ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಸೋಂಕು ಗೆದ್ದುಬಂದ 96 ವರ್ಷದ ಅಜ್ಜಿ!

Array

By ಕಾರವಾರ ಪ್ರತಿನಿಧಿ
|
Google Oneindia Kannada News

ಶಿರಸಿ, ಜೂನ್ 27; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಪ್ರಭಾವ ಕಡಿಮೆಯಾಗುತ್ತಿದೆ. ಕೋವಿಡ್ ಸೋಂಕು ತಗುಲಿದ್ದ 96 ವರ್ಷದ ಅಜ್ಜಿಯೊಬ್ಬರು ಗುಣಮುಖರಾಗಿದ್ದು, ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಷ್ಟು ಆರೋಗ್ಯವಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಕ್ಕಂಬಿ ಸಮೀಪದ ಸಾಲೇಕೊಪ್ಪದ ಕುಳವೆ ಭಟ್ರಮನೆಯ ಹಿರಿಯಾಕೆ ಜಾಹ್ನವಿ ಭಟ್ಟಗೆ ಮೇ 31ರಂದು ಕೋವಿಡ್ ಸೋಂಕು ತಗುಲಿತ್ತು. ಸೋಂಕು ತಗುಲಿದ್ದು ತಿಳಿದಾಗ ಏನಾಗುತ್ತದೋ ಎಂದು ಮನೆಯವರು ಆತಂಕ ಪಟ್ಟಿದ್ದರು.

Stories of strength; ಕೋವಿಡ್ ಗೆದ್ದ ಯುವಕನಿಂದ ಸೋಂಕಿತರ ಸೇವೆStories of strength; ಕೋವಿಡ್ ಗೆದ್ದ ಯುವಕನಿಂದ ಸೋಂಕಿತರ ಸೇವೆ

Old Woman

ಆದರೆ ಅಜ್ಜಿಯೇ ಹೆದರಿರಲಿಲ್ಲ. ಮನೆಯಲ್ಲಿಯೇ ಸೋಂಕಿಗೆ ಚಿಕಿತ್ಸೆ ಪಡೆದರು. ಹತ್ತು ದಿನಗಳ ಹಿಂದೆ ಅಜ್ಜಿಗೆ ಸೋಂಕು ಕಡಿಮೆ ಆಗಿ ಮಾಮೂಲಿ ಆಗಿದ್ದಾರೆ. ವಾಕರ್ ಹಿಡಿದು ಮನೆಯಲ್ಲೇ ಓಡಾಟ ಕೂಡ ಮಾಡುತ್ತಾರೆ. 2014ರಲ್ಲಿ ಅಜ್ಜಿ ಜಾರಿ ಬಿದ್ದ ಪರಿಣಾಮ ಕಾಲಿನ ಮೂಳೆ ಶಸ್ತ್ರಚಿಕಿತ್ಸೆ ನಡೆದು ರಾಡ್ ಹಾಕಿಸಿಕೊಂಡಿದ್ದರು.

Stories of strength: 11 ದಿನದಲ್ಲಿ ಕೋವಿಡ್‌ ಗೆದ್ದ ಕೇರಳದ ಶತಾಯುಷಿ ಮಹಿಳೆ Stories of strength: 11 ದಿನದಲ್ಲಿ ಕೋವಿಡ್‌ ಗೆದ್ದ ಕೇರಳದ ಶತಾಯುಷಿ ಮಹಿಳೆ

ಇವರು ಐದು ತಲೆಮಾರು ಕಂಡ ಅಜ್ಜಿಯಾಗಿದ್ದಾರೆ. ಮನೆಯ ಮಕ್ಕಳಿಗೂ ಸೋಂಕು ತಗುಲಿದ್ದರಿಂದ ಅಜ್ಜಿಯ ಆರೈಕೆ ಮಾಡಲು ಸಮಸ್ಯೆಯೂ ಆಗಲಿಲ್ಲ. ಅಜ್ಜಿಯ ಲವಲವಿಕೆ, ಯಾವುದಕ್ಕೂ ಹೆದರಬಾರದು ಎನ್ನುವ ಗಟ್ಟಿತನ ನಮಗೆ ಸ್ಫೂರ್ತಿ ಎನ್ನುತ್ತಾರೆ ಮನೆಯವರು.

ಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿ

Recommended Video

DKS ಬಿಜೆಪಿಯವರಿಗೆ ಕುರ್ಚಿ ಮುಖ್ಯ , ಜನ ಅಲ್ಲಾ! | Oneindia Kannada

ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 62 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 1061 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

English summary
A 96-year-old woman from Sirsi taluk of Uttara Kannada district recovered from the Coronavirus. Woman get 10 days treatment at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X