ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷ್ ಉದ್ಯಮಿಯಿಂದ ಸಿಂಗಾಪೂರ್ ನಲ್ಲಿ 350 ಕೋಟಿಗೂ ಹೆಚ್ಚಿನ ಪೆಂಟ್ ಹೌಸ್ ಖರೀದಿ

By ಅನಿಲ್ ಆಚಾರ್
|
Google Oneindia Kannada News

ಬ್ರಿಟಿಷ್ ಶತಕೋಟ್ಯಧಿಪತಿ ಸಂಶೋಧಕ ಜೇಮ್ಸ್ ಡೈಸನ್ ಸಿಂಗಾಪೂರ್ ನಲ್ಲೇ ಅತ್ಯಂತ ದುಬಾರಿಯ ಪೆಂಟ್ ಹೌಸ್ ಖರೀದಿ ಮಾಡಿದ್ದಾರೆ. ಇದಕ್ಕಾಗಿ $ 54 ಮಿಲಿಯನ್ ಡಾಲರ್ (ಭಾರತೀಯ ರುಪಾಯಿ ಲೆಕ್ಕದಲ್ಲಿ ಮುನ್ನೂರಾ ಐವತ್ತು ಕೋಟಿಗೂ ಹೆಚ್ಚು) ಪಾವತಿಸಿದ್ದಾರೆ ಎನ್ನಲಾಗುತ್ತಿದೆ. ಮೂರು ಅಂತಸ್ತಿನ ಈ ಮನೆಯಲ್ಲಿ ರೂಫ್ ಟಾಪ್ ಟ್ರೇಸ್, ಖಾಸಗಿ ಈಜುಕೊಳ ಹಾಗೂ ಜಾಕೋಜಿ ಇದೆ.

ಡೈಸನ್ ಅವರ ಎಲೆಕ್ಟ್ರಿಕ್ ಅಪ್ಲೈಯನ್ಸ್ ಕಂಪೆನಿಯು ಬ್ಯಾಗ್ ರಹಿತ ವ್ಯಾಕ್ಯೂಮ್ ಕ್ಲೀನರ್, ಹ್ಯಾಂಡ್ ಡ್ರೈಯರ್ಸ್ ಮತ್ತು ಫ್ಯಾನ್ಸ್ ಗೆ ಖ್ಯಾತಿ ಪಡೆದಿದೆ. ಇಂಗ್ಲೆಂಡ್ ನಲ್ಲಿರುವ ಕಂಪೆನಿಯ ಕೇಂದ್ರ ಕಚೇರಿಯನ್ನು ಏಷ್ಯನ್ ಮಾರುಕಟ್ಟೆಗೆ ಹತ್ತಿರ ಆಗುವಂತೆ ಸ್ಥಳಾಂತರಿಸುವ ಬಗ್ಗೆ ಘೋಷಿಸಲಾಗಿತ್ತು.

ಈ ಬ್ರಿಟಿಷ್ ಮಹಿಳೆ ಆಸ್ತಿ ರಾಣಿ ಎಲಿಜಬೆತ್ ಗಿಂತ ಹತ್ತು ಪಟ್ಟು ಜಾಸ್ತಿಈ ಬ್ರಿಟಿಷ್ ಮಹಿಳೆ ಆಸ್ತಿ ರಾಣಿ ಎಲಿಜಬೆತ್ ಗಿಂತ ಹತ್ತು ಪಟ್ಟು ಜಾಸ್ತಿ

ಕಂಪೆನಿಯು ಎಲೆಕ್ಟ್ರಿಕ್ ಕಾರು ಉತ್ಪಾದಿಸುವ ಆಲೋಚನೆ ಕೂಡ ಹೊಂದಿದೆ. ಯುರೋಪ್ ಒಕ್ಕೂಟದಿಂದ ಆಚೆ ಬರಲು ಬ್ರಿಟನ್ ನಿರ್ಧರಿಸಿದ 2016ರಲ್ಲೇ ವಿಸ್ತರಣೆಗೆ ಆಲೋಚಿಸಲಾಗಿತ್ತು. ಇದೀಗ ಡೈಸನ್ 21,000 ಚದರಡಿಯ ಸೂಪರ್ ಪೆಂಟ್ ಹೌಸ್ ಖರೀದಿ ಮಾಡಿರುವುದಾಗಿ ಸಿಂಗಾಪೂರ್ ನ ಬಿಜಿನೆಸ್ ಟೈಮ್ಸ್ ನಿಯತಕಾಲಿಕೆ ವರದಿ ಮಾಡಿದೆ.

James Dyson purchased costliest penthhouse in Singapore

ಡೈಸನ್ ಹಾಗೂ ಅವರ ಪತ್ನಿ ಹೆಸರಲ್ಲಿ ಜಂಟಿಯಾಗಿ ತೊಂಬತ್ತೊಂಬತ್ತು ವರ್ಷಗಳಿಗೆ ಭೋಗ್ಯಕ್ಕೆ ಜೂನ್ ಇಪ್ಪತ್ತನೇ ತಾರೀಕು ನೋಂದಣಿ ಆಗಿದೆ. 72 ವರ್ಷದ ಡೈಸನ್ ಈ ಆಸ್ತಿಯನ್ನು ಖರೀದಿ ಮಾಡಿದ್ದಾರೆ ಎಂದು ಅವರ ಕಂಪೆನಿ ಖಾತ್ರಿ ಪಡಿಸಿದೆ.

ವಲ್ಲಿಚ್ ರೆಸಿಡೆನ್ಸ್ ನಲ್ಲಿ ಈ ಅದ್ಧೂರಿ ಮನೆ ಇದೆ. ಒಟ್ಟು 64 ಅಂತಸ್ತಿನ ಕಟ್ಟಡ ಇದು. ವಾಣಿಜ್ಯ ಚಟುವಟಿಕೆಯ ಕೇಂದ್ರ ಭಾಗವಿದು. ಇಡೀ ಪ್ರದೇಶದ ದೃಶ್ಯ ಇಲ್ಲಿಂದ ಕಾಣಬಹುದು. ಪೆಂಟ್ ಹೌಸ್ ನಲ್ಲಿ ಐದು ಬೆಡ್ ರೂಮ್, ಖಾಸಗಿ ಉದ್ಯಾನ, ಖಾಸಗಿ ಲಿಫ್ಟ್ ಮತ್ತಿತರ ಸೌಲಭ್ಯ ಇದೆ ಎಂದು ತಿಳಿಸಲಾಗಿದೆ.

English summary
British billionaire inventor James Dyson purchased the costliest penthouse in Singapore. Here are the complete details of this purchase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X