ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಣ್ಯ ಸಂಪತ್ತು ನಾಶವಾಗುತ್ತಿದ್ದರೂ ಇಲಾಖೆ ಮೌನವಹಿಸಿರುವುದೇಕೆ?

|
Google Oneindia Kannada News

ಬಂಧುಗಳೇ.. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ಆದರೆ ಅರಣ್ಯ ಸಂಪತ್ತು ನಾಶವಾದಾಗ ಹಾಗೂ ಅನ್ಯಾಯದ ವಿರುದ್ಧ ನೇರವಾಗಿ ಮಾತನಾಡುವುದು ಮತ್ತು ಅಕ್ರಮಗಳನ್ನು ಖಂಡಿಸುವುದು ನನ್ನ ಹಾಗೂ ನನ್ನ ಪಕ್ಷದ ನಿಲುವು.

Recommended Video

ಅಪ್ಪನಿಗಿಂತ ನಾನೇನ್ ಕಮ್ಮಿನಾ ಅನ್ನೋ ರೀತಿ ಕೆಲಸ ಮಾಡ್ತಿದ್ದಾರೆ ಶಾಸಕ ಜಮೀರ್ ಖಾನ್ ಪುತ್ರ | Oneindia Kannada

ಕೆಲವು ದಿನಗಳ ಹಿಂದೆ ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿ ಪಂಚಾಯತ ವ್ಯಾಪ್ತಿಯ ನೆರಲೆಮನೆಯಲ್ಲಿ ಬಡ ಮಹಿಳೆಯ ಮನೆ ಹಾಗೂ ಕೊಟ್ಟಿಗೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಿತ್ತು ಹಾಕಿದ್ದಾರೆ.

ಅರಣ್ಯ ರಕ್ಷಕ ಹುದ್ದೆ ನೇಮಕಾತಿ; ಜೂನ್ 15ರ ತನಕ ಅರ್ಜಿ ಹಾಕಿ ಅರಣ್ಯ ರಕ್ಷಕ ಹುದ್ದೆ ನೇಮಕಾತಿ; ಜೂನ್ 15ರ ತನಕ ಅರ್ಜಿ ಹಾಕಿ

ನಂತರ ಸಾರ್ವಜನಿಕರಿಂದ ಅರಣ್ಯ ಇಲಾಖೆಯ ಮೇಲೆ ಕೇಳಿ ಬಂದ ಆರೋಪವೇನೆಂದರೆ ನೆರಲೆಮನೆಯಿಂದ ಕೆಲವೇ ಮೀಟರುಗಳ ಅಂತರದಲ್ಲಿರುವ ಬಾನ್ಕುಳಿಯಲ್ಲಿ ಗೋಸ್ವರ್ಗ ಹೆಸರಿನಲ್ಲಿ ಶ್ರೀರಾಮಚಂದ್ರಪುರ ಮಠದ ಕಾಮಧುಘಾ ಟ್ರಸ್ಟ್(ರಿ.) ವತಿಯಿಂದ ಗೋಶಾಲೆ ನಡೆಯುತ್ತಿದೆ ಎಂದು ಗೊತ್ತಾಯಿತು.

ಅಲ್ಲಿ ಕಟ್ಟಡಗಳ ನಿರ್ಮಾಣ

ಅಲ್ಲಿ ಕಟ್ಟಡಗಳ ನಿರ್ಮಾಣ

ಗೋಶಾಲೆ ಸುತ್ತಮುತ್ತಲೂ ಅನೇಕ ಎಕರೆ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಹಾಗೂ ಅನೇಕ ಕಡೆ ಬೆಟ್ಟ-ಗುಡ್ಡಗಳನ್ನು ಕಡಿಯಲಾಗಿದ್ದು, ಈ ಸ್ಥಳಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ನಾನು ನಮ್ಮ ಸ್ನೇಹಿತರಾದ ಪತ್ರಕರ್ತ ಮಿತ್ರರೊಬ್ಬರ ಜೊತೆ ಈ ಸ್ಥಳಕ್ಕೆ ಭೇಟಿ ನೀಡಿದೆ. ಅಲ್ಲಿ ಕೆಲವೊಂದು ದೃಶ್ಯಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು.

ಬಡಮಹಿಳೆಯ ಗುಡಿಸಲು ಕಿತ್ತು ಹಾಕಿದರು

ಬಡಮಹಿಳೆಯ ಗುಡಿಸಲು ಕಿತ್ತು ಹಾಕಿದರು

ಕೇವಲ ಎರಡು ಗುಂಟೆ ಜಾಗದಲ್ಲಿ ಹಲವಾರು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡಿದ್ದ ಬಡ ಮಹಿಳೆಯ ಮನೆಯನ್ನು ನೆರಲೆಮನೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರನ್ನು ಕರೆದುಕೊಂಡು ಹೋಗಿ ಕಿತ್ತು ಹಾಕಿದ್ದರು. ಆದರೆ ಭಾನ್ಕುಳಿಯಲ್ಲಿ ಎರಡು ಮೂರು ಕಡೆಗಳಲ್ಲಿ ಎಕರೆಗಟ್ಟಲೆ ಗುಡ್ಡ-ಬೆಟ್ಟವನ್ನು ಅಗೆದು ತೆಗೆಯಲಾಗಿದೆ.

