ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 02; ಕರ್ನಾಟಕದ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ಶರಾವತಿಗೆ ನದಿಗೆ ಬಾಗಿನ ಅರ್ಪಿಸಿ, ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರು ಹೊರಗೆ ಬಿಡಲಾಯಿತು.

ಸೋಮವಾರ ಬೆಳಗ್ಗೆ ಕೆಪಿಸಿ ಅಧಿಕಾರಿಗಳು ಶರಾವತಿ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಾಗಿನ ಅರ್ಪಣೆ ಮಾಡಿದರು. ಕೆಪಿಸಿ ಅಧಿಕಾರಿಗಳು, ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಲಾಶಯದ ಇಂದಿನ ನೀರಿನಮಟ್ಟ 1807.20 ಅಡಿ ಆಗಿದೆ.

ಶರಾವತಿ ಭೂಗರ್ಭ ವಿದ್ಯುತ್ ಯೋಜನೆ; ಸಮೀಕ್ಷೆಗೆ ತಡೆ ಶರಾವತಿ ಭೂಗರ್ಭ ವಿದ್ಯುತ್ ಯೋಜನೆ; ಸಮೀಕ್ಷೆಗೆ ತಡೆ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್‌ನಲ್ಲಿ ಲಿಂಗನಮಕ್ಕಿ ಜಲಾಶಯವಿದೆ. ಇಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗೇಟ್‌ನಿಂದ ಸಾಂಪ್ರದಾಯಿಕವಾಗಿ ಕೆಲವು ನಿಮಿಷ ನೀರು ಹೊರಗೆ ಬಿಡಲಾಯಿತು. ಜಲಾಶಯ ಅರ್ಧ ಭರ್ತಿಯಾದ ಬಳಿಕ ಒಂದು ಗೇಟ್ ಮೂಲಕ ಸ್ವಲ್ಪ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತದೆ.

ಶಿವಮೊಗ್ಗ: ಲಿಂಗನಮಕ್ಕಿ, ಭದ್ರಾ, ತುಂಗಾ ಡ್ಯಾಂ ನೀರಿನ ಮಟ್ಟ ಹೆಚ್ಚಳ ಶಿವಮೊಗ್ಗ: ಲಿಂಗನಮಕ್ಕಿ, ಭದ್ರಾ, ತುಂಗಾ ಡ್ಯಾಂ ನೀರಿನ ಮಟ್ಟ ಹೆಚ್ಚಳ

 Water Released To Sharavathi River From Linganamakki Dam

ಜಲಾಶಯದಲ್ಲಿ 1,795 ಅಡಿ ನೀರು ಸಂಗ್ರಹವಾದರೆ ಅರ್ಧ ಭರ್ತಿಯಾದಂತಾಗಲಿದೆ. ಇಷ್ಟು ನೀರು ಸಂಗ್ರಹವಾದರೆ ಗೇಟ್ ಮಟ್ಟಕ್ಕೆ ನೀರು ಬರುತ್ತದೆ. ಆ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ಗೇಟ್‌ನಿಂದ ಸ್ವಲ್ಪ ಪ್ರಮಾಣದ ನೀರು ಹೊರಗೆ ಹರಿಸಲಾಗುತ್ತದೆ.

ಇವತ್ತು ಎಷ್ಟಿದೆ ನೀರು?; ಶರಾವತಿ ನದಿ ಭಾಗದಲ್ಲಿ ಕಳೆದ ತಿಂಗಳು ಭಾರಿ ಮಳೆಯಾಗಿದೆ. ಈ ಹಿನ್ನಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟ ಬಹುಬೇಗ ಏರಿಕೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಅಡಿಗಳು. ಇಂದು 1,807.20 ಅಡಿಯಷ್ಟು ನೀರಿನ ಸಂಗ್ರಹವಿದೆ. 14,481 ಕ್ಯೂಸೆಕ್ ಒಳಹರಿವು ಇದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಭಾಗದಲ್ಲಿ 3.40 ಮಿ.ಮೀ ಮಳೆಯಾಗಿದೆ. ಇದರಿಂದ ಜಲಾಶಯದ ಒಳ ಹರಿವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಬೆಂಗಳೂರಿಗೆ ಶರಾವತಿ ನೀರು; ಮತ್ತೆ ಚರ್ಚೆ ಆರಂಭಬೆಂಗಳೂರಿಗೆ ಶರಾವತಿ ನೀರು; ಮತ್ತೆ ಚರ್ಚೆ ಆರಂಭ

ಜಲಾಶಯದ ನೀರಿನ ಮಟ್ಟ; ಸಾಮಾನ್ಯವಾಗಿ ಲಿಂಗನಮಕ್ಕಿ ಜಲಾಶಯ ಆಗಸ್ಟ್‌ ತಿಂಗಳಿನಲ್ಲಿಯೇ ಭರ್ತಿಯಾಗುತ್ತದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 539.87 ಮೀಟರ್ ನೀರಿನ ಸಂಗ್ರಹವಿತ್ತು. ಈ ವರ್ಷ 550.99 ಮೀಟರ್ ನೀರಿನ ಸಂಗ್ರಹವಿದೆ.

