ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಸ್ ಸ್ಟಾಂಡ್ ರಾಘುವನ್ನು ಸೋಲಿಸುವುದು ನಮ್ಮ ಗುರಿ'

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 19 : 'ಬಸ್ ಸ್ಟಾಂಡ್ ರಾಘುವನ್ನು ಸೋಲಿಸುವುದು ನಮ್ಮ ಗುರಿಯಾಗಿದೆ. ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿ ಬಂಗಾರಪ್ಪ ಅವರ ಆತ್ಮಕ್ಕೆ ಅವರ ಅಭಿಮಾನಿಗಳು ಶಾಂತಿ ಕೊಡಿಸಬೇಕಿದೆ' ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಜೆಡಿಎಸ್-ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಕಣದಲ್ಲಿದ್ದಾರೆ.

ಮಧು ಮತ್ತೆ ವಿದೇಶಕ್ಕೆ ಹೋಗಲಿದ್ದಾರೆ : ಕುಮಾರ್ ಬಂಗಾರಪ್ಪ ಲೇವಡಿಮಧು ಮತ್ತೆ ವಿದೇಶಕ್ಕೆ ಹೋಗಲಿದ್ದಾರೆ : ಕುಮಾರ್ ಬಂಗಾರಪ್ಪ ಲೇವಡಿ

'ಪ್ರತಿನಿತ್ಯ ಮೈತ್ರಿ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದು ಹೇಳುವ ಬಿಜೆಪಿಗೆ, ಅವರು ಜೆಡಿಎಸ್ ಜೊತೆ ಸರ್ಕಾರ ಮಾಡಿದಾಗ ಆ ಮೈತ್ರಿ ಏನಾಗಿತ್ತು?. ಯಡಿಯೂರಪ್ಪ ಅಪವಿತ್ರ ಮೈತ್ರಿ ಎಂದು ಮಾತನಾಡುವುದನ್ನು ಬಿಡಬೇಕು' ಎಂದು ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಹೇಳಿದ್ದೇನು?ಶಿವಮೊಗ್ಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಹೇಳಿದ್ದೇನು?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚ ಉನಾವಣೆ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಮಾಜಿ ಮುಖ್ಯಮಂತ್ರಿಗಳ ಪುತ್ರರಾದ ಬಿ.ವೈ.ರಾಘವೇಂದ್ರ, ಮಧು ಬಂಗಾರಪ್ಪ ಮತ್ತು ಮಹಿಮಾ ಪಟೇಲ್ ಕಣದಲ್ಲಿದ್ದಾರೆ.

ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ

ಯಡಿಯೂರಪ್ಪ ಅವರಿಗೆ ಕಣ್ಣು ಕಾಣಿಸುತ್ತಿಲ್ಲ

ಯಡಿಯೂರಪ್ಪ ಅವರಿಗೆ ಕಣ್ಣು ಕಾಣಿಸುತ್ತಿಲ್ಲ

'ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಅಚ್ಛೇದಿನ್ ಬಂದಿದೆ. ಇತ್ತೀಚಿಗೆ ಯಡಿಯೂರಪ್ಪ ಅವರಿಗೆ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ. ಉಪ ಚುನಾವಣೆಯಲ್ಲಿ ಸೋತರೆ ಅಚ್ಚೇದಿನ್ ಬಂದಿದೆಯೋ? ಇಲ್ಲವೋ ತಿಳಿಯುತ್ತದೆ' ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.

ಸಂಖ್ಯಾಬಲದ ಮೇಲೆ ಮೈತ್ರಿ

ಸಂಖ್ಯಾಬಲದ ಮೇಲೆ ಮೈತ್ರಿ

'ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದು ಬಿಜೆಪಿ ಹೇಳುತ್ತದೆ. ಬಿಜೆಪಿ ಅವರು ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿರಲಿಲ್ಲವೇ?. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂಖ್ಯಾಬಲದ ಮೇಲೆ ರಚನೆಯಾಗಿದೆ. ಯಡಿಯೂರಪ್ಪ ಅವರು ಅಪವಿತ್ರ ಮೈತ್ರಿ ಎಂದು ಹೇಳುವುದನ್ನು ಬಿಡಬೇಕು' ಎಂದು ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.

ಬ್ರಾಹ್ಮಣ ಸಮಾಜಕ್ಕೆ ಅನ್ಯಾಯವಾಗಿದೆ

ಬ್ರಾಹ್ಮಣ ಸಮಾಜಕ್ಕೆ ಅನ್ಯಾಯವಾಗಿದೆ

'ಬಿಜೆಪಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವಾಗಿದೆ. ಕಾಂಗ್ರೆಸ್‌ ಬ್ರಾಹ್ಮಣ ಸಮುದಾಯಕ್ಕೆ ಉನ್ನತ ಸ್ಥಾನ ನೀಡಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಬಕೆಟ್ ಹಿಡಿದವರಿಗೆ ಮಾತ್ರ ಟಿಕಟ್ ಸಿಗುತ್ತದೆ' ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

ಮಧು ಬಂಗಾರಪ್ಪ ಏನು ಎಂದು ಗೊತ್ತಿದೆ

ಮಧು ಬಂಗಾರಪ್ಪ ಏನು ಎಂದು ಗೊತ್ತಿದೆ

'ಮಧು ಬಂಗಾರಪ್ಪ ಅವರು ಏನು ಎಂದು ರಾಜ್ಯದ ಜನರಿಗೆ ತಿಳಿದಿದೆ. ನಿಮ್ಮಿಂದ ಅವರ ಹೆಸರು ಯಾರಿಗೂ ತಿಳಿಯಬೇಕಿಲ್ಲ. ಪ್ರತಿಸ್ಪರ್ಧಿ ಹೆಸರು ಹೇಳದೇ ಪ್ರಚಾರ ನಡೆಸಿ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಯಾವುದೇ ಅರ್ಥವಿಲ್ಲ' ಎಂದು ಹೇಳಿದರು.

ತುಮರಿ ಸೇತುವೆ ನೆನಪಾಗುತ್ತದೆ

ತುಮರಿ ಸೇತುವೆ ನೆನಪಾಗುತ್ತದೆ

'ಚುನಾವಣೆ ಬಂದಾಗ ಯಡಿಯೂರಪ್ಪ ಅವರಿಗೆ ತುಮರಿ ಸೇತುವೆ ಮತ್ತು ರೈಲು ಯೋಜನೆಗಳು ನೆನಪಾಗುತ್ತವೆ. ಯಡಿಯೂರಪ್ಪ ಅವರು ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ' ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

English summary
Sagar assembly constituency Former MLA and Congress leader Belur Gopalakrishna said that, we want defeat B.Y.Raghavendra in Shivamogga Lok Sabha By election 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X