ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಜಾಲತಾಣ ಸ್ಪರ್ಧೆ: ಶಿವಮೊಗ್ಗ ಜಿಲ್ಲಾ ಪಂಚಾಯಿತಿ ರಾಜ್ಯಕ್ಕೆ ಪ್ರಥಮ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 19: ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಕಾರ್ಯವೈಖರಿ, ಪಂಚಾಯಿತಿಯ ಕಾರ್ಯಕ್ರಮಗಳು ಹಾಗೂ ಜನಸ್ಪಂದನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟರ ಮಟ್ಟಿಗೆ ಫಲಪ್ರದವಾಗಿದೆ ಎಂಬ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಪ್ರಥಮ ಸ್ಥಾನ ಪಡೆದಿದೆ.

ರಾಜ್ಯದಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ ಎಲ್ಲಾ ಜಿಲ್ಲಾ ಪಂಚಾಯಿತಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಕಾರ್ಯಕ್ರಮಗಳ ವಿವರ, ಮಾಹಿತಿ, ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ನೀಡುತ್ತಲೇ ಇದ್ದವು. ಎಷ್ಟರ ಮಟ್ಟಿಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಇವು ಫಲಪ್ರದವಾಗಿದೆ ಎಂಬುದನ್ನು ಗಮನಿಸುವಂತಹ ಸ್ಪರ್ಧೆ ಇದಾಗಿತ್ತು.

ಶಿವಮೊಗ್ಗ:12 ಪಾರಂಪರಿಕ ಕಟ್ಟಡಗಳ 3ಡಿ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆಶಿವಮೊಗ್ಗ:12 ಪಾರಂಪರಿಕ ಕಟ್ಟಡಗಳ 3ಡಿ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ

ಕಳೆದ ಅವಧಿಯಲ್ಲಿನ ಕಾಮಗಾರಿಗಳ ಸಮಗ್ರ ವಿವರಗಳನ್ನು, ಅದಕ್ಕೆ ಸಂದ ಲೈಕ್ ಗಳ ಕುರಿತ ವಿಚಾರ ವಿನಿಮಯಗಳನ್ನು ಪರಾಮರ್ಶಿಸುವ ಕಾರ್ಯವಾಗಿತ್ತು. ಆರಂಭದಿಂದಲೂ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ತನ್ನ ಕಾರ್ಯಚಟುವಟಿಕೆಗಳನ್ನು ಸಮಾಜಮುಖಿಯಾಗಿ ಬಿಂಬಿಸುತ್ತಿದ್ದು, ಅತಿ ಹೆಚ್ಚು ವೀಕ್ಷಕರನ್ನು ಹೊಂದಿತ್ತು. ಸ್ಪರ್ಧೆಯ ಕೊನೆಯ ಅವಧಿಯಲ್ಲಿ ಮಂಡ್ಯ ಜಿಲ್ಲೆ ಶಿವಮೊಗ್ಗ ಜಿಲ್ಲೆಗೆ ನೇರಸ್ಪರ್ಧೆ ನೀಡಿತ್ತು.

Shivamogga: Zilla Panchayat Won First Place In Social Media Competition

ಅಂತಿಮವಾಗಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಪ್ರಥಮ ಸ್ಥಾನ ಪಡೆಯುವ ಮೂಲಕ ಅಕ್ಟೋಬರ್ 2ರಂದು ಪ್ರಶಸ್ತಿ ಸ್ವೀಕರಿಸಲು ಸಿದ್ಧವಾಗಿದೆ. ಮಂಡ್ಯ ಜಿಲ್ಲಾ ಪಂಚಾಯತ್ ಎರಡನೇ ಸ್ಥಾನವನ್ನು ಪಡೆದಿದೆ. ಶಿವಮೊಗ್ಗ ಜಿಪಂನ ಕಾರ್ಯಕ್ರಮಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಬಹುಮಾನ ಪಡೆಯಲು ಕಾರಣಕರ್ತರಾದ ಜಿಲ್ಲೆಯ ವೀಕ್ಷಕರನ್ನು ಜಿಲ್ಲಾ ಪಂಚಾಯಿತಿ ಪರವಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ ಅಭಿನಂದಿಸಿದರು.

English summary
The Shivamogga zilla Panchayat has been ranked number one in the competition of social media which analises the effectiveness of all zilla panchayats programmes in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X