ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊನ್ನಾವರ ಗಲಭೆಯಲ್ಲಿ ಕಾಣೆಯಾಗಿದ್ದ ಅಬ್ದುಲ್ ಕಂಡ ಹಿಂದೂಗಳ ಎರಡು ಮುಖ

By Manjunatha
|
Google Oneindia Kannada News

ಹೊನ್ನಾವರ, ಡಿಸೆಂಬರ್ 13: ಹೊನ್ನಾವರದಿಂದ ಕಾಣೆಯಾಗಿದ್ದ ಅಬ್ದುಲ್ ಗಫೂರ್ 4 ದಿನಗಳ ನಂತರ ಪತ್ತೆಯಾಗಿದ್ದು ಹಳೆಯ ಸುದ್ದಿ ಆದರೆ ಆ 3 ರಾತ್ರಿ 4 ಹಗಲು ಆತ ಅನುಭವಿಸಿದ ಭಯ, ಕಂಡ ಮಾನವೀಯ ಮುಖದ ಕತೆ ಬಹಳ ಆಸಕ್ತಿಕರವಾದುದು. ಹೊತ್ತಿ ಉರಿದ ಉತ್ತರ ಕನ್ನಡದ ಮಾನವೀಯ ಮುಖ ಮತ್ತು ಅದೇ ಸಮಯಕ್ಕೆ ಕ್ರೂರ ಮುಖದ ದರ್ಶನವನ್ನು ಮಾಡಿದ್ದಾನೆ ಅಬ್ದುಲ್ ಗಫೂರ್.

ಡಿಸೆಂಬರ್ 08ರಂದು ಹೊನ್ನಾವರದಿಂದ ಶಿರಸಿಗೆ ಲಾರಿ ಓಡಿಸಿಕೊಂಡು ಹೊರಟಿದ್ದ ಅಬ್ದುಲ್ ಗಪೂರ್‌ನಿಗೆ ಆತನ ಲಾರಿ ಮಾಲೀಕನಿಂದ ಕರೆ ಬರುತ್ತದೆ, ಪರೇಶ ಸಾವಿನಿಂದಾಗಿ ಹೊನ್ನಾವರ ಹೊತ್ತಿ ಉರಿಯುತ್ತಿದೆ ವಾಪಾಸು ಬಂದುಬಿಡು ಅನ್ನುತ್ತಾರೆ ಲಾರಿ ಮಾಲೀಕ. ಆದರೆ ಅದಾಗಲೇ ತುಂಬಾ ದೂರ ಬಂದಿದ್ದ ಅಬ್ದುಲ್ ರಸ್ತೆ ಬದಲಿಸಿ ಸುತ್ತು ಹಾದಿಯ ಮೂಲಕ ಲಾರಿ ಚಲಾಯಿಸುತ್ತಾರೆ.

ಹೊನ್ನಾವರ: ಕಾಣೆಯಾಗಿದ್ದ ಅಬ್ದುಲ್ ಗಫೂರ್ ಪತ್ತೆ ಹೊನ್ನಾವರ: ಕಾಣೆಯಾಗಿದ್ದ ಅಬ್ದುಲ್ ಗಫೂರ್ ಪತ್ತೆ

Abdul Gaffur the man who goes missing in Honnavara riots tells story about his missing

ಆದರೆ ವಿಧಿ ಅಲ್ಲಿಯೂ ಅವರ ಬೆನ್ನು ಬಿಟ್ಟಿಲ್ಲ. ಕರ್ವ ಕ್ರಾಸ್ ಬಳಿ ಬರುವಷ್ಟರಲ್ಲಿ ಹಣೆಗೆ ಕೇಸರಿ ಪಟ್ಟಿ ಕಟ್ಟಿದ್ದ, ಕೈಯಲ್ಲಿ ಕೇಸರಿ ಧ್ವಜ ಹಿಡಿದಿದ್ದ ಸುಮಾರು 30 ಜನ ಯುವಕರ ಗುಂಪು ಅಬ್ದುಲ್ ಲಾರಿಯನ್ನು ಅಡ್ಡಗಟ್ಟಿ ಆತನನ್ನು ಮನಸೋಇಚ್ಛೆ ಥಳಿಸಿದ್ದಾರೆ. ಅವರ ಗುದ್ದಿಗೆ ಆಗಿರುವ ಗಾಯಗಳೂ 6 ದಿನಗಳ ನಂತರವೂ ಅಬ್ದುಲ್ ಬೆನ್ನು, ಹೊಟ್ಟೆ, ಕೆನ್ನೆಗಳ ಮೇಲೆ ಹಾಗೇ ಉಳಿದಿವೆ.

