ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಯುವ ವಿಜ್ಞಾನಿಗಳ ಸಂಶೋಧನೆ: 2.45 ಗಂಟೆಯೊಳಗೆ ಕೊರೋನಾ ವೈರಸ್ ನಾಶ!: ಇಲ್ಲಿದೆ ಮಾಹಿತಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 25: ಮನುಕುಲಕ್ಕೆ ಮಾರಕವಾದ ಕೊರೊನಾ ವೈರಸ್ ಸಾಂಕ್ರಾಮಿಕ ವೈರಾಣುಗಳ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಡುತ್ತಾ ಬಸವಳಿಯುತ್ತಿರುವ ಸರ್ಕಾರ ಮತ್ತು ಸಾರ್ವಜನಿಕರಿಗೆ ಆಶಾದಾಯಕವಾದ ಪರಿಹಾರವೊಂದನ್ನು ಶಿವಮೊಗ್ಗದ ಉತ್ಸಾಹಿ ವಿಜ್ಞಾನಿಗಳ ತಂಡವೊಂದು ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿರುವುದು ವೈದ್ಯಕೀಯ ಲೋಕದಲ್ಲಿ ಕುತೂಹಲ ಮೂಡಿಸಿದೆ.

ಶಿವಮೊಗ್ಗದಲ್ಲಿರುವ ಬಾಲಾಜಿ ಪೊಲಿ ಪ್ಯಾಕ್ ಎಂಬ ಸಂಸ್ಥೆಯು ಆಡ್ ನ್ಯಾನೊ ಟೆಕ್ನೊಲೊಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಈ ಸಂಶೋಧನೆಯನ್ನು ಕೈಗೆತ್ತಿಕೊಂಡು ಫಲಶೃತಿ ಕಂಡಿವೆ.

ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಸರ್ಕಾರದ ಈಗಿನ ವೈದ್ಯಕೀಯ ಕ್ಷೇತ್ರದ ಪ್ರಕಾರ ಯಾವುದಾದರೂ ವಸ್ತುಗಳ ಮೇಲ್ಮೈ ಮೇಲೆ ಕೊರೊನಾ ವೈರಸ್ ಅಂಟಿಕೊಂಡರೆ ಅದರ ಆಯಸ್ಸು ಸುದೀರ್ಘ ಮೂರು ದಿನಗಳವರೆಗೆ ಇರುತ್ತದೆ.

ವೈರಸ್ 2 ಗಂಟೆ 45 ನಿಮಿಷದಲ್ಲಿ ಸತ್ತು ಹೋಗುತ್ತವೆ

ವೈರಸ್ 2 ಗಂಟೆ 45 ನಿಮಿಷದಲ್ಲಿ ಸತ್ತು ಹೋಗುತ್ತವೆ

ಆದರೆ ತಾವು ಸಂಶೋಧನೆಯ ಮೂಲಕ ಕಂಡುಹಿಡಿದ ಈ ಪೋಲಿಮರ್ ಇಥೆಲಿನ್ ಶೀಟ್ ಮೇಲೆ ಅಂಟಿಕೊಂಡಿರುವ ಕೊರೊನಾ ವೈರಾಣು ಕೇವಲ 2 ಗಂಟೆ 45 ನಿಮಿಷದಲ್ಲಿ ಸತ್ತು ಹೋಗುತ್ತವೆ. ಬೇರೆಯವರಿಗೆ ಹರಡುವುದನ್ನು ತಪ್ಪಿಸುತ್ತವೆ ಎಂದು ಬಾಲಾಜಿ ಪಾಲಿ ಪ್ಯಾಕ್‌ನ ಸಿಇಒ ವಿನಯ್ ಜಿ. ಹಾಗೂ ಯ್ಯಡ್ ನ್ಯಾನೋ ಟಕ್ನಾಲಜಿಸ್ ಪೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅದ್ನಾನ್ ಜಾವಿದ್ ಅವರ ಅಂಬೋಣವಾಗಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ವೈರಾಣುಗಳನ್ನು ನಾಶ

ಅತ್ಯಂತ ಕಡಿಮೆ ಅವಧಿಯಲ್ಲಿ ವೈರಾಣುಗಳನ್ನು ನಾಶ

ವರದಿಯೊಂದರ ಪ್ರಕಾರ ಕೋವಿಡ್-19 ವೈರಾಣುಗಳು ವಿವಿಧ ವಸ್ತುಗಳ ಮೇಲ್ಮೈಯಲ್ಲಿ ಒಂದರಿಂದ ಮೂರು ದಿವಸಗಳವರೆಗೆ ಜೀವಂತವಾಗಿರುತ್ತವೆ. ಇದರಿಂದ ಪಾರಾಗುವುದು ವೈದ್ಯ ಲೋಕಕ್ಕೆ ಒಂದು ದೊಡ್ಡ ಸವಾಲೇ ಆಗಿದೆ. ಈ ಸಂಧಿಗ್ದತೆಯಿಂದ ಪಾರಾಗಲು ತಾವು ಕಂಡು ಹಿಡಿದಿರುವುದೇ ಅತ್ಯಂತ ಕಡಿಮೆ ಅವಧಿಯಲ್ಲಿ ಈ ವೈರಾಣುಗಳನ್ನು ನಾಶ ಮಾಡುವ ಪಾಲಿಮರ್ ಇಥೆಲಿನೆ ಶೀಟ್ ಇದಾಗಿದೆ ಎಂದು ತಿಳಿಸಿದ್ದಾರೆ.

