ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರ ಏರ್‌ಪೋರ್ಟ್‌‌ನಲ್ಲಿ ಕೊರೊನಾ ಎಂದು ಕೂಗಿದ ಭಾರತೀಯನ ಬಂಧನ

|
Google Oneindia Kannada News

ಪೆನಾಂಗ್, ಏಪ್ರಿಲ್ 3: ಸಿಂಗಾಪುರ ವಿಮಾನ ನಿಲ್ದಾಣದಲ್ಲಿ 'ಕೊರೊನಾ' 'ಕೊರೊನಾ' ಎಂದು ಕೂಗಿದ ಭಾರತೀಯನನ್ನು ಬಂಧಿಸಿ ಎರಡು ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Recommended Video

ತಮ್ಮ ಸಾವಿನ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅಮರ್ ಸಿಂಗ್ | Amar Singh | Oneindia kannada

ಜಸ್ವಿಂದ್ ಸಿಂಗ್ ಮೆಹರ್ ಸಿಂಗ್(52) ಬಂಧಿತ. ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕಿರಿ ಉಂಟು ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ

ಅವರು ಬೆಳಗ್ಗೆ 10.30ರ ಸುಮಾರಿಗೆ ರೆಸ್ಟೋರೆಂಟ್ ಒಂದಕ್ಕೆ ತೆರಳಿ ಹೋಟೆಲ್ ಸಿಬ್ಬಂದಿಗೂ ಮಾಹಿತಿ ನೀಡದೆ ಪ್ಲೇಟ್ ತೆಗೆದುಕೊಂಡು ತಿಂಡಿಯನ್ನು ಹಾಕಿಕೊಳ್ಳಲು ಮುಂದಾಗಿದ್ದರು.

Man Shouts Corona Corona At Singapore Airport

ಈ ವೇಳೆ ಹೋಟೆಲ್ ಮ್ಯಾನೇಜರ್ ಸೀಟ್‌ನಲ್ಲಿ ಕೂರುವಂತೆ ಸೂಚನೆ ನೀಡಿದ್ದರು. ಬಳಿಕ ಕೋಪದಲ್ಲಿ ಸಿಂಗ್ ಅವರು ಪ್ಲೇಟ್‌ಗಳನ್ನು ಮುರಿದಿದ್ದಾರೆ. ಟೇಬಲ್ ಮೇಲೆ ಎರಡು ಕಾಲುಗಳನ್ನಿಟ್ಟು ಟೇಬಲ್ ಒದೆಯುವ ಮೂಲಕ ದರ್ಪ ತೋರಿಸಿದ್ದರು.

ನೆಲ ಹಾಸಿನ ಮೇಲೆ ಉಗಿದು ಗಲೀಜು ಮಾಡಿ ಕೊರೊನಾ ಕೊರೊನಾ ಎಂದು ಕೂಗಾಡಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದ್ದು ಎರಡು ತಿಂಗಳುಗಳ ಕಾಲ ಅವರನ್ನು ಜೈಲಿನಲ್ಲಿಡಲಾಗುತ್ತದೆ. ಊಟ ಖಾಲಿಯಾಗಿದೆ ಎಂದು ವೇಯ್ಟರ್ ಹೇಳಿದ್ದಕ್ಕೆ ಕೋಪಗೊಂಡು ಈ ರೀತಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
An Indian-origin Singaporean was sentenced to two months jail on Thursday, 2 April, for shouting “corona, corona” and spitting on a hotel floor at the Singapore Changi Airport, the first conviction of its kind in the country related to the novel coronavirus outbreak, according to a media report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X