ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸ್ನೇಹ ಪರ್ವ; ಅಮೆರಿಕದಿಂದ ಭಾರತಕ್ಕೆ $4 ಬಿಲಿಯನ್ ನಷ್ಟು ತೈಲ ಆಮದು

|
Google Oneindia Kannada News

ಸಿಂಗಾಪೂರ್, ನವೆಂಬರ್ 14 : ಅಮೆರಿಕದಿಂದ ಇನ್ನೂ ಹೆಚ್ಚಿನ ತೈಲ ಹಾಗೂ ಅನಿಲ ಆಮದು ಮಾಡಿಕೊಳ್ಳಲು ಭಾರತ ಸಿದ್ಧವಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ. "ವ್ಯಾಪಾರ ವಿಸ್ತರಣೆಯ ಹಾದಿಯಲ್ಲಿ ಅಮೆರಿಕದಿಂದ ಹೆಚ್ಚು ಅನಿಲ ಹಾಗೂ ತೈಲ ಆಮದು ಮಾಡಿಕೊಳ್ಳಲು ನಾವು ಸಿದ್ಧ ಎಂಬುದನ್ನು ತಿಳಿಸಿದ್ದೇವೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಸಿಯಾನ್ ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ

ಇದೇ ತಿಂಗಳು ಇರಾನ್ ನ ವಿರುದ್ಧ ಮತ್ತಷ್ಟು ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ಹೇರಿದೆ. ಆ ದೇಶದಿಂದ ಯಾರೂ ತೈಲ ಆಮದು ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ಕೂಡ ನೀಡಿದೆ. ಇರಾನ್ ನ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ತಡೆಯೊಡ್ಡುವ ಸಲುವಾಗಿ ಕೆಲವು ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.

India says ready to import more gas, oil from the US

ಆದರೆ, ಹೀಗೆ ಸಂಪೂರ್ಣ ನಿರ್ಬಂಧ ಹೇರಿದರೆ ತೈಲ ಬೆಲೆ ದಿಢೀರ್ ಏರಿಕೆ ಆಗುತ್ತದೆ. ಆದ್ದರಿಂದ ಇರಾನ್ ನಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಭಾರತ ಸೇರಿದಂತೆ ಎಂಟು ರಾಷ್ಟ್ರಗಳಿಗೆ ವಾಷಿಂಗ್ಟನ್ ನಿಂದ ಕೆಲ ಮಟ್ಟಿಗೆ ವಿನಾಯ್ತಿ ನೀಡಲಾಗಿದೆ.

ಸೌದಿ ಅರೇಬಿಯಾದಿಂದ ಭಾರತಕ್ಕೆ ಸಿಗಲಿದೆ ಹೆಚ್ಚುವರಿ ತೈಲಸೌದಿ ಅರೇಬಿಯಾದಿಂದ ಭಾರತಕ್ಕೆ ಸಿಗಲಿದೆ ಹೆಚ್ಚುವರಿ ತೈಲ

ಈ ವರ್ಷ ಭಾರತವು ಅಮೆರಿಕದಿಂದ $4 ಬಿಲಿಯನ್ ನಷ್ಟು ತೈಲ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಗೋಖಲೆ ಹೇಳಿದ್ದಾರೆ.

English summary
India’s foreign secretary Vijay Gokhale said on Wednesday the country is open to importing more oil and gas from the United States. “We expressed our readiness to import more gas and more oil from United States as a way of expanding trade,” Gokhale told reporters on the sidelines of an Asian summit attended by Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X