ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲಿ ಕೋವಿಡ್‌ ನಿರ್ಬಂಧ ಉಲ್ಲಂಘಿಸಿದ ಭಾರತೀಯ ಪ್ರಜೆಗೆ ಜೈಲು ಶಿಕ್ಷೆ

|
Google Oneindia Kannada News

ಸಿಂಗಾಪುರ, ಜು.12: ಕೋವಿಡ್‌ ಪರೀಕ್ಷೆಯ ವರದಿ ಬರುವವರೆಗೂ ಆಸ್ಪತ್ರೆಯಲ್ಲಿ ಕಾಯಲು ಹೇಳಿದ್ದರೂ, ಸಿಂಗಾಪುರದಿಂದ ಹೊರಹೋಗಲು ಯತ್ನಿಸಿದ್ದಕ್ಕಾಗಿ 26 ವರ್ಷದ ಭಾರತೀಯ ಪ್ರಜೆಗೆ ಸಿಂಗಾಪುರದಲ್ಲಿ ಸೋಮವಾರ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸಿಂಗಾಪುರದಿಂದ ಹೊರಹೋಗಲು ಯತ್ನಿಸುತ್ತಿದ್ದ ಭಾರತೀಯ ಪ್ರಜೆ ಬಾಲಚಂದ್ರನ್ ಪಾರ್ಥಿಬನ್‌ರನ್ನು ಚಾಂಗಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಪೊಲೀಸರು ಸಿಂಗಾಪುರ ಜನರಲ್ ಆಸ್ಪತ್ರೆಗೆ ಮತ್ತೆ ದಾಖಲು ಮಾಡಿದ್ದು, ಈ ಸಂದರ್ಭದಲ್ಲಿ ಕೊರೊನಾ ಪರೀಕ್ಷಾ ವರದಿಯು ಪಾಸಿಟಿವ್‌ ಎಂದು ತಿಳಿದುಬಂದಿದೆ.

ವಯಸ್ಕರ ವ್ಯಾಕ್ಸಿನೇಷನ್‌ ಪೂರ್ಣಕ್ಕೂ ಮುನ್ನಾ 12-18 ಹದಿಹರೆಯದವರಿಗೆ ಲಸಿಕೆ ನೀಡಲಿದೆ ಸಿಂಗಾಪುರವಯಸ್ಕರ ವ್ಯಾಕ್ಸಿನೇಷನ್‌ ಪೂರ್ಣಕ್ಕೂ ಮುನ್ನಾ 12-18 ಹದಿಹರೆಯದವರಿಗೆ ಲಸಿಕೆ ನೀಡಲಿದೆ ಸಿಂಗಾಪುರ

ಬಾಲಚಂದ್ರನ್ ಸಾರ್ವಜನಿಕ ಸಾರಿಗೆಯ ಮೂಲಕ ಭಾರತಕ್ಕೆ ಟಿಕೆಟ್ ಖರೀದಿಸಲು ವಿಫಲರಾಗಿದ್ದರು. ಈ ಹಿನ್ನೆಲೆ ಚಾಂಗಿ ವಿಮಾನ ನಿಲ್ದಾಣದ ಟರ್ಮಿನಲ್ 1 ನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸುಳ್ಳು ಹೇಳುತ್ತಿದ್ದರು ಎಂದು ಇಂದು ಪತ್ರಿಕೆ ವರದಿ ಮಾಡಿದೆ. ನಂತರ ಕ್ವಾರಂಟೈನ್‌ ಆದೇಶವನ್ನು ಉಲ್ಲಂಘಿಸಿ ಭಾರತಕ್ಕೆ ಮರಳಲು ಮತ್ತೆ ವಿಮಾನ ನಿಲ್ದಾಣಕ್ಕೆ ಹೋಗಿದ್ದಾನೆ ಎಂದು ವರದಿ ಉಲ್ಲೇಖ ಮಾಡಿದೆ.

 Indian National Jailed For Breaching Covid Restrictions In Singapore

ಕೋವಿಡ್‌ನ ಅಪಾಯಕ್ಕೆ ಇತರರನ್ನು ಒಡ್ಡಿದ ಮತ್ತು ಅನುಮತಿಯಿಲ್ಲದೆ ದೇಶದಿಂದ ಹೊರಹೋಗಲು ಯತ್ನ ಮಾಡಿದ ಆರೋಪದ ಬಗ್ಗೆ ಭಾರತೀಯ ಪ್ರಜೆ ಬಾಲಚಂದ್ರನ್ ಮೇ ತಿಂಗಳಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಪರ ವಕೀಲ ಕೋರೈ ವಾಂಗ್ ಮನೋವೈದ್ಯಕೀಯ ಪರೀಕ್ಷೆಗಾಗಿ ಆತನನ್ನು ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ (IMH) ರಿಮಾಂಡ್ ಮಾಡಲು ಮನವಿ ಮಾಡಿದ್ದಾರೆ.

