ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯಸ್ಕರ ವ್ಯಾಕ್ಸಿನೇಷನ್‌ ಪೂರ್ಣಕ್ಕೂ ಮುನ್ನಾ 12-18 ಹದಿಹರೆಯದವರಿಗೆ ಲಸಿಕೆ ನೀಡಲಿದೆ ಸಿಂಗಾಪುರ

|
Google Oneindia Kannada News

ಸಿಂಗಾಪುರ, ಮೇ 31: ಸಿಂಗಾಪುರ ಕೋವಿಡ್‌-19 ಲಸಿಕೆಯನ್ನು ಮಂಗಳವಾರದಿಂದ 12-18 ವರ್ಷದ ಹದಿಹರೆಯದವರಿಗೂ ನೀಡಲು ನಿರ್ಧರಿಸಿದೆ. ಈ ಮೂಲಕ ವಯಸ್ಕರಿಗೆ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸುವ ಮೊದಲು ಹದಿಹರೆಯದವರಿಗೆ ಲಸಿಕೆಗಳನ್ನು ನೀಡಲು ಮುಂದಾದ ವಿಶ್ವದ ಮೊದಲ ದೇಶವಾಗಿದೆ ಸಿಂಗಾಪುರ.

ಸಿಂಗಾಪುರದಲ್ಲಿ 39 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು ಇನ್ನು 12-18 ವರ್ಷದವರಿಗೆ ಲಸಿಕೆ ನೀಡಿಕೆ ಆರಂಭವಾಗಲಿದೆ.

ಭಾರತದಿಂದ ಸಿಂಗಾಪುರಕ್ಕೆ ಹೋಗಬೇಕೆ? 3 ವಾರ ಕ್ವಾರಂಟೈನ್ ಆಗ್ಲೇಬೇಕುಭಾರತದಿಂದ ಸಿಂಗಾಪುರಕ್ಕೆ ಹೋಗಬೇಕೆ? 3 ವಾರ ಕ್ವಾರಂಟೈನ್ ಆಗ್ಲೇಬೇಕು

ಈ ಬಗ್ಗೆ ಸೋಮವಾರ ಮಾತನಾಡಿದ್ದ ಪ್ರಧಾನಿ ಲೀ ಹ್ಸೀನ್ ಲೂಂಗ್, "ನಮ್ಮ ದೇಶದಲ್ಲಿ ಹೆಚ್ಚಿನ ಜನಸಂಖ್ಯೆಗೆ ಲಸಿಕೆ ಹಾಕುವವರೆಗೂ, ನಾವು ಪ್ರಕರಣಗಳನ್ನು ಪತ್ತೆಹಚ್ಚಲು, ಪ್ರತ್ಯೇಕಿಸಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಬೇಕು ಹಾಗೂ ಇದರಿಂದಾಗಿ ತೀವ್ರ ಮತ್ತು ವಿನಾಶಕಾರಿ ಘಟ್ಟ ತಲುಪುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.

Singapore to start vaccinating 12-18 year-olds

ಆಗಸ್ಟ್ 9 ರ ದೇಶದ ರಾಷ್ಟ್ರೀಯ ದಿನಾಚರಣೆಯ ವೇಳೆಗೆ ಲಸಿಕೆ ಪಡೆಯಲು ಅರ್ಹರಾಗಿರುವ ಮತ್ತು ಲಸಿಕೆ ಪಡೆಯಲು ಬಯಸುವ ಪ್ರತಿಯೊಬ್ಬರೂ ತಮ್ಮ ಮೊದಲ ಡೋಸ್‌ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸ್ಥಳೀಯ ಕೊರೊನಾ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಎರಡು ವಾರಗಳ ನಂತರ ಸಾಮಾಜಿಕ ಕೂಟಗಳಿಗೆ ಇತ್ತೀಚೆಗೆ ವಿಧಿಸಲಾದ ನಿರ್ಬಂಧಗಳನ್ನು ಸಡಿಲಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.

ಮುಂದಿನ ಎರಡು ತಿಂಗಳುಗಳಲ್ಲಿ ಕೋವಿಡ್‌-19 ಲಸಿಕೆಗಳು ತಲುಪಲಿದೆ ಎಂದು ಲೀ ಹೇಳಿದರು. ಸಿಂಗಾಪುರದಲ್ಲಿ ಕೋವಿಡ್‌ ಲಸಿಕೆ ತಯಾರಿ ನಡೆಸಬೇಕಾಗುತ್ತದೆ ಎಂದು ಕೂಡಾ ಹೇಳಿದ್ದಾರೆ. ಸಿಂಗಾಪುರದಲ್ಲಿ ಫಿಜರ್-ಬಯೋಟೆಕ್‌ ಮತ್ತು ಮಾಡರ್ನಾ ಲಸಿಕೆಗಳನ್ನು ಬಳಸುತ್ತಿದೆ.

Singapore to start vaccinating 12-18 year-olds

ಸಿಂಗಾಪುರದ 5.7 ಮಿಲಿಯನ್ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಇಲ್ಲಿಯವರೆಗೆ ಕನಿಷ್ಠ ಒಂದನೇ ಡೋಸ್‌ ಲಸಿಕೆಯನ್ನು ಪಡೆದಿದ್ದಾರೆ. ಸೋಂಕು ಏರಿಕೆ ಹಿನ್ನೆಲೆ ಸಿಂಗಾಪುರದಲ್ಲಿ ಸಾಮಾಜಿಕ ಕೂಟಗಳಿಗೆ ಕೆಲವು ನಿರ್ಬಂಧಗಳನ್ನು ಪುನಃ ವಿಧಿಸಲಾಗಿದೆ, ಪ್ರಸ್ತುತ ನಿರ್ಬಂಧಗಳು ಜೂನ್ 13 ರವರೆಗೆ ಇರಲಿದೆ.

ದುಬೈ,ಸಿಂಗಾಪುರದಿಂದ ಆಕ್ಸಿಜನ್ ಕಂಟೇನರ್‌ಗಳ ಏರ್‌ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ ದುಬೈ,ಸಿಂಗಾಪುರದಿಂದ ಆಕ್ಸಿಜನ್ ಕಂಟೇನರ್‌ಗಳ ಏರ್‌ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

ಸೋಮವಾರ ಮತ್ತೊಂದು ಪ್ರಕಟಣೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತುರ್ತು ಬಳಕೆಯ ಪಟ್ಟಿಯಲ್ಲಿರುವ ಜಾನ್ಸನ್ ಮತ್ತು ಜಾನ್ಸನ್, ಅಸ್ಟ್ರಾಜೆನೆಕಾ ಮತ್ತು ಸಿನೊಫಾರ್ಮ್‌ನ ಲಸಿಕೆ ಇತರ ಲಸಿಕೆಗಳನ್ನು ಖಾಸಗಿಯವರು ಖರೀದಿಸಲು ಅನುವು ಮಾಡಿಕೊಡುವುದಾಗಿ ಹೇಳಿದೆ.

(ಒನ್ಇಂಡಿಯಾ ಸುದ್ದಿ)

English summary
Singapore to start vaccinating 12-18 year olds from Tuesday. The city-state is among the first countries in the world to offer vaccines to teenagers before completing inoculation of adults.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X