ಕೆಲವು ಕಡೆಗಳಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ, ಇನ್ನು ಕೆಲವು ಕಡೆಗಳಲ್ಲಿ ಗುಡ್ಡ ಅಗೆದು ತೆಗೆದು ಸಮತಟ್ಟು ಮಾಡಲಾಗಿದೆ. ಇಲ್ಲಿ ಹಲವಾರು ಮರಗಳನ್ನು ಕಡಿದು ಕಿತ್ತು ಹಾಕಿರಬಹುದು ಎನ್ನುವ ಸಂಶಯ ಮೂಡುತ್ತಿದೆ.

ಉಡುಪಿಯಲ್ಲಿ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ: ಆಕ್ರೋಶಉಡುಪಿಯಲ್ಲಿ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ: ಆಕ್ರೋಶ

ಅರಣ್ಯ ಸಂಪತ್ತು ನಾಶವಾಗುತ್ತಿದೆ

ಅರಣ್ಯ ಸಂಪತ್ತು ನಾಶವಾಗುತ್ತಿದೆ

ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದೇಷ್ಟು? ಕಂದಾಯ ಇಲಾಖೆಗೆ ಸೇರಿದ್ದೇಷ್ಟು ಗೊತ್ತಿಲ್ಲ. ಮಂಜೂರಾಗಿರುವ ಜಾಗವೇಷ್ಟು? ಅತಿಕ್ರಮಣ ಜಾಗವೇಷ್ಟು? ಗೊತ್ತಿಲ್ಲ. ಅಲ್ಲಿ ಗುಡ್ಡ ಬೆಟ್ಟಗಳನ್ನು ಅಗೆದದ್ದಂತು ಸತ್ಯ. ಆದರೆ ಇಲಾಖೆಯ ಅಧಿಕಾರಿಗಳು ಈ ಪರಿ ಗುಡ್ಡ ಅಗೆಯಲು ಯಾಕೆ ಅನುಮತಿ ನೀಡಿದ್ದಾರೆ ಎನ್ನುವುದು ಆಶ್ಚರ್ಯ ಮೂಡಿಸುತ್ತದೆ.

ಈ ಬಗ್ಗೆ ನಾನು ಹಲವಾರು ಜನರಲ್ಲಿ ವಿಚಾರಿಸಿದಾಗ ಶಿರಸಿಯ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ ಅನ್ನೊ ಮಾತು ಕೇಳಿಬಂತು. ಅದೇನೇ ಇರಲಿ ಈ ಪರಿ ಗುಡ್ಡ ಕಡಿದು, ಮರಗಳನ್ನು ನಾಶ ಮಾಡಿ, ಅರಣ್ಯ ಸಂಪತ್ತು ನಾಶವಾಗುತ್ತಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಕೊಟ್ಟಿಲ್ಲ.

ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು

ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು

ಬಡ ಮಹಿಳೆ ಎರಡು ಗುಂಟೆ ಜಾಗದಲ್ಲಿ ಚಿಕ್ಕ ಮನೆ ಕಟ್ಟಿಕೊಂಡಿದ್ದರೆ ಅವಳ ಮನೆಯನ್ನು ಕಿತ್ತು, ಆ ಬಡ ಕುಟುಂಬವನ್ನು ಬೀದಿಗೆ ಹಾಕಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನನ್ನದೊಂದು ಧಿಕ್ಕಾರ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡವರ ಕೂಗು ಅರಣ್ಯರೋದನವಾಗಿದೆ. ಮುಂಬಡ್ತಿ ಪಡೆಯಲು ಕೆಲವು ಇಲಾಖೆಯ ಅಧಿಕಾರಿಗಳು ಅಧಿಕಾರ ಶಾಹಿಗಳ ಬೂಟು ನೆಕ್ಕುತ್ತಿರುವುದು ಈ ಘಟನೆಯಿಂದ ಜಗಜ್ಜಾಹೀರಾಗಿದೆ. ಸಂಬಂಧಪಟ್ಟವರು ಸ್ಥಳ ಪರಿಶೀಲಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
ವಂದನೆಗಳೊಂದಿಗೆ
ನಾಗರಾಜ ನಾಯ್ಕ
ಜಿಲ್ಲಾಧ್ಯಕ್ಷರು
ಕರ್ನಾಟಕ ರಾಷ್ಟ್ರಸಮಿತಿ ಪಕ್ಷ
ಉತ್ತರ ಕನ್ನಡ

English summary
Forest Department officials Demolished a poor woman house and barn in the Bedkani Panchayat at Uttara Kannada District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X