ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಸಿಕಾಂತ್ ಸೆಂಥಿಲ್ ಪಾಕಿಸ್ತಾನಕ್ಕೆ ತೆರಳಲಿ ಎಂದ ಅನಂತ್ ಕುಮಾರ್ ಹೆಗಡೆ

|
Google Oneindia Kannada News

ಶಿರಸಿ, ಸೆಪ್ಟೆಂಬರ್ 09: ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ, ದಕ್ಶಃಇಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಪಾಕಿಸ್ತಾನಕ್ಕೆ ತೆರಳಲಿ ಎಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಕಿಡಿಕಾರಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಎಂದಿಗೂ ಮುಂದಿರುವ ಹೆಗಡೆ, 'ಇಲ್ಲೇ ಇದ್ದು ದೇಶ ಒಡೆಯುವ ಬದಲು ಪಾಕಿಸ್ತಾನಕ್ಕೆ ತೆರಳಿ, ಇದರಲ್ಲಾದರೂ ನಿಯತ್ತು ತೋರಿ' ಎಂದು ಟ್ವೀಟ್ ಮಾಡಿದ್ದಾರೆ.

"ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿದೆ; ಇಲ್ಲಿರಲಾರೆ" ಎಂದ ಸಸಿಕಾಂತ್ ಸೆಂಥಿಲ್

"ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು! ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು! ಇದರಲ್ಲಾದರು ನಿಯತ್ತು ತೋರಿಸಲಿ" ಎಂದು ಹೆಗಡೆ ಟ್ವೀಟಿಸಿದ್ದಾರೆ.

Anant Kumar Hegdes controversial statement on Sasikant Senthil

ಸೆಪ್ಟೆಂಬರ್ 6 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ತಮ್ಮ ವೈಯಕ್ತಿಕ ನಿರ್ಧಾರ ಎಂದು ಮೊದಲಿಗೆ ಹೇಳಿದ್ದರು. ಆದರೆ ನಂತರ "ಕೇಂದ್ರ ಸರ್ಕಾರದ ವಿರುದ್ಧ ಸಿಡಿದೇ ನಾನು ರಾಜೀನಾಮೆ ನೀಡಿದ್ದೇನೆ. ನನಗೆ ಕಾಶ್ಮೀರ, ತ್ರಿವಳ ತಲಾಖ್, ರಾಮಮಂದಿರ ಮುಂದಾದ ಸೂಕ್ಷ್ಮ ವಿಷಯಗಳಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಸಹಿಸಿಕೊಳ್ಳುವುದಕ್ಕಾಗತ್ತಿಲ್ಲ" ಎಂದು ಸೆಂಥಿಲ್ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿತ್ತು.

ಫ್ಯಾಸಿಸ್ಟ್ ದಾಳಿ ಸ್ಪಷ್ಟ: ರಾಜೀನಾಮೆಗೆ ಕಾರಣ ನೀಡಿದ ಸಸಿಕಾಂತ್ ಸೆಂಥಿಲ್ಫ್ಯಾಸಿಸ್ಟ್ ದಾಳಿ ಸ್ಪಷ್ಟ: ರಾಜೀನಾಮೆಗೆ ಕಾರಣ ನೀಡಿದ ಸಸಿಕಾಂತ್ ಸೆಂಥಿಲ್

ಕೇಂದ್ರ ಸರ್ಕಾರ ಫ್ಯಾಸಿಸ್ಟ್ ಎಂದು ಈತ ತೀರ್ಪು ನೀಡುವುದಕ್ಕೆ ಸಾಧ್ಯ ಎಂದಾದರ, ಈತನನ್ನು 'ಪೇಯ್ಡ್ ಗದ್ದರ್' ಎಂದು ಕರೆಯುವುದಕ್ಕೆ ನಮಗೂ ಸ್ವಾತಂತ್ರ್ಯವಿದೆ. ತನಗೆ ಹಣ ಸಂದಾಯ ಮಾಡುವವರ ಪೇಯ್ಡ್ ಗದ್ದರ್ ಅವರು" ಎಂದು ಹೆಗಡೆ ಸೆಂಥಿಲ್ ಅವರನ್ನು ನಿಂದಿಸಿದ್ದಾರೆ.

English summary
Uttara Kannada BJP MP Anant Kumar Hegde blames IAS officer Sasikant Senthil who offered resignation recently
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X