• search
  • Live TV
ಸಿಂಗಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಡಿಮೆ ಜನಸಂಖ್ಯೆ, ಹೆಚ್ಚು ಕೊರೊನಾ ಸೋಂಕು, ಕಮ್ಮಿ ಸಾವು: ಇದು ಸಿಂಗಾಪುರ್!

|

ಸಿಂಗಾಪುರ, ಏಪ್ರಿಲ್ 27: ಏಷ್ಯಾದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಒಂದಾಗಿರುವ ಸಿಂಗಾಪುರ್ ನಲ್ಲಿ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಸಿಂಗಾಪುರ್ ನಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ 14,423ಕ್ಕೆ ಏರಿಕೆಯಾಗಿದೆ. ವಲಸೆ ಕಾರ್ಮಿಕರಲ್ಲಿ ಹೆಚ್ಚು ಸೋಂಕು ಕಂಡುಬಂದಿದ್ದು, ಸೋಂಕಿತರ ಪ್ರಮಾಣದಲ್ಲಿ ಜಪಾನ್ ಅನ್ನು ಸಿಂಗಾಪುರ್ ಹಿಂದಕ್ಕೆ ತಳ್ಳಿದೆ.

ಕೊರೊನಾ ಸೋಂಕು ವ್ಯಾಪಕ: ಲಾಕ್ ಡೌನ್ ಘೋಷಿಸಿದ ಸಿಂಗಾಪುರ

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಸಿಂಗಾಪುರ್ ಆರಂಭಿಕ ಯಶಸ್ಸು ಕಂಡಿತ್ತು. ಆದ್ರೀಗ, ಸಿಂಗಾಪುರ್ ನಲ್ಲೂ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಪರಿಣಾಮ, ಸಿಂಗಾಪುರ್ ನಲ್ಲಿ ಜೂನ್ 1 ರವರೆಗೂ ಲಾಕ್ ಡೌನ್ ಘೋಷಿಸಲಾಗಿದೆ. ಅಲ್ಲಿನ ಶಾಲಾ-ಕಾಲೇಜು, ವ್ಯಾಪಾರ-ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕು

5.7 ಮಿಲಿಯನ್ ಜನಸಂಖ್ಯೆ ಹೊಂದಿರುವ ಸಿಂಗಾಪುರ್ ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದರೂ, ಸಾವಿನ ಸಂಖ್ಯೆ ಮಾತ್ರ ಕಮ್ಮಿ ಇದೆ. ಇಲ್ಲಿಯವರೆಗೂ ಸಿಂಗಾಪುರ್ ನಲ್ಲಿ ಕೋವಿಡ್-19 ನಿಂದ 12 ಜನ ಮಾತ್ರ ಮೃತಪಟ್ಟಿದ್ದಾರೆ.

English summary
Singapore Becomes Asia's Most Infected Nation After China And India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X