• search
  • Live TV
ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರಸಿಯ ಪರಿಸರ ತಜ್ಞ ಡಾ.ಶ್ರೀಹರಿಗೆ ಜಪಾನ್ ಸರ್ಕಾರದ ಪ್ರಶಸ್ತಿ

By Mahesh
|

ಶಿರಸಿ, ಜೂನ್ 21: ಭಾರತೀಯ ಕೃಷಿ ಮೈಕ್ರೋಬಯೋಲಾಜಿಸ್ಟ್ ಡಾ.ಶ್ರೀಹರಿ ಚಂದ್ರಘಾಟಗಿ, ಅಧ್ಯಕ್ಷರು ಮತ್ತು ಸಿಇಒ, ಎಕೋಸೈಕಲ್ ಕಾರ್ಪೋರೇಷನ್ ಅವರಿಗೆ ಜಪಾನ್ ಸರ್ಕಾರ 2017ನೇ ಸಾಲಿನ ಪರಿಸರ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.

ಪರಿಸರ ಸಂಕ್ಷಣೆಯಲ್ಲಿ ನೂತನ ತಂತ್ರಜ್ಞಾನವನ್ನು ಕಂಡು ಹಿಡಿದಿರುವುದಕ್ಕೆ ಪ್ರಶಸ್ತಿ ಲಭಿಸಿದೆ. ಸಚಿವಾಲಯದ ಪರಿಸರ ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ವಿದೇಶಿ ಪ್ರಜೆ ಇವರಾಗಿದ್ದಾರೆ. ಪರಿಸರ ವಲಯದಲ್ಲಿ ಪ್ರತಿ ವರ್ಷ ಜಪಾನ್ ಪರಿಸರ ಸಚಿವಾಲಯ, ಪರಿಸರ ಅಧ್ಯಯನ ರಾಷ್ಟ್ರೀಯ ಸಂಸ್ಥೆ (ಎನ್‍ಐಇಎಸ್) ಜಪಾನ್ ಹಾಗೂ ನಿಕನ್ ಕೊಗ್ಯೂ ಶಿನಬೂನ್ (ಮಾಧ್ಯಮ ಸಮೂಹ) ಕೊಡುವ ಅತ್ಯುನ್ನತ ಗೌರವ ಸಚಿವಾಲಯ ಪ್ರಶಸ್ತಿಯಾಗಿದೆ.

Indian Agricultural Microbiologist bags Japan’s Ministry of Environment Award for 2017

ಜಪಾನ್ ಪರಿಸರ ಖಾತೆಯ ರಾಜ್ಯ ಸಚಿವ ಸೆಕಿ ಯೊಶಿಹಿರೋ ಟಿಕಿಯಾದ ಕಸುಮೆಗಸೆಕಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಇಮಿಜು ಹರುಹಿರೋ ಅಧ್ಯಕ್ಷರು ನಿಕನ್ ಕೊಗ್ಯೂ ಶಿನಬೂನ್, ವಟನಟಿ ಅಧ್ಯಕ್ಷರು, ಎಸ್‍ಪಿಇಎಸ್ ಸೇರಿದಂತೆ ಜಪಾನ್ ವಿಶ್ವವಿದ್ಯಾನಿಲಯಗಳ ಕೆಲ ಪ್ರಖ್ಯಾತ ವಿಜ್ಞಾನಿಗಳು, ಉಪಸ್ಥಿತರಿದ್ದರು.

ಶ್ರೀಹರಿ ಚಂದ್ರಘಾಟಗಿ ವ್ಯಕ್ತಿಚಿತ್ರ: ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಡಾ. ಶ್ರೀಹರಿ ಚಂದ್ರಘಾಟಗಿ ಸುಮಾರು ಎರಡು ದಶಕಗಳಿಂದ ಟೊಕಿಯೊದಲ್ಲಿ ನೆಲೆಸಿದ್ದಾರೆ. ಪರಿಸರ ಬಯೊಟೆಕ್ನಾಲಜಿ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.

