ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸದ ಹೆಗಡೆಗೆ ಮತ್ತೆ ಜೀವ ಬೆದರಿಕೆ: ಆಪ್ತ ಸಹಾಯಕನಿಂದ ದೂರು

By ಶಿರಸಿ ಪ್ರತಿನಿಧಿ
|
Google Oneindia Kannada News

ಶಿರಸಿ , ಏಪ್ರಿಲ್ 07; ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೋರ್ವ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಸಂಸದರ ಆಪ್ತ ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏಪ್ರಿಲ್ 5ರ ಮುಂಜಾನೆ ಎರಡು ಘಂಟೆ ವೇಳೆಗೆ ಸಂಸದರ ಮನೆಯ ಲ್ಯಾಂಡ್ ಲೈನ್‌ಗೆ ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿದ್ದಾನೆ. ಮೊದಲು ರಿಂಗ್ ಮಾಡಿ ಕಟ್ ಮಾಡಿದ್ದು, ನಂತರ ಕರೆಯನ್ನ ಸ್ವತಃ ಸಂಸದರೇ ಸ್ವೀಕರಿಸಿದ್ದರು.

ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ ಸಂಸದ ಅನಂತಕುಮಾರ ಹೆಗಡೆ? ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ ಸಂಸದ ಅನಂತಕುಮಾರ ಹೆಗಡೆ?

ಈ ಸಂದರ್ಭದಲ್ಲಿ ಕರೆ ಮಾಡಿದ ಅನಾಮಧೇಯ ವ್ಯಕ್ತಿ, ನೀನು ಎಂಪಿ ಅನಂತಕುಮಾರ್ ಹೆಗಡೆ ಅಲ್ವಾ? ನೀನು ಈ ಬಾರಿ ಏನು ಮಾಡುತ್ತೀಯಾ? ಹಿಂದಿನ ಬಾರಿ ಫೋನ್ ಮಾಡಿದಾಗ ಪೊಲೀಸರಿಗೆ ದೂರು ನೀಡಿದ್ದೀಯಾ. ಪತ್ರಿಕೆಗಳಲ್ಲಿ ಸುದ್ದಿ ಸಹ ಆಗಿತ್ತು. ಈಗ ನಿನ್ನನ್ನು ಏನು ಮಾಡುತ್ತೇನೆ ನೋಡು. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಆನಂದ್ ಅಸ್ನೋಟಿಕರ್ ಮಾನಸಿಕ ಆರೋಗ್ಯ ಪ್ರಶ್ನಿಸಿದ ಬಿಜೆಪಿ! ಆನಂದ್ ಅಸ್ನೋಟಿಕರ್ ಮಾನಸಿಕ ಆರೋಗ್ಯ ಪ್ರಶ್ನಿಸಿದ ಬಿಜೆಪಿ!

 BJP MP Anant Kumar Hegde Gets Threatening Phone Calls

ಸುಮಾರು ಎರಡು ನಿಮಿಷಗಳ ಕಾಲ ಮಾತನಾಡಿದ್ದು, ಅದರ ನಂತರ ಕೆಲವು ಮಾತುಗಳು ಸ್ಪಷ್ಟವಾಗಿ ಕೇಳಿಸದೇ ಫೋನ್ ಖಡಿತಗೊಂಡಿದೆ. ಈ ಬಗ್ಗೆ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಮಾರುಕಟ್ಟೆ ಠಾಣೆಗೆ ಸಂಸದರ ಪರವಾಗಿ ದೂರನ್ನು ನೀಡಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಇಸ್ಲಾಂ ಕುರಿತ ಹೇಳಿಕೆ; ಅನಂತಕುಮಾರ್ ಹೆಗಡೆ ಆರೋಪ ಮುಕ್ತ ಇಸ್ಲಾಂ ಕುರಿತ ಹೇಳಿಕೆ; ಅನಂತಕುಮಾರ್ ಹೆಗಡೆ ಆರೋಪ ಮುಕ್ತ

ಈ ಹಿಂದೆ ಸಹ ಕರೆ ಬಂದಿತ್ತು; ಅನಂತಕುಮಾರ್ ಹೆಗಡೆಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆ ಸಹ ಹಲವು ಬಾರಿ ಕರೆಗಳು ಬಂದಿದ್ದು, ಸಂಸದರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.

ಅಲ್ಲದೇ ಒಮ್ಮೆ ಅನಾಮಧೇಯ ಬೆದರಿಕೆ ಪತ್ರ ಸಹ ಬಂದಿದ್ದು, ಆಗ ಸಹ ದೂರು ದಾಖಲಿಸಲಾಗಿತ್ತು. ಇಂಟರ್‌ನೆಟ್ ಕರೆ ಅಥವಾ ವಿದೇಶಿ ನಂಬರ್‌ನಿಂದ ಕರೆ ಬರುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕೇವಲ ದೂರು ದಾಖಲಿಸಿಕೊಳ್ಳುವುದನ್ನು ಮಾತ್ರ ಮಾಡದೇ ತನಿಖೆಯನ್ನು ಮಾಡಿ, ಕರೆ ಮಾಡಿದವರ ಬಂಧನವನ್ನು ಮಾಡಬೇಕಾಗಿದೆ.

Recommended Video

ರಸ್ತೆಗಿಳಿಯದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ..! ಸಂಚಾರಕ್ಕೆ ದುಪ್ಪಟ್ಟು ಹಣ ನೀಡಬೇಕಾದ ಸ್ಥಿತಿಯಲ್ಲಿ ಸಾರ್ವಜನಿಕರು| Oneindia Kannada

ಸಂಸದರಿಗೆ ಹಲವು ಬೆದರಿಕೆ ಕರೆ ಬರುತ್ತಿದ್ದರೂ ಪೊಲೀಸರು ಆರೋಪಿಗಳನ್ನು ಹಿಡಿಯುತ್ತಿಲ್ಲ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.

English summary
Uttara Kannada BJP MP Anant Kumar Hegde claimed receiving multiple threatening and abusive phone calls. Complaint field in Sirsi market police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X