ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಗರಮಾಲಾ: ಯೋಜನೆ ತ್ವರಿತಗೊಳಿಸಲು ಕೇಂದ್ರ ಸಚಿವರಿಗೆ ಸಂಸದ ಅನಂತಕುಮಾರ ಹೆಗಡೆ ಪತ್ರ

By ಕಾರವಾರ ಪ್ರತಿನಿಧಿ
|
Google Oneindia Kannada News

ಶಿರಸಿ, ಅಕ್ಟೋಬರ್ 03: ಭಾರತದ ಸಾಗರ ವಲಯವನ್ನು ಬಲಪಡಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿ ಯೋಜನೆಗಳಿಗೆ ಅನುಮೋದನೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಕೇಂದ್ರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನವಾಲರವರಿಗೆ ಸಂಸದ ಅನಂತಕುಮಾರ ಹೆಗಡೆ ಪತ್ರ ಮುಖೇನ ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ, ಕಡಲ ಅಭಿವೃದ್ಧಿ, ಬೃಹತ್ ಸರಕು ಸಾಗಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 4 ಬೃಹತ್ ಯೋಜನೆಗಳ ಕುರಿತಂತೆ ಸಮಗ್ರ ಕಾರ್ಯಸಾಧ್ಯತಾ ವರದಿಗಳನ್ನು (ಡಿಎಫ್‌ಆರ್) ಸಾಗರಮಾಲಾ ಸೆಲ್ ಮತ್ತು ಸಾಗರಮಾಲಾ ಅಭಿವೃದ್ಧಿ ಕಂಪನಿ ಲಿಮಿಟೆಡ್ (ಎಸ್‌ಡಿಸಿಎಲ್)ಗೆ ಸಲ್ಲಿಸಲಾಗಿದೆ. ಇನ್ನೂ ಎರಡು ಅಭಿವೃದ್ಧಿ ಯೋಜನೆಗಳಿಗಾಗಿ ಸಮಗ್ರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬಂದರು ಯೋಜನೆಗಳಿಗೆ ಭಾರತದಿಂದ 82 ಬಿಲಿಯನ್ ಡಾಲರ್ ಹೂಡಿಕೆ: ಮೋದಿಬಂದರು ಯೋಜನೆಗಳಿಗೆ ಭಾರತದಿಂದ 82 ಬಿಲಿಯನ್ ಡಾಲರ್ ಹೂಡಿಕೆ: ಮೋದಿ

ಈ ಯೋಜನೆಗಳು ಕಾರವಾರ ಬಂದರುಗಳಲ್ಲಿ ಅಗತ್ಯ ಸಲಕರಣೆಗಳನ್ನು ಸ್ಥಾಪಿಸುವುದು, ಕಾರವಾರ ಬಂದರಿನ ಯಾಂತ್ರೀಕರಣ, ಸೀಪ್ಲೇನ್ ಸೌಲಭ್ಯಗಳು ಮತ್ತು ಜಲ ಮಾರ್ಗ ಅಭಿವೃದ್ಧಿಯಂತಹ ಘಟಕಗಳಿಗೆ ಮಾತ್ರ ಸೀಮಿತವಾಗಿರದೇ, ಆರ್ಥಿಕ ನೆರವಿನ ಕುರಿತ ಒಪ್ಪಂದಗಳನ್ನು ಒಳಗೊಂಡಿರುವಂಥ ಪ್ರಸ್ತಾವನೆಗಳನ್ನು ಸಾಗರಮಾಲಾ ಸೆಲ್‌ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

 Anant Kumar Hegde Letter To Union Minister To Expedite Sagara Mala Project

ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಸ್ಥಳೀಯ ಜನಸಂಖ್ಯೆ ಹಾಗೂ ಸರಿಸುಮಾರು 30 ಲಕ್ಷ ಪ್ರವಾಸಿಗರನ್ನು ಸಂಪರ್ಕಿಸುವ ಜೊತೆಗೆ ಸಾರಿಗೆ ಮತ್ತು ಬೃಹತ್ ಸರಕು ಸಾಗಾಣಿಕೆ ಅಗತ್ಯತೆಗಳನ್ನು ಪೂರೈಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇದಲ್ಲದೆ, ಅಭಿವೃದ್ಧಿಪಡಿಸಿದ ಸೌಲಭ್ಯಗಳು ಪಶ್ಚಿಮ ಕರಾವಳಿಯಲ್ಲಿ ಕಡಲ ಕಾರ್ಯಾಚರಣೆಗಳಿಗೆ ಪ್ರಮುಖ ಮುಖ್ಯ ಭೂಮಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಸಂಸದ ಹೆಗಡೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆ

