ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಟಲಿ ರಕ್ತದವರು ಭಾರತ ದೇಶವನ್ನಾಳಬಾರದು: ಅನಂತ್‌ಕುಮಾರ್ ಹೆಗಡೆ

|
Google Oneindia Kannada News

ಶಿರಸಿ, ಫೆಬ್ರವರಿ 23: ಭಾರತ ದೇಶವನ್ನು ಭಾರತೀಯ ರಕ್ಷವೇ ಆಳಬೇಕು, ಇಟಲಿಯ ವಿದೇಶಿ ರಕ್ತ ಆಳುವುದು ಬೇಡ ಎಂದು ಕೇಂದ್ರ ಬಿಜೆಪಿ ಸಚಿವ ಅನಂತ್ ಕುಮಾರ್ ಹೆಗಡೆ ಆಕ್ರೋಶ ಭರಿತರಾಗಿ ಹೇಳಿದ್ದಾರೆ.

ಸಿದ್ದಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಷ್ಟುವರ್ಷ ನಮ್ಮನ್ನಾಳಿದ ಕಾಂಗ್ರೆಸ್ ದಿವಾಳಿ ಆಗಬೇಕು, ಆ ರೀತಿ ಅವರು ಈ ಚುನಾವಣೆಯಲ್ಲಿ ಸೋಲಬೇಕು ಎಂದು ಅವರು ಹೇಳಿದರು.

ಅನಂತ್‌ಕುಮಾರ್ ಹೆಗಡೆಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ ಅನಂತ್‌ಕುಮಾರ್ ಹೆಗಡೆಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

ಇಂದು ಎಲ್ಲರೂ ವೋಟಿಗಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಮಸೀದಿ ಚರ್ಚ್​ಗೆ ಹೋಗುವವರು ದೇವಸ್ಥಾನಕ್ಕೆ ಹೋಗಿ ನಾನು ಹಿಂದು ಎನ್ನುತ್ತಿದ್ದಾರೆ. ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹಿಂದೂ ಇದು ಜಗತ್ತಿನಲ್ಲಿ ಸಿಗದ ಹೈಬ್ರೀಡ್ ಬೀಜ, ಎಂದು ಪರೋಕ್ಷವಾಗಿ ರಾಹುಲ್ ಧರ್ಮವನ್ನು ಟೀಕಿಸಿದ ಅವರು ಅಮ್ಮ ಅಪ್ಪನ ಪರಿಚಯ ಇಲ್ಲದವರು ಇಂದು ದೇವರ ಪೂಜೆ ಮಾಡುತ್ತಿದ್ದಾರೆ. ಇಂತಹ ಹೈಬ್ರೀಡ್ ಬೀಜ ಬೇಕು ಎಂದರೆ ಅದು ಕಾಂಗ್ರೆಸ್​ನಲ್ಲಿ ಮಾತ್ರ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

India shoud be in hands of Indian not in Italians: Anant kumar hegde

60 ವರ್ಷ ಆಳಿದ ಸರ್ಕಾರದಲ್ಲಿ ನಮ್ಮ ಸರ್ಕಾರದಲ್ಲಿ ವ್ಯತ್ಯಾಸವಿದೆ, ಅರವತ್ತು ನಮ್ಮನ್ನಾಳಿದ ಸರ್ಕಾರ ನಮ್ಮನ್ನು ಜೂನಲ್ಲಿ ಇಟ್ಟ ಪ್ರಾಣಿಗಳಂತೆ ನಡೆಸಿಕೊಂಡಿದ್ದಾರೆ. ಜನರನ್ನು ಭಿಕ್ಷುಕರನ್ನಾಗಿ ನೋಡಿದ್ದಾರೆ, ಜನರ ಭಾವನೆಗಳ ಜೊತೆ ಚಕ್ಕಂದ ಆಡಿದ್ದಾರೆ ಎಂದು ಅವರು ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಬೆದರಿಕೆ ಕರೆಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಬೆದರಿಕೆ ಕರೆ

ದೇಶ ಎಲ್ಲರಿಗೂ ಸೇರಿದ್ದು, ದೇಶದ ಬಗ್ಗೆ ನಮ್ಮ ಅನಿಸಿಕೆ ಹಂಚುವ ದೃಷ್ಟಿಯಿಂದ ಈ ಸಂವಾದ ನಡೆಸಲಾಗುತ್ತಿದೆ. ಐದು ವರ್ಷದಲ್ಲಿ ನಾವು ಮಾಡಿದ ಸಾಧನೆಯನ್ನು ಜನರ ಮುಂದೆ ತೆರೆದಿಡಬೇಕಿದೆ ಅವರು ಹೇಳಿದರು.

English summary
BJP minister Anant Kumar Hegde says, India should rule by Indians not by Italians. He also said every one telling that 'i am hindu' for vote
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X