ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ; ಮಗಳನ್ನು ಅಪಹರಿಸಿದ ತಾಯಿ, ಪ್ರಕರಣಕ್ಕೆ ಟ್ವಿಸ್ಟ್!

By ಕಾರವಾರ ಪ್ರತಿನಿಧಿ
|
Google Oneindia Kannada News

ಶಿರಸಿ, ಡಿಸೆಂಬರ್ 28; ಮಗಳನ್ನು ತಾಯಿಯೇ ಅಪಹರಣ ಮಾಡಿರುವ ಪ್ರಕರಣವೊಂದು ಮೂರು ದಿನಗಳ ಹಿಂದೆ ವರದಿಯಾಗಿತ್ತು. ಶಿರಸಿಯ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ತಾಯಿ, ಮಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.

ಪ್ರೀತಿಸಿ ಮದುವೆಯಾದ ಕಾರಣಕ್ಕೆ ಗಂಡನ ಮನೆಯಿಂದ ಮಗಳನ್ನು ತಾಯಿಯೇ ಅಪಹರಣ ಮಾಡಿದ್ದರು. ಶಿರಸಿ ಹೊಸ ಮಾರುಕಟ್ಟೆ ಠಾಣೆ ಪಿಎಸ್‌ಐ ನಾಗಪ್ಪ ನೇತೃತ್ವದ ತಂಡ ಅಪಹರಣಕ್ಕೊಳಗಾದ ಮಗಳು ಹಾಗೂ ಅಪಹರಣ ಮಾಡಿದ್ದ ತಾಯಿಯನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.

ಉಜಿರೆ ಬಾಲಕನ ಅಪಹರಣ; ಮಂಜುನಾಥ್ ಬಿಡುಗಡೆಗಾಗಿ ಕಣ್ಣೀರು! ಉಜಿರೆ ಬಾಲಕನ ಅಪಹರಣ; ಮಂಜುನಾಥ್ ಬಿಡುಗಡೆಗಾಗಿ ಕಣ್ಣೀರು!

ಡಿಸೆಂಬರ್ 25ರಂದು ಶಿರಸಿಯ ಬಸವೇಶ್ವರ ನಗರದಿಂದ ಋತಿಕಾ ಮಣಿಕಂಠ ಕೊಡಿಯಾ (18) ಅಪಹರಣ ನಡೆದಿತ್ತು. ಋತಿಕಾ ತಾಯಿ ರೂಪಾ ಸರ‍್ಸಿಕರ್, ಕಿರಣ ಬೆಲ್ಲದ್ ಹಾಗೂ ಇತರ ನಾಲ್ಕೈದು ಜನ ಸೇರಿ ಅಪಹರಣ ಮಾಡಿದ್ದರು.

ಉಜಿರೆ ಬಾಲಕನ ಅಪಹರಣ; ಆರೋಪಿಗಳು ಬೆಳ್ತಂಗಡಿ ಪೊಲೀಸರ ವಶಕ್ಕೆಉಜಿರೆ ಬಾಲಕನ ಅಪಹರಣ; ಆರೋಪಿಗಳು ಬೆಳ್ತಂಗಡಿ ಪೊಲೀಸರ ವಶಕ್ಕೆ

Mother Kidnapped Daughter Twist To Case

ಋತಿಕಾ ಪತಿ ಮಣಿಕಂಠ ಕೊಡಿಯಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ಶಿರಸಿ ಡಿಎಸ್ಪಿ, ಪಿಎಸ್ಐ ನಾಗಪ್ಪ ಬಿ. ನೇತೃತ್ವದ ತಂಡವೊಂದನ್ನು ರಚನೆ ಮಾಡಿದ್ದರು. ಇಂದು ಪೊಲೀಸರ ತಂಡ ಅಪಹರಣಕ್ಕೆ ಒಳಗಾದ ಮಗಳು, ಅಪಹರಣ ಮಾಡಿದ್ದ ತಾಯಿಯನ್ನು ಪತ್ತೆ ಹಚ್ಚಿದೆ.

 ಸುಖಾಂತ್ಯ ಕಂಡ ಉಜಿರೆ ಬಾಲಕನ ಅಪಹರಣ ಪ್ರಕರಣ; ಆರು ಮಂದಿ ಬಂಧನ ಸುಖಾಂತ್ಯ ಕಂಡ ಉಜಿರೆ ಬಾಲಕನ ಅಪಹರಣ ಪ್ರಕರಣ; ಆರು ಮಂದಿ ಬಂಧನ

ಅಪಹರಣಗೊಂಡಿದ್ದ ಋತಿಕಾ ಠಾಣೆಗೆ ಹಾಜರಾಗಿ ಆಪ್ತ ಸ್ನೇಹಿತನಾಗಿದ್ದ ಮಣಿಕಂಠ ಕೋಡಿಯಾನೊಂದಿಗೆ ವಿವಾಹವಾಗಿದೆ. ವಿಷಯವನ್ನು ಕೆಲವು ದಿನಗಳು ಕಳೆದರೂ ತನ್ನ ಮನೆಯಲ್ಲಿ ತಿಳಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ವಿಷಯವನ್ನು ತಾಯಿಗೆ ತಿಳಿಸಿ ಬಸವೇಶ್ವರ ನಗರದ ಮಣಿಕಂಠ ಕೊಡಿಯಾನ ಮನೆಗೆ ಅವರನ್ನು ಕರೆಯಿಸಿಕೊಂಡು ತಾನು ಸ್ವ ಇಚ್ಚೆಯಿಂದ ಅವರ ಜೊತೆ ಹೋಗಿದ್ದೇನೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಪೆಪ್ಪರ್ ಸ್ಪ್ರೇ ಸಿಂಪಡಿಸಿ, ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ ನನ್ನನ್ನು ಯಾರು ಅಪಹರಿಸಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಇದರಿಂದಾಗಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

English summary
Mother kidnapped daughter in Sirsi, Uttara Kannada. Police found both now twist to kidnap case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X