ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಸಿಎಂ ತವರು ಕ್ಷೇತ್ರದಲ್ಲಿ ಇಬ್ಬರು ರೈತರ ಆತ್ಮಹತ್ಯೆ

By ರಘು ಶಿಕಾರಿ, ಶಿವಮೊಗ್ಗ
|
Google Oneindia Kannada News

ಶಿವಮೊಗ್ಗ, ಜನವರಿ 13: ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯ ನಾಗೇಶದ ನಾಯ್ಕ್ (32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಗೆ ಬೆಲೆ ಸಿಗದೆ, ಮಾಡಿಕೊಂಡ ಸಾಲವನ್ನು ತೀರಿಸಲಾಗದೆ 11/01/2021 ಸೋಮವಾರ ಜಮೀನಿನಲ್ಲಿ ವಿಷ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.

ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ

ಬಗರ್ ಹುಕಂ 2 ಎಕರೆ ಮತ್ತು ಗುತ್ತಿಗೆ 5 ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ್ದರು. ಮೆಕ್ಕೆಜೋಳ, ಶುಂಠಿ ಮತ್ತು ಭತ್ತದ ಕೃಷಿಯನ್ನು ಮಾಡುತ್ತಿದ್ದರು. ಜಮೀನುಗಳನ್ನು ಗುತ್ತಿಗೆ ಪಡೆದ ಕಾರಣ ಸುಮಾರು 10 ರಿಂದ 15 ಲಕ್ಷ ಸಾಲ‌ ಮಾಡಿಕೊಂಡಿದ್ದರು.

 ಕೃಷಿ ಕಾಯ್ದೆ ವಾಪಸ್ ಪಡೆದರೆ ಮಾತ್ರ, ಮನೆಗೆ ವಾಪಸ್ ಎಂದ ರೈತ ಮುಖಂಡರು! ಕೃಷಿ ಕಾಯ್ದೆ ವಾಪಸ್ ಪಡೆದರೆ ಮಾತ್ರ, ಮನೆಗೆ ವಾಪಸ್ ಎಂದ ರೈತ ಮುಖಂಡರು!

ಶಿಕಾರಿಪುರ ತಾಲೂಕಿನ ಮತ್ತೊಬ್ಬ ರೈತ ಅಶೋಕಪ್ಪ (41) ಮಟ್ಟಿಕೋಟೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಾಲಬಾಧೆಯಿಂದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಂಠಿ ಬೆಲೆ ಕಡಿಮೆಯಾದ ಹಿನ್ನಲೆಯಲ್ಲಿ, ಬಾಳೆ ಬೆಳೆ ನಷ್ಟವಾದ ಹಿನ್ನಲೆಯಲ್ಲಿ 4 ಎಕರೆ ಜಮೀನು ಮಾರಾಟ ಮಾಡಿದ್ದರೂ ಅರ್ಧ ಎಕರೆಯಲ್ಲಿ ಸಾಗುವಳಿ ಮಾಡುತ್ತಿದ್ದರು.

 ಕೇಂದ್ರದ ಕೃಷಿ ಕಾಯ್ದೆಗೆ ವಿರೋಧ: ಪ್ರತಿಭಟನಾ ಸ್ಥಳದಲ್ಲಿ ರೈತ ಆತ್ಮಹತ್ಯೆ! ಕೇಂದ್ರದ ಕೃಷಿ ಕಾಯ್ದೆಗೆ ವಿರೋಧ: ಪ್ರತಿಭಟನಾ ಸ್ಥಳದಲ್ಲಿ ರೈತ ಆತ್ಮಹತ್ಯೆ!

ರೈತ ಅಶೋಕಪ್ಪ ಆತ್ಮಹತ್ಯೆ

ರೈತ ಅಶೋಕಪ್ಪ ಆತ್ಮಹತ್ಯೆ

ರೈತ ಅಶೋಕಪ್ಪ ಶಿಕಾರಿಪುರದ ಅರ್ಬನ್ ಬ್ಯಾಂಕಿನಲ್ಲಿ 8 ಲಕ್ಷ ಹಾಗೂ ಸ್ಥಳೀಯ ಶಿವ ಸಹಕಾರಿ ಬ್ಯಾಂಕಿನಿಂದ 2ಲಕ್ಷ ಹಾಗೂ ಕೈ ಸಾಲ ಸೇರಿದಂತೆ ಬಡ್ಡಿ ಕಟ್ಟಲಾಗದೇ ದುಃಸ್ಥಿತಿಯಲ್ಲಿದ್ದ. ಬೇರೆ ದಾರಿ ಕಾಣದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ಪತ್ನಿ ಹಾಗೂ 2 ಮಕ್ಕಳಿದ್ದರು. ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೈತರ ಜೀವ ಹಿಂಡುತ್ತಿದೆ ಶುಂಠಿ

