ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ 481 ಹೊಸ ಕೊವಿಡ್ 19 ಕೇಸ್, ಲಸಿಕೆ ಕೊನೆ ಹಂತದಲ್ಲಿದೆ

|
Google Oneindia Kannada News

ಸಿಂಗಪುರ, ಜುಲೈ 27: ಸಿಂಗಪುರದಲ್ಲಿ 481 ಹೊಸ ಕೊವಿಡ್ 19 ಪ್ರಕರಣಗಳು ದಾಖಲಾಗಿವೆ. ಸೋಂಕಿತರೆಲ್ಲರೂ ವಿದೇಶಿಯರು ಎಂದು ತಿಳಿದು ಬಂದಿದೆ. ಸಿಂಗಪುರದಲ್ಲಿ 50,369 ಕೇಸುಗಳಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Recommended Video

Helina Anti tank Missile, Indian Army | Oneindia Kannada

ಹೊಸ ಕೇಸುಗಳ ಪೈಕಿ 476 ಮಂದಿ ವಲಸೆ ಕಾರ್ಮಿಕರು ಎಲ್ಲರೂ ಡಾರ್ಮೆಂಟರಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉದ್ಯೋಗ ಪರ್ಮಿಟ್ ಪಾಸ್ ಗಳನ್ನು ಹೊಂದಿರುವ ಕಾರ್ಮಿಕರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಇನ್ಫೋಗ್ರಾಫಿಕ್ಸ್: ಅಮೆರಿಕದಲ್ಲಿ ಕೊರೊನಾದಿಂದ ಚೇತರಿಕೆ ಹೆಚ್ಚಳಇನ್ಫೋಗ್ರಾಫಿಕ್ಸ್: ಅಮೆರಿಕದಲ್ಲಿ ಕೊರೊನಾದಿಂದ ಚೇತರಿಕೆ ಹೆಚ್ಚಳ

ಸಮುದಾಯಕ್ಕೆ ಹಬ್ಬಿರುವ ಕೇಸುಗಳು ತಗ್ಗಿದ್ದು, 5 ಕೇಸುಗಳು ಮಾತ್ರ ದಾಖಲಾಗಿದೆ. ಭಾರತದಿಂದ ಬಂದವರ ಪೈಕಿ 3 ವರ್ಷ ವಯಸ್ಸಿನ ಮಗು ಸೇರಿದಂತೆ ನಾಲ್ವರಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಮನೆಯಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.

Singapore reports 481 new COVID-19 cases; all foreigners

ಇನ್ನೊಂದೆಡೆ, ಸಿಂಗಪುರದಲ್ಲಿ ಕೊವಿಡ್ 19 ಲಸಿಕೆ ಸಂಶೋಧನೆ, ಅಭಿವೃದ್ಧಿ ಮುಕ್ತಾಯಗೊಂಡಿದ್ದು, ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಡ್ಯೂಕ್ -ಎನ್ ಯುಎಸ್ ಮೆಡಿಕಲ್ ಸ್ಕೂಲ್ ಹಾಗೂ ಅಮೆರಿಕದ ಆರ್ಕ್ಟುರುಸ್ ಥೆರಪೆಕ್ಟಿಸ್ ಸಹಯೋಗದಿಂದ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದೆ.

ಲೂನರ್ -ಕೊವ್ 19 ಹೆಸರಿನ ಈ ಲಸಿಕೆ ಸೇರಿದಂತೆ ವಿಶ್ವದೆಲ್ಲೆಡೆ 25 ಲಸಿಕೆಗಳಿಗೆ ಕ್ಲಿನಿಕಲ್ ಟ್ರಯಲ್ ಅನುಮತಿ ಸಿಕ್ಕಿದೆ. ಇನ್ನೂ 141 ಹೊಸ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಪೂರ್ವ ಹಂತದ ಅನುಮತಿಗಾಗಿ ಕಾದಿವೆ ಎಂದು ಪ್ರೊ ಓಯಿ ಎಂಗ್ ಯೋಂಗ್ ಹೇಳಿದ್ದಾರೆ.

ಆಕ್ಸ್ ಫರ್ಡ್, ಆಸ್ಟ್ರಾಜೆನೆಕಾ, ಚೀನಾದ ಮಿಲಿಟರಿ ಸಂಶೋಧನಾ ಘಟಕ ಹಾಗೂ ಕ್ಯಾನ್ ಸೈನೊ ಬಯೋಲಾಜಿಕ್ಸ್, ಜರ್ಮನ್ ಬಯೋಟೆಕ್ ಕಂಪನಿ ಬಯೊ ಎನ್ ಟೆಕ್ ಹಾಗೂ ಯುಎಸ್ ಸಂಸ್ಥೆ ಫೈಜರ್ ಸಂಸ್ಥೆಯ ಲಸಿಕೆ ಕೂಡಾ ಕೊನೆ ಹಂತದ ಪ್ರಯೋಗದಲ್ಲಿವೆ ಎಂದು ಪ್ರೊ ಯೋಂಗ್ ಹೇಳಿದ್ದಾರೆ.

English summary
Singapore reported 481 new COVID-19 cases, all foreigners, on Sunday as the nationwide tally of the infections touched 50,369, the health ministry said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X