ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ರದ್ದು

|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 9 : ಬೆಂಗಳೂರು- ಶಿವಮೊಗ್ಗ ಮಾರ್ಗದಲ್ಲಿ ಸಂಚಾರ ನಡೆಸುವ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಡಿಸೆಂಬರ್ 10 ರಿಂದ 13ರ ತನಕ ಸಂಚಾರ ನಡೆಸುವ ರೈಲುಗಳ ಸಂಚಾರ ರದ್ದಾಗಿದೆ.

ಸೋಮವಾರ ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ಅರಸೀಕೆರೆ- ತುಮಕೂರು-ಬಾಣಸಂದ್ರ ನಡುವಿನ ರೈಲ್ವೆ ನಿಲ್ದಾಣ ಯಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದ, ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 6 ಕೋಚ್ ರೈಲು; ವೇಳಾಪಟ್ಟಿ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 6 ಕೋಚ್ ರೈಲು; ವೇಳಾಪಟ್ಟಿ

ಡಿಸೆಂಬರ್ 10 ರಿಂದ 13ರ ತನಕ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಹಲವು ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ವಿಳಂಬವಾಗಿ ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ.

ತುಮಕೂರು-ದಾವಣಗೆರೆ ರೈಲು ಮಾರ್ಗ ವಿಳಂಬ ತುಮಕೂರು-ದಾವಣಗೆರೆ ರೈಲು ಮಾರ್ಗ ವಿಳಂಬ

Train Service Cancelled Due To Civil Works

ಶಿವಮೊಗ್ಗ ಬೆಂಗಳೂರು ಮಾರ್ಗದಲ್ಲಿ ಸಂಚಾರ ನಡೆಸುವ ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಡಿಸೆಂಬರ್ 10 ಮತ್ತು 13ರಂದು ಈ ರೈಲು ಸಂಚಾರ ನಡೆಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಪುಣೆ-ಬೆಳಗಾವಿ ಇಂಟರ್ ಸಿಟಿ ರೈಲು ಹುಬ್ಬಳ್ಳಿ ತನಕ ವಿಸ್ತರಣೆ ಪುಣೆ-ಬೆಳಗಾವಿ ಇಂಟರ್ ಸಿಟಿ ರೈಲು ಹುಬ್ಬಳ್ಳಿ ತನಕ ವಿಸ್ತರಣೆ

ರೈಲು ಸಂಖ್ಯೆ 56917/56918 ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸುತ್ತಿತ್ತು. ಈ ರೈಲು ಪ್ರತಿದಿನ ಮಧ್ಯಾಹ್ನ 12.30ಕ್ಕೆ ಶಿವಮೊಗ್ಗದಿಂದ ಹೊರಡುತ್ತಿತ್ತು.

English summary
South Western railway cancelled train service due to civil engineering and signalling works in Banasandra railway station yard between Arsikere-Tumkuru section of Mysuru division.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X