ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ಡೆಲ್ಟಾಗಿಂತ ಅಧಿಕ ಸಾಂಕ್ರಾಮಿಕ: ಸಿಂಗಾಪುರ

|
Google Oneindia Kannada News

ಸಿಂಗಪುರ, ಡಿಸೆಂಬರ್‌ 06: ಸಿಂಗಾಪುರದ ಆರೋಗ್ಯ ಸಚಿವಾಲಯವು ಜಾಗತಿಕವಾಗಿ ಆರಂಭಿಕ ಕ್ಲಿನಿಕಲ್‌ ಅವಲೋಕನವನ್ನು ಮಾಡಿದ್ದು, ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಅಧಿಕ ಸಾಂಕ್ರಾಮಿಕ ಎಂದು ಹೇಳಿದೆ. ಕೊರೊನಾ ವೈರಸ್‌ನ ಡೆಲ್ಟಾ ಮತ್ತು ಬೀಟಾ ರೂಪಾಂತರಗಳಿಗೆ ಹೋಲಿಸಿದರೆ ಈ ರೂಪಾಂತರ ಓಮಿಕ್ರಾನ್‌ ಅಧಿಕ ಸಾಂಕ್ರಾಮಿಕ, ಹೆಚ್ಚಾಗಿ ಹರಡುತ್ತದೆ ಎಂದು ಸಿಂಗಪುರದ ಆರೋಗ್ಯ ಸಚಿವಾಲಯ ತಿಳಿಸಿದೆ.

"ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡವರು ಓಮಿಕ್ರಾನ್‌ ರೂಪಾಂತರದಿಂದ ಮರು ಸೋಂಕಿಗೆ ಒಳಗಾಗುವ ಸಂಭವ ಅಧಿಕವಾಗಿದೆ," ಎಂದು ಚಾನೆಲ್ ನ್ಯೂಸ್ ಏಷ್ಯಾವು ಸಚಿವಾಲಯ ನೀಡಿರುವ ಮಾಹಿತಿಯನ್ನು ಉಲ್ಲೇಖ ಮಾಡಿ ವರದಿ ಮಾಡಿದೆ. ಈ ನಡುವೆ ಸಿಂಗಾಪುರದಲ್ಲಿ ಮತ್ತೆ ಒಂದು ಓಮಿಕ್ರಾನ್ ಪ್ರಕರಣ ಭಾನುವಾರ ವರದಿಯಾಗಿದೆ. 37 ವರ್ಷದ ಕೋವಿಡ್‌ ಲಸಿಕೆ ಹಾಕಿಸಿಕೊಂಡಿರುವ ವ್ಯಕ್ತಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಸಿಂಗಪುರದಲ್ಲಿ ಈವರೆಗೆ 552 ಮಂದಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. 13 ಮಂದಿ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ.

ಜೈಪುರ: ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ 9 ಮಂದಿಗೆ ಓಮಿಕ್ರಾನ್‌!ಜೈಪುರ: ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ 9 ಮಂದಿಗೆ ಓಮಿಕ್ರಾನ್‌!

"ದಕ್ಷಿಣ ಆಫ್ರಿಕಾ ಸೇರಿದಂತೆ ಬೇರೆ ದೇಶಗಳ ಓಮಿಕ್ರಾನ್‌ ವರದಿಯ ಬಗ್ಗೆ ನಾವು ಹಲವಾರು ದಿನಗಳಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಪೀಡಿತ ದೇಶಗಳಲ್ಲಿನ ತಜ್ಞರನ್ನು ಮೊದಲ ಪ್ರಾಥಮಿಕ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ಈ ಪತ್ರಿಕಾ ಪ್ರಕಟಣೆಯು ಓಮಿಕ್ರಾನ್ ರೂಪಾಂತರದ ಬಗ್ಗೆ ನಮ್ಮ ತಿಳುವಳಿಕೆ ಬಗ್ಗೆ ನಾವು ನೀಡುವ ಮಾಹಿತಿ ಆಗಿದೆ. ಇನ್ನೂ ಕೂಡಾ ಅನೇಕ ಪ್ರಶ್ನೆಗಳು ಉತ್ತವಿಲ್ಲದೆಯೇ ಉಳಿದಿದೆ," ಎಂದು ಸಿಂಗಪುರ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.