ಸಂಶೋಧನೆಯ ಕುರಿತು ಸ್ಯಾಂಪಲ್ ಪರೀಕ್ಷೆ

ಸಂಶೋಧನೆಯ ಕುರಿತು ಸ್ಯಾಂಪಲ್ ಪರೀಕ್ಷೆ

ಕೋವಿಡ್-19 ವೈರಾಣುಗಳನ್ನು ಅತಿ ಕಡಿಮೆ ಅವಧಿಯಲ್ಲಿ ಸಾಯಿಸುವ ಈ ಪಾಲಿಥಿನ್ ಹಾಳೆಯ ಅಧಿಕೃತತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)ಗೆ ಈ ಹೊಸ ಸಂಶೋಧನೆ ಕುರಿತು ಮಾಹಿತಿ ನೀಡಲಾಗಿತ್ತು. ಅದರ ಸಲಹೆಯಂತೆ ತಮಿಳುನಾಡಿನ ಕೊಯಿಮತ್ತೂರಿನಲ್ಲಿರುವ ಕೋಲ್ಕತ್ತಾ ಮೂಲಕ ಟೆಕ್ನಿಕಲ್ ಯ್ಯಂಡ್ ಇನ್ನೊವೇಶನ್ ಟೆಕ್ಸ್ ಟೈಲ್ಸ್ ಸೊಲ್ಯೂಶನ್ ಕೇಂದ್ರ (ಟಿಐಟಿಎಸ್ ಸಿ)ದಲ್ಲಿ ಈ ಸಂಶೋಧನೆಯ ಕುರಿತು ಸ್ಯಾಂಪಲ್ ಪರೀಕ್ಷೆ ಮಾಡಿಸಲಾಗಿದೆ.

ವೈರಸ್ ಸಾಯುವಿಕೆಯ ಪ್ರಮಾಣ ಶೇ.99.99ರಷ್ಟಿರುತ್ತದೆ

ವೈರಸ್ ಸಾಯುವಿಕೆಯ ಪ್ರಮಾಣ ಶೇ.99.99ರಷ್ಟಿರುತ್ತದೆ

ಈ ಕೇಂದ್ರವು ಆ್ಯಂಟಿ ವೈರಸ್ ಚಟುವಟಿಕೆಗಳ ಕುರಿತ ರಾಷ್ಟ್ರೀಯ ಪರೀಕ್ಷೆ ಮತ್ತು ಕೆಲಿಬ ರೇಶನ್ ಪ್ರಯೋಗಾಲಯದ ಮಂಡಳಿಯಾಗಿದ್ದು (ಎನ್'ಎಬಿಎಲ್) ಸಾರ್ಸ್ (ಎಸ್‌ಎಆರ್'ಎಸ್) ಕೋವಿಡ್-2 ಚಟುವಟಿಕೆಗಳ ಹಿನ್ನೆಲೆಯಲ್ಲಿ ಸದರಿ ಸಂಶೋಧನೆಗೆ ಪ್ರಮಾಣ ಪತ್ರ ಲಭಿಸಿದೆ ಎಂದು ಅವರು ಹೇಳಿದ್ದಾರೆ.

ಈ ವರದಿಯ ಪ್ರಕಾರ ಈ ಬಾಲಾಜಿ ಪಾಲಿ ಪ್ಯಾಕ್ ಸಂಸ್ಥೆಯವರು ಸಿದ್ಧಪಡಿಸಿದ ಪಾಲಿಮರ್ ಇಥೆಲಿನ್ ಹಾಳೆಯ ಮೇಲೆ ಅಂಟಿಕೊಳ್ಳುವ ಕೊರೋನಾ ವೈರಾಣುಗಳು ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಕೇವಲ 2 ಗಂಟೆ 54 ನಿಮಿಷಗಳಲ್ಲಿ ಸಂಪೂರ್ಣ ಸತ್ತು ಹೋಗುತ್ತವೆ. ಈ ಸಾಯುವಿಕೆಯ ಪ್ರಮಾಣ ಶೇ.99.99ರಷ್ಟಿರುತ್ತದೆ ಎಂದು ಆ ವರದಿ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದರು.