Indian Agricultural Microbiologist bags Japan’s Ministry of Environment Award for 2017

ಸುಸಂಸ್ಕೃತ ಕುಟುಂಬದಲ್ಲಿ ಜನನ. ಡಾ.ಶ್ರೀಹರಿ ತಂದೆ ವಾಯುಪಡೆ ಅಧಿಕಾರಿ. 1961 ರಲ್ಲಿ ಗೋವಾ ವಿಮೋಚನೆ ಮತ್ತು 1971 ರಲ್ಲಿ ಬಾಂಗ್ಲಾ ವಿಮೋಚನೆಯಲ್ಲಿ ಭಾಗಿಯಾಗಿದ್ದರು. ತಾಯಿ ಶಿಕ್ಷಕಿ. ಸಿದ್ದಾಪುರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಶ್ರೀಹರಿ, 1992 ರಲ್ಲಿ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು.

ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಆಗ್ರಿಕಲ್ಚರಲ್ ರಿಸರ್ಚನಿಂದ ಜೂನಿಯರ್ ರಿಸರ್ಚ್ ಸ್ಕಾಲರ್ ಶಿಪ್ ಪಡೆದು ಅದೇ ಕಾಲೇಜಿನಲ್ಲಿ 1994 ರಲ್ಲಿ ಸ್ನಾತಕೋತ್ತರ ಹಾಗೂ 1997 ರಲ್ಲಿ ಕೃಷಿ ಮೆಕ್ರೊಬಾಯಾಲಜಿಯಲ್ಲಿ ಪಿಎಚ್‍ಡಿ ಹಾಗೂ ಸ್ವರ್ಣ ಪದಕ ಪಡೆದರು.

1998ರಲ್ಲಿ ಮಾನ್‍ಬುಶೊ ಫೆಲೋಶಿಪ್ ಶಿಕ್ಷಣ ಸಚಿವಾಲಯ, ಜಪಾನ್ ಪಡೆದು ಶಿಬಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿ ಸೇರಿದರು. 2000 ರಲ್ಲಿ ಎಕೊಸೈಕಲ್ ಕಾರ್ಪೊರೇಷನ್ ವಿಜ್ಞಾನಿಯಾಗಿ ವೃತ್ತಿಪರ ಜಿವನ ಆರಂಭಿಸಿದರು. 2005 ರಲ್ಲಿ ಎಕೊಸೈಕಲ್‍ನ ಅಧ್ಯಕ್ಷ ಮತ್ತು ಸಿಇಓ ಆದರು.

ಒಂದು ಡಜನ್‍ಗಿಂತ ಹೆಚ್ಚು ಪೇಟೆಂಟ್ ಹೊಂದಿದ್ದಾರೆ. ಕೃಷಿ ಮೈಕ್ರೊಬಯೋಲಾಜಿಸ್ಟ್ ಆಗಿರುವ ಡಾ. ಶ್ರೀಹರಿ, ಪರಿಸರ ಸಂರಕ್ಷಣೆಗಾಗಿ ಸ್ವಾಭಾವಿಕ ಮೈಕ್ರೊಆರ್ರ್ಗಾನಿಸಂ ಕಂಡುಹಿಡಿದು ಅಭಿವೃದ್ಧಿಪಡಿಸಿದ್ದಾರೆ. ಪೇಟೆಂಟ್ ಹೊಂದಿರುವ ತಂತ್ರಜ್ಞಾನವನ್ನು ಜಪಾನ್, ತೈವಾನ್, ಥೈಲೆಂಡ್, ಭಾರತ, ಚೀನಾ ಹಾಗೂ ಅಮೆರಿಕದಲ್ಲಿ ಅಳವಡಿಸಲಾಗಿದೆ. ಇವು ದುಬಾರಿಯಲ್ಲದ ಪರ್ಯಾಯ ಪರಿಹಾರವಾಗಿದೆ.

English summary
Indian Agricultural Microbiologist bags Japan’s Ministry of Environment Award for 2017. A native of Siddapura, Uttara Kannada District, Karnataka, Dr. Shrihari Chandraghatgi bags the award for developing innovative & cutting edge technologies that are the cheapest alternatives of environmental remediation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X