• search
 • Live TV
ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರಸಿಯ‌ ಮಾರಿಕಾಂಬಾ ದೇವಸ್ಥಾನಕ್ಕೇ ವಂಚನೆ!

|

ಶಿರಸಿ, ಫೆಬ್ರವರಿ 4: ರಾಜ್ಯದ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಾಲಯದ ಪ್ರವೇಶ ದ್ವಾರದ ಮುಂದೆ ಮೆಟಲ್ ಡಿಟೆಕ್ಟರ್ ಅಳವಡಿಸಿಕೊಡುತ್ತೇನೆಂದು ವ್ಯಕ್ತಿಯೋರ್ವರು ದೇವಾಲಯದಿಂದ 1,81,164 ರೂ. ಚೆಕ್ ರೂಪದಲ್ಲಿ ಪಡೆದು ಈವರೆಗೆ ಮೆಟಲ್ ಡಿಟೆಕ್ಟರ್ ಅಳವಡಿಸದೇ ಮೋಸ ಮಾಡಿದ್ದಾರೆಂದು ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಕೋಲಾದ ತೆಂಕಣಕೇರಿ ನಿವಾಸಿಯಾಗಿರುವ ಕುಸುಮಾ ಇನ್ಫೋಟೆಕ್ ಕಂಪನಿ ಮಾಲೀಕ ಶಾಂತರಾಮ ವೆರ್ಣೇಕರ್ ಎನ್ನುವವರ ವಿರುದ್ಧ ದೂರು ದಾಖಲಾಗಿದೆ. ಮಾರಿಕಾಂಬಾ ದೇವಾಲಯದ ಮುಖ್ಯ ಕಾರ್ಯನಿರ್ವಾಹಕ ಚಂದ್ರಕಾಂತ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

ಉತ್ತರಾಖಂಡದಲ್ಲಿ 'ಉತ್ತರ ಕನ್ನಡದ ಸಮಸ್ಯೆ ಮತ್ತು ಪರಿಹಾರೋಪಾಯ’

ದೇವಾಲಯಕ್ಕೆ ಮೆಟಲ್ ಡಿಟೆಕ್ಟರ್ ಅಳವಡಿಸುವುದಕ್ಕಾಗಿ ಟೆಂಡರ್ ಕರೆಯಲಾಗಿತ್ತು. ಕಳೆದ ವರ್ಷ ಫೆ.25ರಂದು ಆರೋಪಿ ದೇವಾಲಯದ ಒಪ್ಪಂದದಂತೆ, ಹಣವನ್ನು ಚೆಕ್ ರೂಪದಲ್ಲಿ ಪಡೆದುಕೊಂಡು ಹೋದವನು ಇದುವರೆಗೂ ಡಿಟೆಕ್ಟರ್ ಅಳವಡಿಸದೇ ದೇವಾಲಯಕ್ಕೆ ಮೋಸ ಮಾಡಿದ್ದಾರೆಂದು ತಿಳಿಸಿದ್ದಾರೆ.

ಶಿರಸಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಮೋಹಿನಿ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

   ರೈತರಿಂದ ಬೃಹತ್ ಪ್ರತಿಭಟನೆಗೆ ಸಜ್ಜು | Oneindia Kannada

   English summary
   Shantaram Varnekar Cheats Rs 1.18 Lakh To Sirsi Marikamba Temple On Promising Of Installing Metal Detector.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X