• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ತುಂಗಾ ನದಿಗೆ ಬಿದ್ದ ಯುವತಿ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ನವೆಂಬರ್ 13: ಚಲಿಸುತ್ತಿರುವ ರೈಲಿನಿಂದ ತುಂಗಾ ನದಿಗೆ ಯುವತಿಯೊಬ್ಬಳು ಬಿದ್ದಿರುವ ಘಟನೆ ನ.12ರ ಗುರುವಾರ ರಾತ್ರಿ ನಡೆದಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಜನಶತಾಬ್ದಿ ರೈಲಿನಿಂದ ಯುವತಿ ನದಿಗೆ ಬಿದ್ದಿದ್ದಾಳೆ.

ಗುರುವಾರ ರಾತ್ರಿ ಸುಮಾರು 10.45ಕ್ಕೆ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ರೈಲಿನಲ್ಲಿ ಯುವತಿ ಸಹನಾ (24) ತನ್ನ ತಂದೆ ತಾಯಿ ಜೊತೆ ಪ್ರಯಾಣಿಸುತ್ತಿದ್ದಳು. ರೈಲು ಶಿವಮೊಗ್ಗದ ತುಂಗಾ ಸೇತುವೆ ಮೇಲೆ ಬರುತ್ತಿದ್ದ ವೇಳೆಗೆ ಸಹನಾ ನದಿಗೆ ಬಿದ್ದಿದ್ದಾಳೆ.

ಶಿವಮೊಗ್ಗ: ತುಂಗಾನದಿಗೆ ಹಾರಿ ಯುವ ಪ್ರೇಮಿಗಳ ಆತ್ಮಹತ್ಯೆ ಯತ್ನ

ಯುವತಿ ಗಾಡಿಕೊಪ್ಪದ ನಿವಾಸಿಯಾಗಿದ್ದು, ನದಿಗೆ ಹಾರಿದ್ದಾಳೋ ಅಥವಾ ರೈಲಿನಿಂದ ಕಾಲು ಜಾರಿ ಬಿದ್ದಿದ್ದಾಳೋ ಎಂಬುದರ ಬಗ್ಗೆ ಮಾಹಿತಿ ತಿಳಿದುಬರಬೇಕಿದೆ.

ಘಟನೆ ನಡೆದ ತಕ್ಷಣವೇ ಯುವತಿಯ ತಂದೆ ತಾಯಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ನಿರೀಕ್ಷೆಯಷ್ಟು ಇಲ್ಲವಾದುದರಿಂದ ಬೋಟ್ ಮೂಲಕ ಹೋಗುವುದು ಅಗ್ನಿಶಾಮಕದಳದವರಿಗೆ ಕಷ್ಟವಾಗಿದೆ.

ಶೋಧಕಾರ್ಯದಲ್ಲಿ ಡಿಎಫ್ ಒ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಸಿಬ್ಬಂದಿ ದೇವೇಂದ್ರನಾಯಕ್, ಸತೀಶ್ ಮಂಜುನಾಥ್, ರಮೇಶ್, ಯೋಗೀಶ್ ಹಾಗೂ ವಿನಯ್ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

English summary
The incident took place on Thursday night, November 12, where a young woman fell from a moving train into the Tunga River in Shivamogga,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X