Omicron More Infectious Than Delta: Singapores health ministry

"ಓಮಿಕ್ರಾನ್‌ ಜಾಗತಿಕವಾಗಿ ಹರಡುತ್ತಿದೆ. ಇದರ ಜೊತೆಗೆ ಸಿಂಗಾಪುರದ ಗಡಿ ಭಾಗದಲ್ಲಿ ಓಮಿಕ್ರಾನ್‌ ಕಾಣಿಸಿಕೊಳ್ಳುವ ಸಾಧ್ಯತೆಗಳು ಇದೆ. ಮುಂಬರುವ ದಿನಗಳಲ್ಲಿ ನಮ್ಮ ಸಮುದಾಯದಲ್ಲಿಯೂ ಓಮಿಕ್ರಾನ್‌ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ," ಎಂದು ಹೇಳಿದೆ. "ಪ್ರಸ್ತುತ ಲಭ್ಯವಿರುವ ಕೋವಿಡ್‌ ಲಸಿಕೆಗಳು ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆಯೇ ಎಂಬ ಬಗ್ಗೆ ನಾವು ಅಧ್ಯಯನವನ್ನು ನಡೆಸುತ್ತಿದ್ದೇವೆ. ಆದರೆ ಈಗಿರುವ ಲಸಿಕೆಗಳು ಓಮಿಕ್ರಾನ್‌ ವಿರುದ್ಧ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾದ ಜನರನ್ನು ರಕ್ಷಣೆ ಮಾಡುವಲ್ಲಿ ಈ ಕೋವಿಡ್‌ ಲಸಿಕೆಗಳು ಪರಿಣಾಮಕಾರಿ," ಎಂದು ಸಿಂಗಪುರ ಆರೋಗ್ಯ ಸಚಿವಾಲಯ ಅಭಿಪ್ರಾಯಿಸಿದೆ.

ಈವೆರೆಗೆ ಓಮಿಕ್ರಾನ್‌ನಿಂದ ಸಾವು ವರದಿಯಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆಈವೆರೆಗೆ ಓಮಿಕ್ರಾನ್‌ನಿಂದ ಸಾವು ವರದಿಯಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಓಮಿಕ್ರಾನ್‌ನ ತೀವ್ರತೆಯ ಬಗ್ಗೆ ಸಿಂಗಾಪುರ ಕಳವಳ

ಇನ್ನು ಕೋವಿಡ್‌ ಲಸಿಕೆಯನ್ನು ಪಡೆಯಲು ಅಥವಾ ಬೂಸ್ಟರ್‌ ಅನ್ನು ಪಡೆಯಲು ಯಾರು ಅರ್ಹರಾಗಿದ್ದಾರೋ ಅವರು ಕೋವಿಡ್ ಲಸಿಕೆಯನ್ನು ಪಡೆಯಿರಿ ಎಂದು ಮನವಿ ಮಾಡಿರುವ ಸಿಂಗಾಪುರ ಆರೋಗ್ಯ ಸಚಿವಾಲಯವು, ಈ ಕೋವಿಡ್‌ ಲಸಿಕೆಗಳು ಭವಿಷ್ಯದಲ್ಲಿ ಉಂಟಾಗಬಹುದಾದ ಕೋವಿಡ್‌ ರೂಪಾಂತರದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಓಮಿಕ್ರಾನ್‌ನ ತೀವ್ರತೆಯ ಬಗ್ಗೆ ಸಿಂಗಪುರ ಕಳವಳ ವ್ಯಕ್ತಪಡಿಸಿದೆ. "ಓಮಿಕ್ರಾನ್‌ ಪ್ರಕರಣಗಳು ಅಧಿಕವಾಗಿ ಸೌಮ್ಯವಾದ ಲಕ್ಷಣಗಳನ್ನು ಹೊಂದಿರುತ್ತದೆ. ಇದು ಹೆಚ್ಚು ಕಳವಳಕಾರಿ, ಆದರೆ ಈವರೆಗೆ ಓಮಿಕ್ರಾನ್‌ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ," ಎಂದು ಮಾಹಿತಿ ನೀಡಿದೆ. "ಗಂಟಲು ನೋವು, ಸುಸ್ತು ಮತ್ತು ಕೆಮ್ಮು ಓಮಿಕ್ರಾನ್‌ನ ಲಕ್ಷಣಗಳು ಆಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ಉಲ್ಲೇಖ ಮಾಡಿದೆ.

ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ತೀವ್ರವಾಗಿದೆಯೇ ಎಂದು ನಿರ್ಣಯಿಸಲು ಸೋಂಕಿಗೆ ಒಳಗಾದ ವಯಸ್ಸಾದ ವ್ಯಕ್ತಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಸಚಿವಾಲಯವು ತಿಳಿಸಿದೆ. ಸಿಂಗಪುರದಲ್ಲಿ ಓಮಿಕ್ರಾನ್‌ ಪ್ರಕರಣವು ದೃಢಪಟ್ಟ ಬಳಿಕ ಸಚಿವಾಲಯವು ಈ ಬಗ್ಗೆ ಅಧಿಕ ಪರಿಶೀಲನೆ ನಡೆಸುತ್ತಿದೆ. ಡಿಸೆಂಬರ್ 1 ರಂದು ಸಿಂಗಪುರ್ ಏರ್‌ಲೈನ್ಸ್ ವಿಮಾನದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದ ನಂತರ ಪ್ರಯಾಣಿಕರನ್ನು ಪ್ರತ್ಯೇಕಿಸಲಾಗಿತ್ತು. ಅವರಿಗೆ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಇಬ್ಬರೂ ಕೂಡಾ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
Omicron variant of COVID has higher risk of reinfection than Delta and Beta variants Says Singapore's health ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X