರಸಿ, ಸೆಪ್ಟೆಂಬರ್ 13: ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಎಷ್ಟೋ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಹೀಗೆ ನಿಷೇಧ ಮಾಡಿದ್ದರೂ ಕದ್ದುಮುಚ್ಚಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ನಿಂತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಶಿರಸಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ಡೇಟಿಂಗ್ ಮಾಡಲು ನಂಬರ್ ಕೊಟ್ಟ ಯುವಕ 1.35 ಲಕ್ಷ ಕಳೆದುಕೊಂಡಡೇಟಿಂಗ್ ಮಾಡಲು ನಂಬರ್ ಕೊಟ್ಟ ಯುವಕ 1.35 ಲಕ್ಷ ಕಳೆದುಕೊಂಡ

ಶಿರಸಿಯ ಎಂಇಎಸ್ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದರು. ಈ ವಿಷಯ ಪ್ರಿನ್ಸಿಪಾಲ್ ಆರ್ ಎಂ ಭಟ್ ಅವರ ಗಮನಕ್ಕೂ ಬಂದಿತ್ತು. ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಯೋಚಿಸಿದ ಅವರು, ಏಕಾಏಕಿ ತಪಾಸಣೆ ನಡೆಸಿ, ವಿದ್ಯಾರ್ಥಿಗಳಿಂದ ಮೊಬೈಲ್ ಗಳನ್ನು ವಶಪಡಿಸಿಕೊಂಡರು.

Principal Crushed 16 Mobile Phone Of Students In Sirsi

ಒಟ್ಟಾರೆ ಹದಿನಾರು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡರು. ಅಷ್ಟೇ ಅಲ್ಲ, ಮೊಬೈಲಿನಿಂದಾಗುವ ದುಷ್ಪರಿಣಾಮದ ಕುರಿತು ತಿಳಿಹೇಳುತ್ತಲೇ ವಿದ್ಯಾರ್ಥಿಗಳ ಎದುರೇ ಮೊಬೈಲ್ ಗಳನ್ನು ಸುತ್ತಿಗೆಯಿಂದ ಕುಟ್ಟಿ ಒಡೆದುಹಾಕಿದ್ದಾರೆ.

ಗೆಳತಿಯ ಖಾಸಗಿ ಕ್ಷಣ ಕ್ಲಿಕ್ಕಿಸಿ, ಅನ್ಯರಿಗೆ ಕಳುಹಿಸಿ, ಪೊಲೀಸರಿಗೆ ತಗ್ಲಾಕಿಕೊಂಡ!ಗೆಳತಿಯ ಖಾಸಗಿ ಕ್ಷಣ ಕ್ಲಿಕ್ಕಿಸಿ, ಅನ್ಯರಿಗೆ ಕಳುಹಿಸಿ, ಪೊಲೀಸರಿಗೆ ತಗ್ಲಾಕಿಕೊಂಡ!

ಹೀಗೆ ಮೊಬೈಲ್ ಒಡೆದುಹಾಕಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
Mobile phones are banned in many schools and colleges. Still students use mobile phones often. So to teach them the lesson, Principal of MES college of sirsi crushed 16 mobile phones of students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X