• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ ಉಪ ಚುನಾವಣೆ : ಆಣೆ-ಪ್ರಮಾಣ ರಾಜಕೀಯ ಆರಂಭ!

|

ಶಿವಮೊಗ್ಗ, ಅಕ್ಟೋಬರ್ 25 : ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಆಣೆ-ಪ್ರಮಾಣ ರಾಜಕೀಯ ಆರಂಭವಾಗಿದೆ. ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಹತರಾಳು ಹಾಲಪ್ಪ ಅವರು ಸಿಂಗಧೂರು ಕ್ಷೇತ್ರದಲ್ಲಿ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಗುರುವಾರ ಶಿವಮೊಗ್ಗದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪತ್ರಿಕಾಗೋಷ್ಠಿ ನಡೆಸಿದರು. ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಉಪ ಚುನಾವಣೆ : ನಾಯಕರ ಏಟು, ತಿರುಗೇಟುಗಳು

'ಶಿವಮೊಗ್ಗದಲ್ಲಿರುವ ಶರಾವತಿ ಡೆಂಟಲ್ ಕಾಲೇಜು ಬಂಗಾರಪ್ಪ ಕುಟುಂಬದ ಖಾಸಗಿ ಆಸ್ತಿ. ಅದು ಈಡಿಗ ಸಮಾಜದ ಆಸ್ತಿಯಲ್ಲ' ಎಂದು ಹೇಳುವ ಮೂಲಕ ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ತಿರುಗೇಟು ನೀಡಿದರು.

ಮಧು ಬಂಗಾರಪ್ಪಗೆ ಹಲವು ಪ್ರಶ್ನೆ ಕೇಳಿದ ಕುಮಾರ್ ಬಂಗಾರಪ್ಪ!

ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಕಣದಲ್ಲಿದ್ದಾರೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ...

ಶಿವಮೊಗ್ಗ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ರಣತಂತ್ರ

ಸಿಗಂಧೂರು ದೇವಾಲಯದಲ್ಲಿ ಪ್ರಮಾಣ

ಸಿಗಂಧೂರು ದೇವಾಲಯದಲ್ಲಿ ಪ್ರಮಾಣ

ಸಿಗಂಧೂರು ದೇವಾಲಯದಲ್ಲಿ ಪ್ರಮಾಣ ಮಾಡುವೆ ಎಂದು ಹೇಳಿದ್ದ ಸಾಗರ ಶಾಸಕ ಹರತಾಳು ಹಾಪಲ್ಲ ಹೇಳಿಕೆಗೆ ತಿರುಗೇಟು ನೀಡಿದ ಬೇಳೂರು ಗೋಪಾಲಕೃಷ್ಣ, 'ನಾನು ಮಧು ಬಂಗಾರಪ್ಪ ಅವರನ್ನು ಪ್ರಮಾಣಕ್ಕೆ ಕರೆದುಕೊಂಡು ಬರುವೆ. ಅದೇ ರೀತಿ ಹಾಲಪ್ಪ ಅವರು ಸಹ ಲೈಂಗಿಕ ಹಗರಣದಲ್ಲಿ ಸಾಕ್ಷಿಯನ್ನು ಮುಚ್ಚಿ ಹಾಕಿಲ್ಲ ಎಂದು ಪ್ರಮಾಣ ಮಾಡಲಿ' ಎಂದು ಸವಾಲು ಹಾಕಿದರು.

