ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು

|
Google Oneindia Kannada News

ಶಿವಮೊಗ್ಗ, ನವೆಂಬರ್ 29 : ಶಿವಮೊಗ್ಗ ಜಿಲ್ಲೆಯ ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ. ಜಿಲ್ಲೆಯಲ್ಲಿನ ಮಾವು ಬೆಳೆಗೆ ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಹತೋಟಿ ಕ್ರಮಗಳ ವಿವರಣೆಯನ್ನು ನೀಡಿದೆ.

ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆ ಇದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಮಾವು ಬೆಳೆ ಕೃಷಿಕರು ಇಲಾಖೆ ಸೂಚಿಸಿರುವ ಔಷಧಿಗಳನ್ನು ಸಿಂಪಡಣೆ ಮಾಡುವುದರಿಂದ ಹತೋಟಿ ಮಾಡಬಹುದು ಎಂದು ಇಲಾಖೆ ಹೇಳಿದೆ.

 ಹಾವೇರಿಯಲ್ಲಿ ಬೆಳ್ಳುಳ್ಳಿ ಕಳ್ಳರ ಕಾಟ; ಪೊಲೀಸರ ಮೊರೆ ಹೋದ ರೈತರು ಹಾವೇರಿಯಲ್ಲಿ ಬೆಳ್ಳುಳ್ಳಿ ಕಳ್ಳರ ಕಾಟ; ಪೊಲೀಸರ ಮೊರೆ ಹೋದ ರೈತರು

ಬೂದಿ ರೋಗಕ್ಕೆ ತುತ್ತಾದ ಗಿಡದ ಎಲೆಗಳು, ಹೂಗೊಂಚಲುಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದು ಹೂಗಳು ಉದುರುತ್ತವೆ ಹಾಗೂ ಎಲೆಗಳು ಮುರುಟಿ ನಂತರದ ದಿನಗಳಲ್ಲಿ ಎಳೆಯ ಕಾಯಿಗಳು ಉದುರುತ್ತವೆ.

ಅಪ್‌ಡೇಟೆಡ್ ಕಳ್ಳರು: ಹಣ ಬೇಡ್ವಂತೆ ಈರುಳ್ಳಿ ಮೂಟೆ ಇದ್ರೆ ದೋಚ್ತಾರೆ! ಅಪ್‌ಡೇಟೆಡ್ ಕಳ್ಳರು: ಹಣ ಬೇಡ್ವಂತೆ ಈರುಳ್ಳಿ ಮೂಟೆ ಇದ್ರೆ ದೋಚ್ತಾರೆ!

Various Disease For Mango Crop And Measures

ಬೂದಿ ರೋಗದ ನಿರ್ವಹಣೆಗೆ ರೈತರು ರೋಗಕ್ಕೆ ತುತ್ತದಾದ ಮರದ ಭಾಗಗಳನ್ನು ತೆಗೆದು ನಾಶಪಡಿಸಬೇಕು. ಮರಗಳ ತಳ ಭಾಗದಲ್ಲಿ ಉದುರಿದ ಒಣಗಿದ ಎಲೆ, ಹೂ ಗೊಂಚಲುಗಳು ಹಾಗೂ ಬಟಾಣಿ ಹೀಚುಗಳನ್ನು ಆರಿಸಿ ಸುಡಬೇಕು.

ಇದೀಗ ಹೊಸ ಟ್ರೆಂಡ್, ಚೆಂಡು ಹೂ ಜೊತೆ ಪ್ರವಾಸಿಗರ ಸೆಲ್ಫಿ!ಇದೀಗ ಹೊಸ ಟ್ರೆಂಡ್, ಚೆಂಡು ಹೂ ಜೊತೆ ಪ್ರವಾಸಿಗರ ಸೆಲ್ಫಿ!

ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್‍ಡೈಜಿಂ ಅಥವಾ 400 ಮಿ.ಲೀ. ಹೆಕ್ಸಾಕೋನಜೋಲ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವುದು. 15 ರಿಂದ 20 ದಿವಸಗಳ ಅಂತರದಲ್ಲಿ 2 ಬಾರಿ ಸಿಂಪಡಿಸುವುದು ಸೂಕ್ತ.

Various Disease For Mango Crop And Measures

ಜಿಗಿ ಹುಳುಗಳು ಸಹ ಬೆಳೆಗೆ ಹಾನಿ ಮಾಡುತ್ತವೆ. ಜಿಗಿಹುಳು ಅಂಟು ಪದಾರ್ಥವನ್ನು ಸ್ರವಿಸುವುದರಿಂದ ಹೂ ಗೊಂಚಲಿನಲ್ಲಿ ಕಪ್ಪು ಬೂಸ್ಟ್ ಬೆಳವಣಿಗೆ ಕಂಡುಬರುತ್ತದೆ. ಕೀಟದ ನಿರ್ವಹಣೆಗೆ ಅಝಾಡಿರೆಕ್ಟಿನ್ 7 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್‍ಡೈಜಿಂ ಜೊತೆಗೆ ಪ್ರತಿ 200 ಲೀಟರ್ ನೀರಿಗೆ 400 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಅಥವಾ 100 ಮಿ.ಲೀ. ಇಮಿಡಾಕ್ಲೋಪಿಡ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವಂತೆ ರೈತರಿಗೆ ಸೂಚಿಸಲಾಗಿದೆ.

English summary
Horticulture department Shivamogga released information on various disease for of mango crop and preventive measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X