ರೈತರ ಜೀವ ಹಿಂಡುತ್ತಿದೆ ಶುಂಠಿ

ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಸಾಲವನ್ನು ಮಾಡಿಕೊಂಡು ಶುಂಠಿಯನ್ನು ಬೆಳೆಯುತ್ತಿದ್ದಾರೆ. ಇದು ಲಾಭದಾಯಕ ಎಂದು ಶುಂಠಿ ಬೇಸಾಯವನ್ನು ಮಾಡುತ್ತಿದ್ದಾರೆ. ಆದರೆ, ಸಾಲ ಮಾಡಿ ಬೆಳೆದ ಬೆಳೆಗೆ ಬೆಲೆ ಇಲ್ಲದೇ ಖರ್ಚು ಸಹ ಸಿಗುತ್ತಿಲ್ಲ. ಆದ್ದರಿಂದ, ಸಾಲವನ್ನು ತಿರಿಸಲಾಗದೆ ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಲಗಾರ ಕಾಟ, ಮಳೆ

ಸಾಲಗಾರ ಕಾಟ, ಮಳೆ

ಬೆಳೆ ಬೆಳೆಯಲು ರೈತರು ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದಾರೆ. ಅನೇಕರು ಬಡ್ಡಿ ಸಾಲವನ್ನು, ಕೆಲವರು ಬ್ಯಾಂಕ್ ಸಾಲವನ್ನು ಪಡೆದಿದ್ದು, ಬೆಳೆಯನ್ನು ಮಾರಾಟ ಮಾಡಿದ ಬಳಿಕ ಸಾಲ ತಿರಿಸೋಣ ಎಂದರೆ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅಕಾಲಿಕ ಮಳೆ, ಕೋವಿಡ್ ಪರಿಸ್ಥಿತಿಯಿಂದಾಗಿ ರೈತರ ಬೆಳೆಗೆ ಬೆಲೆ ಸಿಗದಂತಾಗಿದೆ. ಮಳೆಯಿಂದ ಬೆಳೆ ಕೊಳೆತು ಕೈಗೆ ಸಿಗದಂತಾಗಿದೆ.

ರೈತರ ಸಂಕಷ್ಟಕ್ಕೆ ಸರ್ಕಾರದ ನೆರವು ಬೇಕು

ರೈತರ ಸಂಕಷ್ಟಕ್ಕೆ ಸರ್ಕಾರದ ನೆರವು ಬೇಕು

ಪ್ರಕೃತಿಯೊಂದಿಗೆ ಸೆಣಸಾಡಿ ಶುಂಠಿಯನ್ನು ಎಕರೆಗೆ 3-4 ಲಕ್ಷ ಖರ್ಚು ಮಾಡಿ ಬೆಳೆದರೆ ಏಕಾಏಕಿ ಬೆಳೆ ಕುಸಿತ ಕಂಡು ರೈತರು ದಿಕ್ಕು ತೋಚದಂತಾಗಿದ್ದಾರೆ. ಆಗ ಆತ್ಮಹತ್ಯೆಯ ಮಾರ್ಗ ಹಿಡಿಯುತ್ತಿದ್ದಾರೆ. ರೈತರು ಈಗಾಗಲೇ ಸಾಕಷ್ಟು ನಷ್ಟವನ್ನು ಅನುಭಿಸುತ್ತಿದ್ದು, ಬಡ್ಡಿ ಸಾಲಗಾರ ಕಾಟ, ಬ್ಯಾಂಕ್ ಸಾಲಗಳು ತೊಂದರೆ ಉಂಟು ಮಾಡಿವೆ. ಸರ್ಕಾರ ಈ ಬಗ್ಗೆ ಗಮನ ನೀಡಿ ರೈತರ ಸಂಕಷ್ಟಗಳ ಬಗ್ಗೆ ಪರಿಶೀಲನೆ‌ ನಡೆಸಿ, ಆತ್ಮಹತ್ಯೆಗಳು ಆಗದಂತೆ ತಡೆಯಬೇಕಾಗಿದೆ.

English summary
Two farmers committed suicide in chief minister B. S. Yediyurappa home town Shikaripura, Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X