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಶ್ರೀರಕ್ಷೆ

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಶ್ರೀರಕ್ಷೆ

ಈ ಸಂಶೋಧನೆಗೆ ಟಿ.ಐ.ಟಿ.ಎಸ್.ಸಿ. ಪ್ರಯೋಗಾಲಯವು ಐಎಸ್ಒ 21702 ಅಡಿಯಲ್ಲಿ ಪ್ರಯೋಗಕ್ಕೆ ಒಳಪಡಿಸಿದ ಪರಿಣಾಮ ಈ ಅಧಿಕೃತ ಪ್ರಮಾಣಪತ್ರ ಲಭಿಸಲು ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಆ್ಯಂಟಿ ವೈರಸ್ ಹಾಳೆಯ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಿದ ಅವರು, ಈ ಹಾಳೆಯ ಮೇಲ್ಮೈ ಮೇಲೆಯೇ ಕೋವಿಡ್ ವಿರೋಧಿ ಅಂಶ ಇರುತ್ತಿದ್ದು, ಇದು ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯುತ್ತದೆ ಅಥವಾ ನಿಯಂತಿಸುತ್ತದೆ ಎಂದು ವಿವರಿಸಿದರು. ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಇದು ಶ್ರೀರಕ್ಷೆಯಂತಿದ್ದು, ಆರೋಗ್ಯ ಕಾರ್ಯಕರ್ತರಿಗೆ ಸ್ವಚ್ಛಪರಿಸರದಲ್ಲಿ ಸುರಕ್ಷಿತವಾಗಿ, ಅತಿ ಕಡಿಮೆ ಅಪಾಯ ಹೊಂದುವುದಲ್ಲದೆ ಸೋಂಕು ತಪ್ಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಪಾಲಿಮರ್ ಹಾಳೆಗಳನ್ನು ಕೋವಿಡ್ ಆಸ್ಪತ್ರೆಗಳಲ್ಲಿ ಉಪಯೋಗ

ಪಾಲಿಮರ್ ಹಾಳೆಗಳನ್ನು ಕೋವಿಡ್ ಆಸ್ಪತ್ರೆಗಳಲ್ಲಿ ಉಪಯೋಗ

ತಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾವುದೇ ವಸ್ತುಗಳ ಮೇಲ್ಮೈ ಮೇಲೆ ಕೋವಿಡ್-19 ವೈರಾಣುಗಳು ಇದ್ದರೆ ಅವುಗಳನ್ನು ಕೇವಲ ಹತ್ತೇ ನಿಮಿಷಗಳಲ್ಲಿ ಸಾಯಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದ ಅವರು, ಸರ್ಕಾರ, ಸಂಬಂಧಿಸಿದವರು ಸಹಕಾರ ನೀಡಿದರೆ ಅದನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ವಿವರಿಸಿದರು.

ನೂತನವಾಗಿ ಸಿದ್ಧಪಡಿಸಿದ ಈ ಪಾಲಿಮರ್ ಹಾಳೆಗಳನ್ನು ಕೋವಿಡ್ ಆಸ್ಪತ್ರೆಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಟ್ರಾನ್ಸ್ ಪೋರ್ಟ್ ಸಂಸ್ಥೆಗಳಲ್ಲಿ, ನೆಲ ಹಾಸುವಾಗಿ, ಪಿಪಿಇ ಕಿಟ್‌ಗಳಿಗೆ ಮತ್ತು ಗೋಡೆ ಮುಚ್ಚುವ ಹಾಳೆಗಳನ್ನಾಗಿ, ಸೀಟ್ ಕವರುಗಳನ್ನಾಗಿ ಉಪಯೋಗಿಸಬಹುದು ಎಂದು ಮಾಹಿತಿ ನೀಡಿದರು.

Recommended Video

Whatsapp ಹಳೆಯ ಸಂದೇಶಗಳು ಅಷ್ಟು ಸುಲಭವಾಗಿ ಸಿಗುತ್ತಾ ? | Oneindia Kannada
ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು

ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು

ಉಪಯೋಗಿಸಿದ ಈ ಪಾಲಿಮರ್ ಹಾಳೆಗಳನ್ನು ವಿಲೇವಾರಿ ಮಾಡುವುದೂ ಸುಲಭವಾಗಿದ್ದು, ಯಾವುದೇ ತೊಂದರೆ, ಅಪಾಯವಿಲ್ಲದೆ ಸೋಂಕು ತಗುಲದಂತೆ ವಿಲೇವಾರಿ ಮಾಡಬಹುದು ಎಂದೂ ಅವರು ತಿಳಿಸಿದರು. ಕೋವಿಡ್-19 ನಿಯಂತ್ರಣಕ್ಕೆ ತಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಅತ್ಯಂತ ಕೈಗೆಟುಕುವ ಬೆಲೆಗೆ ಲಭ್ಯವಿದ್ದು, ಸರ್ಕಾರ-ವೈದ್ಯಕೀಯ ಕ್ಷೇತ್ರವು ಅದರ ಸದುಪಯೋಗಕ್ಕೆ ಮುಂದಾಗಿ ತಮ್ಮಂತಹ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.

English summary
Shivamogga: Young scientists developed polymer ethylene in participation with balaji poly pack to kill coronavirus in just 2 hour 45 min.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X