ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಶ್ವರಪ್ಪ ಎದುರೇ ಪಿಡಿಒ ತರಾಟೆಗೆ ತೆಗೆದುಕೊಂಡ ಮಹಿಳೆ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 14; ಕೋವಿಡ್ ಸೋಂಕು ನಿಯಂತ್ರಣಕ್ಕೆ ಮನೆ-ಮನೆಗೆ ತೆರಳಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಪಿಡಿಒವನ್ನು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಹಸೂಡಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆ ನಡೆಸಿದರು. ಸಭೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣದ ಬಗ್ಗೆ ಪಿಡಿಒ ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್‌ಗಳು ಸೀಲ್‌ಡೌನ್

ಸೋಂಕು ನಿಯಂತ್ರಣಕ್ಕೆ ಮನೆ-ಮನೆಗೆ ತೆರಳಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಮಾಹಿತಿಗೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮದ ಮಹಿಳೆ ಮೀನಮ್ಮ, "ಸಚಿವರ ಎದುರು ಸುಳ್ಳು ಮಾಹಿತಿ ನೀಡುತ್ತಿದ್ದೀರಾ?" ಎಂದು ಆಕ್ಷೇಪಿಸಿದರು.

ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲ

Woman Upset With PDO For Not Sanitize Village

"ಸ್ಯಾನಿಟೈಸ್ ಮಾಡದೇ ಮಾಡಿದ್ದೀವಿ ಎಂದು ಹೇಳುತ್ತಿದ್ದೀರಾ?. ಬರೀ ಫೋಟೊ ಹೊಡೆದು ಹಾಕಿದರೆ ಸಾಕೆ?. ಎಲ್ಲಿ ಸ್ಯಾನಿಟೈಸೇಷನ್ ಮಾಡಿದ್ದೀರಾ ಹೇಳಿ?, ಸುಮ್ಮನೆ ಸುಳ್ಳು ಹೇಳುತ್ತೀರಾ?" ಎಂದು ಪ್ರಶ್ನಿಸಿದರು.

ಗ್ರಾ. ಪಂಚಾಯತ್; ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ! ಗ್ರಾ. ಪಂಚಾಯತ್; ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ!

ಸಚಿವ ಈಶ್ವರಪ್ಪ, "ಆಯ್ತು ಸುಮ್ಮನಿರಮ್ಮ ನಾನು ಕೇಳುತ್ತೇನೆ, ನೀನೆ ಮಾತನಾಡಿದರೆ ಹೇಗೆ? ಎಂದು ಮಹಿಳೆಯನ್ನು ಸಮಾಧಾನಪಡಿಸಿದರು.

ಆದರೆ ಸಚಿವ ಈಶ್ವರಪ್ಪ ಮಾತಿಗೂ ಬೆಲೆ ಕೊಡದ ಮಹಿಳೆ ಪಿಡಿಒ ವಿರುದ್ಧ ಹರಿಹಾಯ್ದರು. ಕೊನೆಗೂ ಮಹಿಳೆಯನ್ನು ಸಭೆಯಿಂದ ಹೊರ ಕಳಿಸಲಾಯಿತು.

English summary
Woman upset with panchayat development officer (PDO) at Shivamogga in the presence of minister K. S. Eshwarappa for not sanitize the village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X