ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲಿ 4800 ಮಂದಿ ಭಾರತೀಯರಿಗೆ ಕೊರೊನಾ ಸೋಂಕು

|
Google Oneindia Kannada News

ಸಿಂಗಾಪುರ, ಮೇ 4: ಸಿಂಗಾಪುರದಲ್ಲಿ ಸುಮಾರು 4800 ಭಾರತೀಯರಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಅವರಿಗೆ ಸಣ್ಣ ಪ್ರಮಾಣದ ಲಕ್ಷಣಗಳಷ್ಟೇ ಗೋಚರಿಸಿದೆ. ಕೊರೊನಾ ಸೋಂಕು ಪೀಡಿತರಲ್ಲಿ ಹೆಚ್ಚು ಜನರು ವಿದೇಶಿ ಕಾರ್ಮಿಕರ ವಸತಿ ನಿಲಯಗಳಲ್ಲಿ ವಾಸವಿದ್ದರು. ವಿದೇಶಿ ಕಾರ್ಮಿಕರ ವಸತಿ ನಿಲಯಗಳನ್ನು ಸಿಂಗಾಪುರದಲ್ಲಿ ಕೊರೊನಾ ಹರಡುವಿಕೆಯ ಮೂಲ ಜಾಗಗಳೆಂದು ಗುರುತಿಸಲಾಗಿದೆ.

ಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕುಸಿಂಗಾಪುರದಲ್ಲಿ ಒಂದೇ ದಿನ 59 ಭಾರತೀಯರಿಗೆ ಕೊರೊನಾ ಸೋಂಕು

ಈ ಬಗ್ಗೆ ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮಾಹಿತಿ ನೀಡಿದ್ದು, ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳೊಂದಿಗೆ ಸುಮಾರು 4800 ಭಾರತೀಯರಲ್ಲಿ ಕೊರೊನಾ ವೈರಸ್ ಸೋಂಕು ಕಂಡುಬಂದಿದೆ.

Nearly 4,800 Indians Are COVID-19 Positive

ಸೋಂಕು ಪೀಡಿತರಲ್ಲಿ ಹೆಚ್ಚು ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಸುಧಾರಣೆ ಕಾಣುತ್ತಿದೆ. ಸೋಂಕಿತರಲ್ಲಿ ಬಹುತೇಕ ಮಂದಿಯು ಭಾರತೀಯ ರಾಷ್ಟ್ರೀಯತೆ ಹೊಂದಿದ್ದಾರೆ. ಅಂತೆಯೇ ಕೆಲವರು ಸಿಂಗಾಪುರದ ಖಾಯಂ ನಿವಾಸಿಗಳಾಗಿದ್ದಾರೆ ಎಂದೂ ಭಾರತೀಯ ರಾಯಭಾರಿ ಜಾವೇದ್‌ ಅಶ್ರಫ್‌ ತಿಳಿಸಿದ್ದಾರೆ.

ಸಿಂಗಾಪುರದಲ್ಲಿರುವ ಭಾರತೀಯರ ಪೈಕಿ ಶೇ.90 ಮಂದಿ ಭಾರತೀಯರಿಗೆ ಸೋಂಕು ತಗುಲಿದ್ದು, ಬಹುತೇಕರು ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಂಗಾಪುರದಲ್ಲಿ ಈ ವರೆಗೂ ಸುಮಾರು 18,205 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 18 ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ಕೊರೋನಾ ವೈರಸ್ ಸೋಂಕು ಪ್ರಸರಣದ ಹಿನ್ನಲೆಯಲ್ಲಿ 3500ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಲು ತಮ್ಮ ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಂಡಿದ್ದು, ಲಾಕ್ ಡೌನ್ ಹಿನ್ನಲೆಯಲ್ಲಿ ಅದು ಸಾಧ್ಯವಾಗಿಲ್ಲ.

English summary
Nearly 4,800 Indian nationals, most of whom are living in dormitories for foreign workers, have been tested positive with the novel coronavirus in Singapore till end of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X