ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿಮೆ ಜನಸಂಖ್ಯೆ, ಹೆಚ್ಚು ಕೊರೊನಾ ಸೋಂಕು, ಕಮ್ಮಿ ಸಾವು: ಇದು ಸಿಂಗಾಪುರ್!

|
Google Oneindia Kannada News

ಸಿಂಗಾಪುರ, ಏಪ್ರಿಲ್ 27: ಏಷ್ಯಾದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಒಂದಾಗಿರುವ ಸಿಂಗಾಪುರ್ ನಲ್ಲಿ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಸಿಂಗಾಪುರ್ ನಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ 14,423ಕ್ಕೆ ಏರಿಕೆಯಾಗಿದೆ. ವಲಸೆ ಕಾರ್ಮಿಕರಲ್ಲಿ ಹೆಚ್ಚು ಸೋಂಕು ಕಂಡುಬಂದಿದ್ದು, ಸೋಂಕಿತರ ಪ್ರಮಾಣದಲ್ಲಿ ಜಪಾನ್ ಅನ್ನು ಸಿಂಗಾಪುರ್ ಹಿಂದಕ್ಕೆ ತಳ್ಳಿದೆ.

ಕೊರೊನಾ ಸೋಂಕು ವ್ಯಾಪಕ: ಲಾಕ್ ಡೌನ್ ಘೋಷಿಸಿದ ಸಿಂಗಾಪುರಕೊರೊನಾ ಸೋಂಕು ವ್ಯಾಪಕ: ಲಾಕ್ ಡೌನ್ ಘೋಷಿಸಿದ ಸಿಂಗಾಪುರ

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಸಿಂಗಾಪುರ್ ಆರಂಭಿಕ ಯಶಸ್ಸು ಕಂಡಿತ್ತು. ಆದ್ರೀಗ, ಸಿಂಗಾಪುರ್ ನಲ್ಲೂ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಪರಿಣಾಮ, ಸಿಂಗಾಪುರ್ ನಲ್ಲಿ ಜೂನ್ 1 ರವರೆಗೂ ಲಾಕ್ ಡೌನ್ ಘೋಷಿಸಲಾಗಿದೆ. ಅಲ್ಲಿನ ಶಾಲಾ-ಕಾಲೇಜು, ವ್ಯಾಪಾರ-ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

Singapore Becomes Asias Most Infected Nation After China And India

ಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕುಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕು

5.7 ಮಿಲಿಯನ್ ಜನಸಂಖ್ಯೆ ಹೊಂದಿರುವ ಸಿಂಗಾಪುರ್ ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದರೂ, ಸಾವಿನ ಸಂಖ್ಯೆ ಮಾತ್ರ ಕಮ್ಮಿ ಇದೆ. ಇಲ್ಲಿಯವರೆಗೂ ಸಿಂಗಾಪುರ್ ನಲ್ಲಿ ಕೋವಿಡ್-19 ನಿಂದ 12 ಜನ ಮಾತ್ರ ಮೃತಪಟ್ಟಿದ್ದಾರೆ.

English summary
Singapore Becomes Asia's Most Infected Nation After China And India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X