ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ವೃಕ್ತಿ ಬಲಿ

By Ananthanag
|
Google Oneindia Kannada News

ತೀರ್ಥಹಳ್ಳಿ: ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಜನವರಿಯಲ್ಲಿ ಒಬ್ಬರು ಮೃತರಾದ ಬೆನ್ನಲೇ ಮತ್ತೊಬ್ಬ ವ್ಯಕ್ತಿ ಮೃತರಾಗಿರುವ ಘಟನೆ ವರದಿಯಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯ ಬೆಕ್ಸೆ-ಕೆಂಜಿಗುಡ್ಡೆ ಗ್ರಾಮದ ಕುಡುಪ (65) ಎನ್ನುವವರು ಮಂಗನಕಾಯಿಲೆಯಿಂದ ಮಂಗಳವಾರ ಅಸುನೀಗಿರುವುದು ಇಲ್ಲಿನ ಕಾಡಿನಂಚಿನ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.[ಬಂಡೀಪುರ ಅಭಯಾರಣ್ಯದಲ್ಲಿ ಮಂಗನ ಕಾಯಿಲೆ?]

Two persons died falling monkey disease in Thirthahalli taluk

ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿಯ ಚಿಡುವ ಗ್ರಾಮದಲ್ಲಿ ಶೇಷಪ್ಪನಾಯ್ಕ ಎನ್ನುವವರು ಜನವರಿ 30ರಂದು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು. ಈಗ ಕುಡುಪ ಎನ್ನುವವರು ಮೃತವಾಗಿದ್ದಾರೆ. ಪದೇ ಪದೇ ಜ್ವರದಿಂದ ನರಳುತ್ತಿದ್ದ ಕುಡುಪ ಅವರು ಇದ್ದಕ್ಕಿದಂತೆ ಜ್ವರ ಹೆಚ್ಚಾಗಿ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲಿಯೇ ಅಸುನೀಗಿದ್ದಾರೆ.

ಇನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕುಡುಪ ಅವರು ಮೃತವಾಗಿರುವುದನ್ನು ದೃಢಪಡಿಸಿದ ಪೊಲೀಸರು, ಮೃತವಾಗಿರುವುದಕ್ಕೆ ಮಂಗನ ಕಾಯಿಲೆ ಕಾರಣವಿರಬಹುದು ಎಂದು ತಿಳಿಸಿದ್ದಾರೆ.

English summary
Two person died falling monkey disease in Thirrthahalli taluk, shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X