ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು: 7 ದಿನದ ಮಗು ಬೆಂಗಳೂರಿಗೆ ಕರೆತರಲು ಝಿರೋ ಟ್ರಾಫಿಕ್

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 10: 7 ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ.

ಸೋಮವಾರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರಲಾಗುತ್ತಿದೆ. ಮಗುವಿರುವ ಆಂಬ್ಯುಲೆನ್ಸ್ ಈಗಾಗಲೇ ಶಿವಮೊಗ್ಗದಿಂದ ಝಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಹೊರಟಿದೆ.

ಮಗುವಿಗಾಗಿ 'ಮಿಂಚಿನ ಓಟ'; ಹೀರೋ ಆದ ಆಂಬುಲೆನ್ಸ್ ಚಾಲಕಮಗುವಿಗಾಗಿ 'ಮಿಂಚಿನ ಓಟ'; ಹೀರೋ ಆದ ಆಂಬುಲೆನ್ಸ್ ಚಾಲಕ

Zero traffic Ambulance Rushing A Baby From Shivamogga To Bengaluru

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಲೆಮಲ್ಲೂರು ಗ್ರಾಮದ ಸ್ವಾಮಿ ಮತ್ತು ಸುಧಾ ದಂಪತಿಯ ಮಗುವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತರಲಾಗುತ್ತಿದೆ. 7 ದಿನದ ಮಗುವಿನ ಹೃದಯದಲ್ಲಿ ರಂಧ್ರವಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಬರಲಾಗುತ್ತಿದೆ.

ಆಗುಂಬೆಯ ದಟ್ಟಕಾಡಿನಲ್ಲಿ ಹೆಣ್ಣು ಮಗು ಪತ್ತೆ.! ಮುಂದೆ ಆಗಿದ್ದೇನು?ಆಗುಂಬೆಯ ದಟ್ಟಕಾಡಿನಲ್ಲಿ ಹೆಣ್ಣು ಮಗು ಪತ್ತೆ.! ಮುಂದೆ ಆಗಿದ್ದೇನು?

10 ದಿನದ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಸುಧಾ ಫೆಬ್ರವರಿ 4ರಂದು ಮಗುವಿಗೆ ಜನ್ಮ ನೀಡಿದ್ದರು. ಸ್ಕ್ಯಾನಿಂಗ್ ಮಾಡಿದಾಗ ಮಗುವಿನ ಹೃದಯಲ್ಲಿ ರಂಧ್ರ ಇರುವುದು ಪತ್ತೆಯಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು.

ಕೇರಳದ ಒಂದು ವರ್ಷದ ಮಗು ಗೆದ್ದಿತು 7 ಕೋಟಿ ರೂ. ಲಾಟರಿಕೇರಳದ ಒಂದು ವರ್ಷದ ಮಗು ಗೆದ್ದಿತು 7 ಕೋಟಿ ರೂ. ಲಾಟರಿ

ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ ಮಗು ಇರುವ ಆಂಬ್ಯುಲೆನ್ಸ್ ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪುವ ತನಕ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದಿಂದ ಈಗಾಗಲೇ ಆಂಬ್ಯುಲೆನ್ಸ್ ಹೊರಟಿದೆ. ಪೊಲೀಸ್ ಎಸ್ಕಾರ್ಟ್‌ ಮೂಲಕ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.

ಕಳೆದ ವಾರ ಮಂಗಳೂರಿನಿಂದ ಬೆಂಗಳೂರಿಗೆ 40 ದಿನದ ಮಗುವನ್ನು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಗ ಸಹ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.

English summary
The ambulance started its journey towards Bengaluru in zero traffic from Megan hospital Shivamogga. 7 days child in ambulance and doctors suggested that the child be taken for advance treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X