ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ; ತೀರ್ಥಹಳ್ಳಿಯಲ್ಲಿ ದನಗಳ್ಳರು ಎಸ್ಕೇಪ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 03; ದನಗಳನ್ನು ಕಳ್ಳತನ ಮಾಡಲು ಬಂದವರು ಸ್ಥಳೀಯರನ್ನು ಕಂಡು ಸಿನಿಮೀಯ ರೀತಿಯಲ್ಲಿ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ. ಸುಮಾರು 1 ಕಿ. ಮೀ. ದೂರ ರಿವರ್ಸ್ ಗೇರ್‌ನಲ್ಲೇ ಕಾರು ಚಲಾಯಿಸಿ ಓಡಿ ಹೋಗಿದ್ದಾರೆ.

Recommended Video

Cow Thieves ಬಂದು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆದ ಕಳ್ಳರು | Oneindia Kannada

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್‌ನಲ್ಲಿದ್ದ ದನಗಳನ್ನು ಅಪಹರಿಸಲು ಕಳ್ಳರು ಬಂದಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಎದುರಿನಿಂದ ಬಂದ ಯುವ ಕಾಂಗ್ರೆಸ್ ಮುಖಂಡ ಸುದೀಪ್ ಶೆಟ್ಟಿ ಮತ್ತು ಜಾವೇದ್ ನೋಡುತ್ತಿದ್ದಂತೆ ಗೋ ಕಳ್ಳರು ಪರಾರಿಯಾಗಿದ್ದಾರೆ.

ಸುದೀಪ್ ಶೆಟ್ಟಿ ಕಾರಿಗೆ ತಮ್ಮ ಕಾರಿನಿಂದ ಡಿಕ್ಕಿ ಹೊಡೆಸಿದ ಗೋವು ಕಳ್ಳರು, ಪರಾರಿಯಾಗಲು ಹಿಮ್ಮುಖವಾಗಿ ಚಲಿಸಿದ್ದಾರೆ. ರಸ್ತೆಯ ಕೊನೆಯಲ್ಲಿ ಕಾರನ್ನು ಉಲ್ಟಾ ತಿರುಗಿಸಿ ಪರಾರಿಯಾಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗೂ ಗೋವು ಕಳ್ಳರ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಕನ್ನಡಿ ಪುಡಿಯಾಗಿದೆ.

ಗಾಂಜಾ, ದನ ಕಳವು ಪ್ರಕರಣ ತಡೆಗೆ ನಿರ್ಲಕ್ಷ್ಯ; ಇನ್‌ಸ್ಪೆಕ್ಟರ್ ಅಮಾನತು ಗಾಂಜಾ, ದನ ಕಳವು ಪ್ರಕರಣ ತಡೆಗೆ ನಿರ್ಲಕ್ಷ್ಯ; ಇನ್‌ಸ್ಪೆಕ್ಟರ್ ಅಮಾನತು

Viral Video Cow Thieves Escaped After Dramatic Chase At Thirthahalli

"ಇಂದಿರಾ ಕ್ಯಾಂಟೀನ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಮೂವರು ಯುವಕರು ರಸ್ತೆಯಲ್ಲಿದ್ದ ಹಸುವೊಂದನ್ನು ಕಾರಿಗೆ ತುಂಬುತ್ತಿದ್ದರು. ಎರಡು ಕಾಲುಗಳನ್ನು ಕಾರಿನೊಳಗೆ ಇರಿಸಿ, ಇನ್ನೆರಡು ಕಾಲುಗಳು ಇರಿಸುವ ಹೊತ್ತಿಗೆ ನಾವು ಹೋದೆವು. ನಮ್ಮ ಕಾರು ನಿಧಾನ ಮಾಡುತ್ತಿದ್ದಂತೆ, ಹಸು ಬಿಟ್ಟು ಮೂವರು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದರು. ನಾವು ಚೇಸ್ ಮಾಡಿದೆವು" ಅನ್ನುತ್ತಾರೆ ಯುವ ಕಾಂಗ್ರೆಸ್ ಮುಖಂಡ ಸುದೀಪ್ ಶೆಟ್ಟಿ ಬೆಟಮಕ್ಕಿ.

ಶಿವಮೊಗ್ಗ; ತೀರ್ಥಹಳ್ಳಿ ಬಳಿ ಲಾರಿ ಪಲ್ಟಿ; 10 ಹಸು ಸಾವು ಶಿವಮೊಗ್ಗ; ತೀರ್ಥಹಳ್ಳಿ ಬಳಿ ಲಾರಿ ಪಲ್ಟಿ; 10 ಹಸು ಸಾವು

ಪ್ರಕರಣ ದಾಖಲಾಗಿಲ್ಲ; ಗೋವು ಕಳ್ಳರು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಿದ್ದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಎಸ್ಕೇಪ್ ಆಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದದೆ.

ಈ ಭಾಗದಲ್ಲಿ ಗೋವುಗಳ ಕಳ್ಳತನದ ಪ್ರಕರಣಗಳು ಈ ಹಿಂದೆಯೂ ವರದಿಯಾಗಿದೆ. ಬೆಟಮಕ್ಕಿಯಲ್ಲಿ ಗೋವು ಕಳ್ಳರು ತಲವಾರು ತೋರಿಸಿ ಬೆಚ್ಚಿಬೀಳಿದ ಘಟನೆಗಳು ನಡೆದಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ಪೊಲೀಸರ ಕಾರ್ಯವೈಖರಿ ಪ್ರಶ್ನಿಸುತ್ತದೆ.

English summary
Cow thieves escaped in car after dramatic chase at Thirthahalli town of Shivamogga district. Video went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X