ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಊಹೂಂ... ಎನ್ ಓಸಿ ಕೊಡೋವರೆಗೂ ನಾ ಇಲ್ಲಿಂದ ಇಳಿಯಲ್ಲ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 4: ವಾಸದ ಮನೆ ಹಕ್ಕುಪತ್ರಕ್ಕೆ ಎನ್ ಒಸಿ ಕೊಡಬೇಕೆಂದು ಒತ್ತಾಯಿಸಿ ಇಲಾಖೆ ಕಟ್ಟಡ ಏರಿ ಕುಳಿತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಹೊಸನಗರ ತಾಲೂಕು ನಗರ ವಲಯ ಅರಣ್ಯ ಇಲಾಖೆಯ ವಿರುದ್ಧ ಮೂಡುಗೊಪ್ಪದ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಅರಣ್ಯ ಇಲಾಖೆ ಕಟ್ಟಡವನ್ನೇ ಏರಿ ಕುಳಿತು ಎನ್ ಒಸಿ ನೀಡದ ಹೊರತು ಕೆಳಗೆ ಇಳಿಯೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಸ್ವರ್ಗದಂತಿರುವ ಮಂಗಳೂರಿನ ನಡುವೊಂದು ನರಕಸ್ವರ್ಗದಂತಿರುವ ಮಂಗಳೂರಿನ ನಡುವೊಂದು ನರಕ

ಈ ಕುರಿತು ಸಾಕಷ್ಟು ಬಾರಿ ಇಲಾಖೆಗೆ ಮನವಿ ನೀಡಲಾಗಿದೆ. ಆದರೆ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಲಾಖೆಗೆ ಅಲೆದು ಅಲೆದು ಸಾಕಾಗಿದೆ. ಹಾಗಾಗಿ ಈ ರೀತಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕರುಣಾಕರ ಶೆಟ್ಟಿ ತಿಳಿಸಿದ್ದಾರೆ. ಹೀಗೆ ಕಟ್ಟಡ ಏರಿ ಕುಳಿತ ಇವರನ್ನು ನೋಡಿ ಇಲ್ಲಿನ ಸಾರ್ವಜನಿಕರು ಹಾಗೂ ಅರಣ್ಯಾಧಿಕಾರಿಗಳು ಗಲಿಬಿಲಿಗೊಂಡಿದ್ದಾರೆ.

Vice President Of Village Panchayat Staged Protest By Sitting On Top Of Building In Shivamogga

ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 220 ಮನೆಗಳಿದ್ದು, ಹಕ್ಕುಪತ್ರ ನೀಡದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕಚೇರಿಗೆ ಬಂದ ಕರುಣಾಕರ ಶೆಟ್ಟಿ ಅಧಿಕಾರಗಳ ವಿರುದ್ಧ ಪಟ್ಟು ಹಿಡಿದು ಕುಳಿತಿದ್ದಾರೆ.

English summary
The Vice-President of the Village Panchayat has staged a protest by sitting on the top of department building, demanding NOC for residence certificate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X