ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರ್ ಪ್ರಯಾಣಕ್ಕೆ ಕೊವಿಡ್-19 ಡಿಜಿಟಿಲ್ ಪಾಸ್‌ಪೋರ್ಟ್

|
Google Oneindia Kannada News

ನವದೆಹಲಿ, ಏಪ್ರಿಲ್ 05: ಕೊರೊನಾವೈರಸ್ ನೆಗೆಟಿವ್ ಪ್ರಮಾಣಪತ್ರ, ಲಸಿಕೆ ಪಡೆದ ಡಿಜಿಟಲ್ ಪ್ರಮಾಣಪತ್ರ(ಡಿಜಿಟಲ್ ಪಾಸ್ ಪೋರ್ಟ್) ಹೊಂದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರಕ್ಕೆ ಸಿಂಗಾಪುರ್ ಸರ್ಕಾರ ಮೇ ತಿಂಗಳಿನಿಂದ ಅನುಮತಿ ನೀಡಲಿದೆ.

ಸಿಂಗಾಪುರ್ ಪ್ರಯಾಣ ಆರಂಭಕ್ಕೂ ಮೊದಲು ವಿಮಾನ ನಿಲ್ದಾಣಗಳಲ್ಲಿ ಪ್ರಯೋಗಾಲಯಗಳಿಂದ ಪಡೆದ ಡಿಜಿಟಲ್ ಪ್ರಮಾಣಪತ್ರ ತೋರಿಸಬೇಕಾಗುತ್ತದೆ. ಡಿಜಿಟಲ್ ಸರ್ಟಿಫಿಕೇಟ್ ಹೊಂದಿರುವವರ ಪ್ರಯಾಣಕ್ಕೆ ಅನುಮತಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದ ಮೊದಲ ದೇಶವಾಗಿದೆ.

ಕೊರೊನಾ ಕಾಟದ ನಡುವೆ ಜಾರಿಯಾಗುತ್ತಾ ಸಂಪೂರ್ಣ ಲಾಕ್‌ಡೌನ್?ಕೊರೊನಾ ಕಾಟದ ನಡುವೆ ಜಾರಿಯಾಗುತ್ತಾ ಸಂಪೂರ್ಣ ಲಾಕ್‌ಡೌನ್?

ಡಿಜಿಟಲ್ ಪಾಸ್ ಅನ್ನು ಸಿಂಗಾಪುರ್ ವಿಮಾನಯಾನ ಪರೀಕ್ಷಿಸಲಿದೆ. ಇದರ ಜೊತೆ ಎಮಿರೇಟ್ಸ್, ಕತಾರ್ ಏರ್ ಲೈನ್ಸ್ ಮತ್ತು ಮಲೇಷ್ಯಾ ಏರ್ ಲೈನ್ಸ್ ಸೇರಿದಂತೆ 20ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ಡಿಜಿಟಲ್ ಪಾಸ್ ಅನ್ನು ಪರೀಕ್ಷಿಸುತ್ತಿವೆ.

Singapore Will Accept Coronavirus Digital Passport From Next Month

ಇತರೆ ದೇಶಗಳಿಗೆ ಈ ಯಶಸ್ಸು ಮಾದರಿ:

"ಸಿಂಗಾಪುರ್ ಸರ್ಕಾರದೊಂದಿಗಿನ ಐಎಟಿಎ ಪಾಲುದಾರಿಕೆಯ ಪ್ರಯತ್ನ ಯಶಸ್ವಿಯಾಗಿದೆ. ಇತರ ರಾಷ್ಟ್ರಗಳಿಗೆ ಇದು ಮಾದರಿ ಆಗಿರುತ್ತದೆ" ಎಂದು ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ ಮಹಾನಿರ್ದೇಶಕ ವಿಲ್ಲೀ ವಾಲ್ಷ್ ತಿಳಿಸಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮಗಳೇನು?:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. 72 ಗಂಟೆಗಳ ಮೊದಲು ನಡೆಸಿದ ಕೊವಿಡ್-19 ತಪಾಸಣೆಯಲ್ಲಿ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಸಿಂಗಾಪುರಕ್ಕೆ ಹೋಗುವುದಕ್ಕೂ 72 ಗಂಟೆಗಳಲ್ಲಿ ನಡೆಸಿದ ಕೊರೊನಾವೈರಸ್ ಸೋಂಕಿನ ನೆಗೆಟಿವ್ ವರದಿ ಕಡ್ಡಾಯವಾಗಿದೆ.

English summary
Singapore Will Accept Coronavirus Digital Passport From Next Month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X