ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಲಾಖ್ ಬೇಡ, ಗಂಡನನ್ನು ಹುಡುಕಿಕೊಡಿ ಎಂದು ಡಿಸಿ ಕಚೇರಿ ಎದುರು ಪತ್ನಿ ಪ್ರತಿಭಟನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 14: "ನನ್ನ ಗಂಡ ನನಗೆ ತಲಾಖ್ ನೀಡಿದ್ದಾನೆ. ಆದರೆ ನನಗೆ ಮತ್ತು ಮಗಳಿಗೆ ಜೀವನ ನಡೆಸುವುದು ಕಷ್ಟವಾಗಿದೆ. ನನಗೆ ನನ್ನ ಗಂಡನನ್ನು ಹುಡುಕಿಕೊಡಿ" ಎಂದು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ ಶಿವಮೊಗ್ಗದ ಈ ಮಹಿಳೆ.

ವಾಟ್ಸಪ್ ಮೂಲಕ ತಲಾಖ್ ನೀಡಿದ ದುಬೈ ಗಂಡ; ಶಿವಮೊಗ್ಗದಲ್ಲಿ ದಾಖಲಾಯಿತು ಮೊದಲ ಕೇಸ್ವಾಟ್ಸಪ್ ಮೂಲಕ ತಲಾಖ್ ನೀಡಿದ ದುಬೈ ಗಂಡ; ಶಿವಮೊಗ್ಗದಲ್ಲಿ ದಾಖಲಾಯಿತು ಮೊದಲ ಕೇಸ್

ಇದೇ ಸೆಪ್ಟೆಂಬರ್ ನಲ್ಲಿ ಶಿವಮೊಗ್ಗದ ಈ ಮುಸ್ಲಿಂ ದಂಪತಿ ನಡುವೆ ಬಿರುಕು ಮೂಡಿತ್ತು. ಪ್ರೀತಿಸಿ ಮದುವೆಯಾಗಿ 20 ವರ್ಷಗಳಿಂದ ಯಾವುದೇ ಸಮಸ್ಯೆ ಇಲ್ಲದೆ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದ ಪತಿ ಮುಸ್ತಫಾ ವಾಟ್ಸಪ್ ಮೂಲಕ ತಲಾಖ್ ನೀಡಿದ್ದನು. ಇದನ್ನು ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದರು. ಆದರೂ ಈ ಬಗ್ಗೆ ಗಂಡನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಬೇಸತ್ತು ಆಯೇಷಾ ಮತ್ತು ಮಗಳು ನ್ಯಾಯ ಕೊಡಿಸಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದರು ಇಂದು ಧರಣಿ ನಡೆಸಿದರು.

Women Protest In DC Office Against Triple Talaq In Shivamogga

ವಾಟ್ಸಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದ ಮುಸ್ತಫಾ ಬೇಗ್ ದುಬೈನಲ್ಲಿ ಕುಳಿತಿದ್ದಾನೆ. ಇವರ ಸ್ನೇಹಿತರ ಪ್ರಕಾರ ಮುಸ್ತಫಾ ದುಬೈ ಬಿಟ್ಟು ಬರುವುದಿಲ್ಲವೆಂದು ತಿಳಿದುಬಂದಿದೆ. "21 ವರ್ಷ ನಾನು ಮುಸ್ತಫಾ ಬೇಗ್ ಜೊತೆ ಸಂಸಾರ ಮಾಡಿದ್ದೇನೆ. ಏಕಾಏಕಿ ತ್ರಿವಳಿ ತಲಾಖ್ ನೀಡಿರುವುದು ನ್ಯಾಯಸಮ್ಮತವೇ" ಎಂದು ಆಯೆಷಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಲ್ಲಿ ಮೊದಲ ತಲಾಖ್ ಕೇಸ್, ಟೆಕ್ಕಿ ಪತಿ ವಿರುದ್ಧ ಎಫ್‌ಐಆರ್ಬೆಂಗಳೂರಲ್ಲಿ ಮೊದಲ ತಲಾಖ್ ಕೇಸ್, ಟೆಕ್ಕಿ ಪತಿ ವಿರುದ್ಧ ಎಫ್‌ಐಆರ್

"ಮಗಳ ಭವಿಷ್ಯಕ್ಕೆ ಮುಸ್ತಫಾ ನಡವಳಿಕೆ ತೊಂದರೆಯಾಗುತ್ತದೆ. ಹಾಗಾಗಿ ಮತ್ತೆ ನಾನು ಮುಸ್ತಫಾ ಜೊತೆ ಬಾಳಲು ಅನುಕೂಲ ಮಾಡಿಕೊಡಿ" ಎಂದು ಆಯೇಷಾ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

English summary
Shivamogga Women protest in dc office against triple talaq biven by her husband and she requested dc to solve this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X