ಐಎಂಹೆಚ್‌ನಲ್ಲಿ ಸುಮಾರು ನಾಲ್ಕು ವಾರಗಳ ಕಾಲದ ಪರೀಕ್ಷೆಯಲ್ಲಿ ಬಾಲಚಂದ್ರನ್ ಕಳೆದ ವರ್ಷ ಮೇ ತಿಂಗಳಲ್ಲಿ ಮಾಡಿದ ಅಪರಾಧಗಳ ಸಮಯದಲ್ಲಿ "ಮಾನಸಿಕ ಒತ್ತಡ"ದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ "ಸಣ್ಣ" ಮಾನಸಿಕ ಅಸ್ವಸ್ಥತೆಯು ಈ ಕೃತ್ಯಕ್ಕೆ ಮಾನಸಿಕ ಸ್ಥಿತಿ ಕಾರಣ ಎಂದು ಹೇಳಲಾಗದು ಎಂದು ಡಾ. ಸ್ಟೀಫನ್ ಫಾಂಗ್ ಅಭಿಪ್ರಾಯಿಸಿದ್ದಾರೆ. ಹಾಗೆಯೇ "ಸರಿ ಯಾವುದು, ತಪ್ಪು ಯಾವುದು ಎಂದು ನಿರ್ಧರಿಸಲು ಸಾಧ್ಯವಾಗದಂತಹ ಮಾನಸಿಕ ಸಾಮರ್ಥ್ಯವನ್ನು ಆತ ಹೊಂದಿಲ್ಲ. ಸರಿತಪ್ಪು ಅರ್ಥ ಮಾಡಿಕೊಳ್ಳುವ ಮಾನಸಿಕ ಸಾಮರ್ಥ್ಯ ಆತನಿಗೆ ಇದೆ," ಎಂದು ಮನೋವೈದ್ಯರು ಹೇಳಿದರು.

ಭಾರತದಲ್ಲೇ ಬೇಕಾದಷ್ಟು ರೂಪಾಂತರಗಳಿವೆ, ಬೇರೆ ದೇಶಗಳ ಮಾತೇಕೆ; ದೆಹಲಿ ಹೈಕೋರ್ಟ್ಭಾರತದಲ್ಲೇ ಬೇಕಾದಷ್ಟು ರೂಪಾಂತರಗಳಿವೆ, ಬೇರೆ ದೇಶಗಳ ಮಾತೇಕೆ; ದೆಹಲಿ ಹೈಕೋರ್ಟ್

ಆದರೆ ಬಳಿಕ ಆತ "ಸ್ಕಿಜೋಫ್ರೇನಿಫಾರ್ಮ್ ಸೈಕೋಸಿಸ್" ನಿಂದ ಬಳಲುವಂತಾಗಿದೆ. ಇದು ಒತ್ತಡದಿಂದ ಉಂಟಾಗುತ್ತದೆ. ಆತ ತನ್ನ ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾನೆ ಎಂದು ಫಾಂಗ್ ವೈದ್ಯಕೀಯ ವರದಿ ಮೂಲಕ ಹೇಳಿದ್ದಾರೆ.

ಐಎಂಹೆಚ್‌ನಲ್ಲಿದ್ದಾಗ, ಬಾಲಚಂದ್ರನ್ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಮಾತುಗಳನ್ನು ಆಡಿದ್ದಾರೆ. ಆತನನ್ನು ನಿಯಂತ್ರಿಸುವುದೇ ಕಷ್ಟವಾಗಿದೆ. ಈಗ ಔಷಧಿಯನ್ನು ನೀಡಲಾಗುತ್ತಿದೆ. ಪರಿಸ್ಥಿತಿ ಉತ್ತಮವಾಗಿದೆ ಎಂದು ಮನೋವೈದ್ಯರು ತಿಳಿಸಿದ್ದಾರೆ.

ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ನಾರ್ಮನ್ ಯೂ ಬಾಲಚಂದ್ರನ್‌ಗೆ 10 ತಿಂಗಳ ಜೈಲು ವಿಧಿಸಿದರೆ, ಈ ಸಂದರ್ಭ ವಾಂಗ್ ಆರೂವರೆ ತಿಂಗಳ ಜೈಲು ಶಿಕ್ಷೆ ಪ್ರಮಾಣ ಇಳಿಕೆಗೆ ಮನವಿ ಮಾಡಿದ್ದಾರೆ. ಶಿಕ್ಷೆಯಲ್ಲಿ ಜಿಲ್ಲಾ ನ್ಯಾಯಾಧೀಶ ರೊನಾಲ್ಡ್ ಗ್ವೆ, ಇತರರನ್ನು ಸೋಂಕಿನ ಅಪಾಯಕ್ಕೆ ಒಡ್ಡಿದ ಮತ್ತು ಆರೋಗ್ಯ ಅಧಿಕಾರಿಯ ಕಡೆಗೆ ಅವಮಾನಕರ ಪದಗಳನ್ನು ಬಳಸಿದ ಇತರ ಎರಡು ಆರೋಪಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ.

ಕೋವಿಡ್‌ ಕಾನೂನುಗಳನ್ನು ಉಲ್ಲಂಘಿಸಿದ ಪ್ರತಿ ಆರೋಪಕ್ಕೂ, ಬಾಲಚಂದ್ರನ್ ಆರು ತಿಂಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕು ಅಥವಾ 10,000 ಎಸ್‌ಜಿಡಿ ವರೆಗೆ ದಂಡ ಪಾವತಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
A 26-year-old Indian national was sentenced to nine months' jail on Monday for trying to leave Singapore during the height of the Covid pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X