ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ, ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ

|
Google Oneindia Kannada News

ಸಿಂಗಪುರ, ಜುಲೈ 7: ಸಿಂಗಪುರದ ಆಗ್ನೇಯ ಭಾಗದಲ್ಲಿ ಮಂಗಳವಾರ ಬೆಳ್ಳಂಬೆಳ್ಳಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಇದೇ ವೇಳೆ ಇಂಡೋನೇಷಿಯಾ, ಭಾರತದ ಅರುಣಾಚಲ ಪ್ರದೇಶದಲ್ಲೂ ಭೂಕಂಪವಾಗಿದೆ.

ಸಿಂಗಪುರದ ಆಗ್ನೇಯ ಭಾಗ 1102 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಕಂಡು ಬಂದಿದೆ ಎಂದು ರಾಷ್ಟ್ರೀಯ ಸಿಸ್ಮೋಲಾಜಿ ಕೇಂದ್ರ ವರದಿ ಮಾಡಿದೆ. ಸ್ಥಳೀಯ ಕಾಲಮಾನ 4.24ಕ್ಕೆ ಭೂಕಂಪ ಸಂಭವಿಸಿದೆ. ಸದ್ಯಕ್ಕೆ ಸಾವು, ನೋವಿನ ವರದಿ ಕಂಡು ಬಂದಿಲ್ಲ.

Magnitude-6.1 earthquake jolts Singapore

ಇದೇ ವೇಳೆ ಇಂಡೋನೇಷಿಯಾದಲ್ಲೂ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ಕಂಡು ಬಂದಿದೆ ಎಂದು ಯುರೋಪಿಯನ್ ಮೆಡಿಟೇರಿಯನ್ ಸಿಸ್ಮೋಲಾಜಿಕಲ್ ಕೇಂದ್ರ ವರದಿ ಮಾಡಿದೆ. ಇಂಡೋನೇಷಿಯಾದಿಂದ ಉತ್ತರಕ್ಕೆ ಸೆಮರಾಂಗ್ ನಿಂದ 142 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.

ಇದಲ್ಲದೆ, ಭಾರತದ ಅರುಣಾಚಲ ಪ್ರದೇಶದಲ್ಲೂ ಕಡಿಮೆ ತೀವ್ರತೆಯ ಭೂಕಂಪ ಇಂದು ಬೆಳಗ್ಗೆ ಸಂಭವಿಸಿದೆ. ಅರುಣಾಚಲ ಪ್ರದೇಶದಲ್ಲಿ ತ್ರಡರಾತ್ರಿ/ಮುಂಜಾನೆ 1.33 AM ಗೆ ಭೂಕಂಪವಾಗಿದ್ದು, ರಿಕ್ಚರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

English summary
An earthquake of magnitude 6.1 on the Richter scale hit 1102 km Southeast of Singapore on Tuesday. According to the National Centre for Seismology, the earthquake struck at 4:24 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X