ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಗರದ ಗಣಪತಿ ಕೆರೆಯಲ್ಲಿ ನೀರು ನಾಯಿಗಳ ಚಿನ್ನಾಟ; ಕಣ್ತುಂಬಿಕೊಳ್ಳಲು ಬರ್ತಿದ್ದಾರೆ ಜನ

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 4: ಶಿವಮೊಗ್ಗ ಜಿಲ್ಲೆ ಸಾಗರದ ಗಣಪತಿ ಕೆರೆಯಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ಇವುಗಳ ಚಲನವಲನ, ಚಿನ್ನಾಟವನ್ನು ಕಣ್ತುಂಬಿಕೊಳ್ಳಲು, ಮೊಬೈಲ್ ನಲ್ಲಿ ಸೆರೆ ಹಿಡಿಯಲು ಹಲವರು ಕೆರೆ ಬಳಿಗೆ ಬರುತ್ತಿದ್ದಾರೆ.

ಕಳೆದ ಕೆಲವು ದಿನದಿಂದ ದೊಡ್ಡ ಸಂಖ್ಯೆಯಲ್ಲಿ ನೀರು ನಾಯಿಗಳು ಗಣಪತಿ ಕೆರೆಯಲ್ಲಿ ಪ್ರತ್ಯಕ್ಷವಾಗಿವೆ. ಕೆರೆಯಲ್ಲಿ ಇರುವ ಮೀನುಗಳನ್ನು ಹಿಡಿದು ತಿನ್ನುತ್ತಿರುವ ನೀರು ನಾಯಿಗಳು, ಸ್ಥಳೀಯರ ಆಕರ್ಷಣೆಯಾಗಿವೆ.

ಮಾಲ್ಗುಡಿ ಮ್ಯೂಸಿಯಂಗೆ ಹೋಗುವ ಪ್ರವಾಸಿಗರ ಗಮನಕ್ಕೆ ಮಾಲ್ಗುಡಿ ಮ್ಯೂಸಿಯಂಗೆ ಹೋಗುವ ಪ್ರವಾಸಿಗರ ಗಮನಕ್ಕೆ

ಶರಾವತಿ ಹಿನ್ನೀರು, ವರದಾ ನದಿಗಳು ನೀರು ನಾಯಿಗಳ ಆವಾಸ ಸ್ಥಾನ. ವರದಾ ನದಿಯ ಉಪ ನದಿಗಳ ಮೂಲಕ ಸಾಗರ ಪಟ್ಟಣದ ಗಣಪತಿ ಕೆರೆಗೆ ನೀರು ನಾಯಿಗಳು ಬಂದಿರುವ ಸಾಧ್ಯತೆ ಇದೆ. ಅಳಿವಿನ ಅಂಚಿನಲ್ಲಿರುವ ಪ್ರಾಣಿ ಆಗಿರುವುದರಿಂದ ಇವುಗಳಿಗೆ ಹಾನಿ ಮಾಡಿದರೆ ಅರಣ್ಯ ಇಲಾಖೆ ಕೇಸ್ ದಾಖಲು ಮಾಡುತ್ತದೆ.

Shivamogga: Water Dogs Playing In The Ganapathi Lake Of Sagara

ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ಸಂಕಷ್ಟ

ಗಣಪತಿ ಕೆರೆಯಲ್ಲಿ ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ನೀರು ನಾಯಿಗಳು ಭಾರಿ ಸಂಕಷ್ಟ ತಂದೊಡ್ಡಿದೆ. ಗೆಂಡೆ, ಕಾಟ್ಲಾ, ಗೌರಿ, ಮೃಗಾಲ, ರೋವು, ಬೆಳ್ಳಿಗೆಂಡೆ, ಹುಲ್ಲುಗೆಂಡೆ ಜಾತಿಯ ಮೀನುಗಳನ್ನು ಕೆರೆಯಲ್ಲಿ ಬಿಡಲಾಗಿದೆ. ಪ್ರತಿ ಮೀನು ಈಗ 10 ರಿಂದ 12 ಕೆಜಿ ತೂಗುತ್ತವೆ. ಆದರೆ ನೀರು ನಾಯಿಗಳ ಗುಂಪು ಪ್ರತಿದಿನ ನೂರಾರು ಮೀನುಗಳನ್ನು ಹಿಡಿದು ತಿನ್ನುತ್ತಿವೆ.

Shivamogga: Water Dogs Playing In The Ganapathi Lake Of Sagara

ಮೀನುಗಾರರ ಸಹಕಾರ ಸಂಘದವರು ಕೆರೆಯಲ್ಲಿ ಮೀನುಗಾರಿಕೆ ಗುತ್ತಿಗೆ ಪಡೆದಿದ್ದಾರೆ. ಈ ಕುರಿತು ಮಾತನಾಡಿದ ಮೀನುಗಾರರಾದ ಭೈರಪ್ಪ, ಕೆರೆ ಸ್ವಚ್ಛವಾಗಿದೆ. ನೀರು ನಾಯಿಗಳಿಗೆ ಮೀನು ಸುಲಭವಾಗಿ ಕಾಣಿಸುತ್ತವೆ. ಪ್ರತಿದಿನ ನೀರು ನಾಯಿಗಳು ಅವುಗಳನ್ನು ಹಿಡಿದು ತಿನ್ನುತ್ತಿವೆ. ನಾವು ಬಲೆ ಹಾಕಿದರೆ ಬೆರಳೆಣಿಕೆಯಷ್ಟು ಮೀನುಗಳು ಮಾತ್ರ ಸಿಗುತ್ತಿವೆ. ಹಾಗಾಗಿ ಅವುಗಳನ್ನು ಓಡಿಸಲು ಯತ್ನಿಸುತ್ತಿದ್ದೇವೆ ಅನ್ನುತ್ತಾರೆ.

Shivamogga: Water Dogs Playing In The Ganapathi Lake Of Sagara

ನೀರು ನಾಯಿಗಳ ಗುಂಪು ಹೆಚ್ಚು ಸಮಯ ಒಂದೆ ಕಡೆ ಇರುವುದಿಲ್ಲ. ಒಂದೆಡೆಯಿಂದ ಮತ್ತೊಂದು ಕಡೆಗೆ ತೆರಳುತ್ತಿರುತ್ತವೆ. ಸದಾ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ.

English summary
Water dogs have been spotted at Ganapati Lake in the Shivamogga district Sagara Ganapathi Lake. Many people come to the lake to capture it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X