ಕುಮಾರ್ ಬಂಗಾರಪ್ಪಗೆ ಈಗ ನೆನಪಾಗಿದೆ

ಕುಮಾರ್ ಬಂಗಾರಪ್ಪಗೆ ಈಗ ನೆನಪಾಗಿದೆ

'ಶರಾವತಿ ಡೆಂಟಲ್ ಕಾಲೇಜು ಬಗ್ಗೆ ಈಗ ಮಾತನಾಡುವ ಕುಮಾರ್ ಬಂಗಾರಪ್ಪ ಅವರು ಅದೇ ಕಾಲೇಜಿನ ಅಧ್ಯಕ್ಷರಾಗಿದ್ದಾಗ ಬಾಯಿಯಲ್ಲಿ ಕಡುಬು ಇಟ್ಟುಕೊಂಡಿದ್ರಾ?, ಕಾಲೇಜು ಬಂಗಾರಪ್ಪ ಕುಟುಂಬದ ಖಾಸಗಿ ಸ್ವತ್ತು. ಅದು ಈಡಿಗ ಸಮಾಜದ ಆಸ್ತಿ ಅಲ್ಲ. ಈಡಿಗ ಸಮಾಜದ ಇಬ್ಬರು ಮುಖಂಡರು ಬಂಗಾರಪ್ಪ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ' ಎಂದು ದೂರಿದರು.

ಬಂಗಾರಪ್ಪರನ್ನು ಮನೆಯಿಂದ ಹೊರ ಹಾಕಿದರು

ಬಂಗಾರಪ್ಪರನ್ನು ಮನೆಯಿಂದ ಹೊರ ಹಾಕಿದರು

'ಕುಮಾರ್ ಬಂಗಾರಪ್ಪ ಮತ್ತು ಹರತಾಳು ಹಾಲಪ್ಪ ಅವರು ರಾಜಕೀಯಕ್ಕೆ ಬಂದಿದ್ದೆ ಬಂಗಾರಪ್ಪ ಅವರಿಂದ. ಮಾತನಾಡಲು ಕಲಿತಿದ್ದು ಅವರಿಂದಲೇ. ರಾತ್ರೋರಾತ್ರಿ ಬಂಗಾರಪ್ಪ ಅವರನ್ನು ಮನೆಯಿಂದ ಹೊರಹಾಕಿದ ಭೂಪ ಕುಮಾರ್ ಬಂಗಾರಪ್ಪ. ಇಷ್ಟು ದಿನ ಸುಮ್ಮನಿದ್ದ ಅವರು ಈಗ ರಾಜಕೀಯ ಪ್ರೇರಿತವಾಗಿ ಹೇಳಿಕೆ ನೀಡುತ್ತಿದ್ದಾರೆ' ಎಂದು ಆರೋಪಿಸಿದರು.

ಮುಗ್ಧ ಜನರಿಗೆ ಮೋಸ ಮಾಡಿದ್ದಾರೆ

ಮುಗ್ಧ ಜನರಿಗೆ ಮೋಸ ಮಾಡಿದ್ದಾರೆ

'ತುಮರಿ ಸೇತುವೆಗಾಗಿ ಯಡಿಯೂರಪ್ಪ ಅವರು ಮೂರು ಬಾರಿ ಗುದ್ದಲಿ ಪೂಜೆ ನಡೆಸಿದ್ದಾರೆ. ಜನರಿಗೆ ಮೋಸ ಮಾಡಿದ್ದಾರೆ. ಮುಗ್ಧ ಜನರಿಗೆ ಮೋಸ ಮಾಡಿ ಗೆಲ್ಲುವ ಕಲೆ ಬಿಜೆಪಿ ಅವರಿಗೆ ಕರಗತವಾಗಿದೆ. ಈಶ್ವರಪ್ಪ, ಯಡಿಯೂರಪ್ಪ ಬೈದಾಡಿಕೊಂಡಷ್ಟು ಯಾರೂ ಬೈದಾಡಿಕೊಂಡಿಲ್ಲ. ಯಡಿಯೂರಪ್ಪ ಮನಸ್ಥಿತಿ ಕಳೆದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ' ಎಂದು ಬೇಳೂರು ಗೋಪಾಲಕೃಷ್ಣ ಟೀಕಿಸಿದರು.

English summary
Former MLA and Congress leader Belur Gopalakrishna began the Truth test politics in Shivamogga Lok Sabha by election campaign. Election will be held on November 3, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X