ಶಿವಮೊಗ್ಗ : ಡಿ.14ರಂದು ಸಾಗರ ಬಂದ್, ನಿಷೇಧಾಜ್ಞೆ ಹೇರಿಕೆ ಶಿವಮೊಗ್ಗ : ಡಿ.14ರಂದು ಸಾಗರ ಬಂದ್, ನಿಷೇಧಾಜ್ಞೆ ಹೇರಿಕೆ

ಕೇಸರಿ ಪುಂಡರ ಆವೇಶಕ್ಕೆ ಹೆದರಿದ ಅಬ್ದುಲ್ ಅಲ್ಲಿಂದ ಹೇಗೊ ತಪ್ಪಿಸಿಕೊಂಡು ಗುಡ್ಡ ಇಳಿದು ಓಟ ಕಿತ್ತಿದ್ದಾರೆ, ಅಬ್ದುಲ್ ಬಳಿ ಇದ್ದ ಮೊಬೈಲ್, 18000 ಹಣ ಕೇಸರಿ ಪುಂಡರು ಅದಾಗಲೇ ಕಿತ್ತುಕೊಂಡು ಬಿಟ್ಟಿದ್ದರು, ದೊಣ್ಣೆಗಳಿಂದ ಪೆಟ್ಟುತಿಂದಿದ್ದ ಅಬ್ದುಲ್ ದಿಬ್ಬ ಇಳಿದು ಮುಖ್ಯ ರಸ್ತೆಗೆ ಬಂದಿದ್ದಾರೆ, ಅಷ್ಟರಲ್ಲಿ ಮತ್ತೆ 10 ಜನ ಹಿಂದೂ ಕಾರ್ಯಕರ್ತರ ಗುಂಪು ಎದುರಾಗಿದೆ ಇವರ ಕೈಗೆ ಸಿಕ್ಕರೆ ಜೀವ ಉಳಿಯುವುದೇ ಅನುಮಾನವೆಂದು ಎಣಿಸಿದ ಅಬ್ದುಲ್ ಮತ್ತೆ ಮುಖ್ಯ ರಸ್ತೆ ಬಿಟ್ಟು ಕಾಡಿಗೆ ಬಿದ್ದಿದ್ದಾರೆ.

Abdul Gaffur the man who goes missing in Honnavara riots tells story about his missing

ವಿಪರೀತ ಹೆದರಿದ್ದ ಅಬ್ದುಲ್ ಓಡು-ಓಡುತ್ತಾ ದಿಬ್ಬಣಗಲ್ ಗ್ರಾಮ ತಲುಪಿದ್ದಾರೆ ಅಲ್ಲಿ ಯಾವುದೋ ಮನೆಯ ಮುಂದೆ ಮೋರಿ ಕಂಡು ಜೀವ ಉಳಿಸಿಕೊಳ್ಳಲು ಅದರೊಳಗೆ ಸೇರಿಕೊಂಡು ಬಿಟ್ಟಿದ್ದಾರೆ. ಆ ಡಿಸೆಂಬರ್ 08ರ ರಾತ್ರಿ ಪೂರ್ತಿ ಅಲ್ಲಿಯೇ ಕಳೆದಿದ್ದಾರೆ, ಆದರೆ ಬೆಳಗ್ಗೆ ಹಸಿವೆ ತಾಳಲಾರದೆ ಅಲ್ಲಿಯೇ ಪಕ್ಕದಲ್ಲಿದ್ದ ಹಿಂದೂಗಳೊಬ್ಬರ ಮನೆಗೆ ಹೋಗಿ ಊಟ ಕೇಳಿದ್ದಾರೆ. ಅಬ್ದುಲ್‌ನ ಸ್ಥಿತಿಗೆ ಮರುಗಿದ ಅವರು ಕೂಡಲೇ ಬಿಸ್ಕೆಟ್ ನೀರು ಕೊಟ್ಟಿದ್ದಾರೆ.