ಸ್ಥಳೀಯರ ವಿರೋಧದ ಯೋಜನೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಗರಮಾಲಾಕ್ಕೆ ಕಾರವಾರದಲ್ಲಿ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಹೈಕೋರ್ಟ್‌ನಲ್ಲಿ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘಗಳ ಒಕ್ಕೂಟ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿದ್ದ‌ ನ್ಯಾಯಪೀಠ, ವಾಯು ಮತ್ತು ಜಲ ಮಾಲಿನ್ಯದ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನುಗಳ ನಿಬಂಧನೆಗಳನ್ನು ಅನುಸರಿಸುವ ಮೂಲಕ ಒಂದು ತಿಂಗಳೊಳಗೆ ಸಿಎಫ್‌ಇ ನೀಡಲು ಹೊಸ ನಿರ್ಧಾರವನ್ನು ತೆಗೆದುಕೊಳ್ಳಲು ಕೆಎಸ್‌ಪಿಸಿಬಿಗೆ ಅನುಮತಿ ನೀಡಿ, ಸ್ಥಳೀಯರ ವಿರೋಧ‌ ನಡುವೆಯೂ ಸಾಗರಮಾಲಾ‌ ಯೋಜನೆಯ ಕಾಮಗಾರಿಗಳಿಗೆ ಭಾಗಶಃ ಗ್ರೀನ್ ಸಿಗ್ನಲ್ ನೀಡಿತ್ತು.

 Anant Kumar Hegde Letter To Union Minister To Expedite Sagara Mala Project

ಸಾಗರಮಾಲಾ ಅಡಿಯಲ್ಲಿ ಕಾರವಾರದ ಬಂದರಿನಲ್ಲಿ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಯೋಜನೆಗೆ 274 ಕೋಟಿ ರೂ. ವೆಚ್ಚದಲ್ಲಿ ಬೈತಖೋಲ್ ವಾಣಿಜ್ಯ ಬಂದರಿನ 250 ಮೀಟರ್ ಜಟ್ಟಿ ಹಾಗೂ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು 2019ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಕಾಮಗಾರಿಗೆ ಮುಂದಾಗುತ್ತಿದ್ದಂತೆ ಮೀನುಗಾರರು ತೀವ್ರ ಸ್ವರೂಪದಲ್ಲಿ ಕಾರವಾರದಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಯೋಜನೆಯಿಂದಾಗಿ ತಮ್ಮ ಸ್ಥಳ ಕಳೆದುಕೊಳ್ಳುವ ಜೊತೆ ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಮೀನುಗಾರರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಜೊತೆಗೆ ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಿ, ಮೀನುಗಾರರ ಉದ್ಯೋಗ ಕೂಡ ಕಡಿತವಾಗುತ್ತದೆ ಎನ್ನುವುದು ಮೀನುಗಾರರ ಆತಂಕವಾಗಿದೆ. ಆದರೆ ಇದೇ ಯೋಜನೆಯನ್ನು ಇದೀಗ ತ್ವರಿಗೊಳಿಸಲು ಸಂಸದ ಅನಂತಕುಮಾರ ಹೆಗಡೆ ಕೇಂದ್ರ ಸಚಿವರಿಗೆ ಪತ್ರ ಬರೆದು ಆಗ್ರಹಿಸುವ ಮೂಲಕ ಮತ್ತೆ ಮೀನುಗಾರರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.

Recommended Video

ಶಾರುಖ್ ಪುತ್ರನನ್ನ ಬಿಡಿಸಲು ಸಲ್ಮಾನ್ ಖಾನ್ ಮಾಡ್ತಿರೋ ಸಹಾಯ ಏನು? | Oneindia Kannada

English summary
MP Anant Kumar Hegde written letter to union minister Sarbananda Sonawal to speed up the Sagara Mala project
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X