ಸೋಮವಾರ ಜಲಾಶಯಕ್ಕೆ14,481 ಕ್ಯುಸೆಕ್ ಒಳಹರಿವು ಇದೆ. 4662 ಕ್ಯುಸೆಕ್ ಹೊರಹರಿವು ಇದೆ. ಜಲಾಶಯದಲ್ಲಿ ಪ್ರಸ್ತುತ 116.84 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಜಲಾಶಯ ಸಂಪೂರ್ಣ ಭರ್ತಿಯಾದರೆ 151.75 ಟಿಎಂಸಿ ನೀರು ಸಂಗ್ರಹವಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್‌ನಲ್ಲಿರುವ ಲಿಂಗನಮಕ್ಕಿ ಜಲಾಶಯ ಹಚ್ಚಹಸಿರಿನ ಪರಿಸರದ ನಡುವೆ ಇದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಹುಟ್ಟುವ ಶರಾವತಿ ನದಿಗೆ ಸಾಗರದಲ್ಲಿ ಅಣೆಕಟ್ಟು ಕಟ್ಟಲಾಗಿದೆ.

ಮಲೆನಾಡು ಭಾಗದಲ್ಲಿ ಸುರಿಯುವ ಮುಂಗಾರು ಮಳೆಯೇ ಜಲಾಶಯಕ್ಕೆ ಆಧಾರವಾಗಿದೆ. ಜಲಾಶಯ ಭರ್ತಿಯಾದರೆ ರಾಜ್ಯದಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಉಂಟಾಗುವುದಿಲ್ಲ. ರಾಜ್ಯ ವಿದ್ಯುತ್ ಪೂರೈಕೆಯಲ್ಲಿ ಲಿಂಗನಮಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ.

ಕಳೆದ 55 ವರ್ಷಗಳಲ್ಲಿ ಸುಮಾರು 21 ಬಾರಿ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗುತ್ತಿದ್ದಂತೆ ನದಿಗೆ ನೀರು ಬಿಡಲಾಗುತ್ತದೆ. ಆಗ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬುತ್ತದೆ. ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ವಿದ್ಯುತ್ ಉತ್ಪಾದನೆಯೇ ಪ್ರಮುಖ ಗುರಿ; ವಿದ್ಯುತ್ ಉತ್ಪಾದನೆಯನ್ನು ಪ್ರಮುಖ ಗುರಿಯನ್ನಾಗಿ ಮಾಡಿಕೊಂಡು ಶರಾವತಿ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಜಲಾಶಯ ನಿರ್ಮಾಣದ ಬಳಿಕ ಲಕ್ಷಾಂತರ ಎಕರೆ ಜಾಗ ನೀರಿನಲ್ಲಿ ಮುಳುಗಡೆಯಾಗಿದೆ. ಈ ಕುರಿತು 'ದ್ವೀಪ' ಕಾದಂಬರಿ ಬರೆಯಲಾಗಿದ್ದು, ಅದನ್ನು ಸಿನಿಮಾ ಸಹ ಮಾಡಲಾಗಿದೆ.

ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಿವಿಧ ಪ್ರವಾಸಿ ಚಟುವಟಿಕೆ ನಡೆಯುತ್ತದೆ. ಲಿಂಗನಮಕ್ಕಿ ಸುತ್ತಮುತ್ತ ಹಲವಾರು ಪ್ರವಾಸಿತಾಣಗಳು ಸಹ ಇವೆ. ಜಲಾಶಯ ನೋಡಲು ಬರುವ ಜನರು ಕೊಡಚಾದ್ರಿ, ಜೋಗ ಜಲಪಾತ, ಸಿಗಂಧೂರು ದೇವಾಲಯ, ವರದಹಳ್ಳಿ, ತುಂಗಾ ಜಲಾಶಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದಾಗಿದೆ.

ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಮೂಲಕ ಸಿಂಗಧೂರು ದೇವಾಲಯಕ್ಕೆ ಹೋಗಬೇಕು. ಇದಕ್ಕಾಗಿ ಲಾಂಚ್ ವ್ಯವಸ್ಥೆ ಇದೆ. ಅಗಾಧವಾದ ಜಲರಾಶಿಯ ನಡುವೆ ಲಾಂಚ್‌ನಲ್ಲಿ ಸಾಗುವ ಅನುಭವ ಜನರಿಗೆ ವಿಶೇಷ ಆನಂದವನ್ನು ನೀಡುತ್ತದೆ.

English summary
After offering special pooja water from Linganamakki reservoir released to Sharavathi river. Dam water level reached to 1807.20 feet against full capacity of 1,819 feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X