ಹೊನ್ನಾವರದಲ್ಲಿ ಡಿ.18ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆಹೊನ್ನಾವರದಲ್ಲಿ ಡಿ.18ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಭಯದಿಂದ ತತ್ತರಿಸಿದ್ದ ಅಬ್ದುಲ್‌ ಗಲಭೆ ಪೂರ್ಣ ಆರುವವರೆಗೆ ಹೊರ ಹೋಗಬಾರದೆಂದು ನಿಶ್ಚಯಿಸಿ ಮೋರಿಯಲ್ಲೇ ಕೂತು ಬಿಟ್ಟಿದ್ದಾರೆ, ಹೊರಗೆ ಬಂದರೆ ಜೀವ ಹೋಗುವುದು ಖಂಡಿತಾ ಎಂದು ಅವರಿಗೆ ಈ ಮುಂಚೆ ತಾವು ತಿಂದಿದ್ದ ಏಟಿನಿಂದ ಅನುಭವಕ್ಕೆ ಬಂದಿತ್ತು ಹಾಗಾಗಿ ಅವರು ಮೋರಿಯಿಂದ ಹೊರಗೆ ಬರುವ ಧೈರ್ಯವೇ ಮಾಡಲಿಲ್ಲವಂತೆ. ಮೋರಿಯಲ್ಲಿದ್ದ ಮೂರೂ ದಿನವೂ ಅದೇ ಗ್ರಾಮದಲ್ಲಿ ಗೇರು ಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ತಿಂಡಿ ಊಟಡ ಕೊಟ್ಟು ಉಪಕರಿಸಿದ್ದಾರೆ. ಆದರೆ ಯಾರಿಗೂ ಧೈರ್ಯವಾಗಿ ಅಬ್ದುಲ್ ರಿಗೆ ಸಹಾಯ ಮಾಡಲು ಅಳುಕು, ನಮ್ಮ ಜೀವಕ್ಕೆಲ್ಲಿ ಆಪತ್ತು ಬರುತ್ತದೋ ಎಂಬ ಭಯ.

Abdul Gaffur the man who goes missing in Honnavara riots tells story about his missing

ಮೂರು ರಾತ್ರಿ ಅಲ್ಲಿಯೇ ಕಳೆದ ಅಬ್ದುಲ್ ನಾಲ್ಕನೇ ದಿನ ಅದೇ ಗ್ರಾಮದಲ್ಲಿ ತಮ್ಮ ಪರಿಚಯದವರನ್ನು ಕಂಡು ಅವರ ಬಳಿ ಮೊಬೈಲ್ ಪಡೆದು ತನ್ನ ಲಾರಿ ಮಾಲೀಕನಿಗೆ ಕರೆ ಮಾಡಿದ್ದಾರೆ, ಕೂಡಲೇ ಆತ ಹೊನ್ನಾವರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ಕೂಡಲೇ ಅಬ್ದುಲ್ ಇದ್ದ ಜಾಗಕ್ಕೆ ಬಂದ ಪೊಲೀಸರು ಅಬ್ದುಲ್‌ನನ್ನು ಕರೆದುಕೊಂಡು ಹೊನ್ನಾವರ ತಾಲ್ಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿಸಿದ್ದಾರೆ.

ಪರೇಶ್ ಮೇಸ್ತ: ಡಿ. 13, 14ರಂದು ರಾಜ್ಯಾದ್ಯಂತ ವಿಎಚ್‌ಪಿ ಪ್ರತಿಭಟನೆಪರೇಶ್ ಮೇಸ್ತ: ಡಿ. 13, 14ರಂದು ರಾಜ್ಯಾದ್ಯಂತ ವಿಎಚ್‌ಪಿ ಪ್ರತಿಭಟನೆ

ಹೇಗೊ ದಿಬ್ಬಣಗಲ್ ಗ್ರಾಮದ ಜನರ ಮಾನವೀಯತೆಯಿಂದ ಅಬ್ದುಲ್ ಸುರಕ್ಷಿತವಾಗಿ ತನ್ನ ಕುಟುಂಬ ಸೇರುವಂತಾಗಿದೆ. ಕೇಸರಿ ಪುಂಡರ ಅಟ್ಟಹಾಸ, ನಿಜದ ಹಿಂದೂಗಳ ಪ್ರೀತಿ, ಮಾನವೀಯತೆ ಎರಡನ್ನೂ ನೋಡಿ ಅಬ್ದುಲ್ ಗಪೂರ್ ನೋಡಿ ಬಂದಿದ್ದಾರೆ.

Abdul Gaffur the man who goes missing in Honnavara riots tells story about his missing

ಕೋಮು ದಳ್ಳುರಿಗೆ ಆಹುತಿಯಾಗಿದ್ದಾನೆಂದು ಕೈಚೆಲ್ಲಿ ಕುಳಿತಿದ್ದ ಅಬ್ದುಲ್ ನ ಮಡದಿ ಮಕ್ಕಳು ಈಗ ಸಂತೋಷದ ನಿಟ್ಟುಸಿರು ಬಿಡುತಿದ್ದಾರೆ.

English summary
Abdul Gaffur the man who goes missing in Honnavara communal riots and then found 4 days after tells story about his 4 days of fear, humanity Sean by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X