ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧವಿದೆಯೇ?

|
Google Oneindia Kannada News

ಶಿವಮೊಗ್ಗ, ಜುಲೈ 09 : ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಪ್ರವಾಸಿಗರು ಜಿಲ್ಲೆಗಳ ವಿವಿಧ ಸ್ಥಳಗಳಿಗೆ ಆಗಮಿಸುವುದಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Recommended Video

Bengaluru has no more ICU beds , patients cry | Oneindia Kannada

ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರು ಭೇಟಿ ನೀಡದಂತೆ ಅಧಿಕೃತ ಅದೇಶ ಹೊರಡಿಸಿವೆ. ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ಬರದಂತೆ ಗ್ರಾಮಸ್ಥರು ನಿಷೇಧ ಹೇರಿದ್ದಾರೆ.

ವಿವಿಧ ಹುದ್ದೆಗೆ ಅರ್ಜಿ ಕರೆದ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವಿವಿಧ ಹುದ್ದೆಗೆ ಅರ್ಜಿ ಕರೆದ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ನೂರಾರು ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಆಗಮಿಸುತ್ತಿದ್ದಾರೆ. ವಿಶ್ವವಿಖ್ಯಾತ ಜೋಗ ಜಲಪಾತ ಸೇರಿದಂತೆ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ.

ಕೊರೊನಾ ನಡುವೆ ಮಳೆ: ಶಿವಮೊಗ್ಗ ಜನಜೀವನ ಅಸ್ತವ್ಯಸ್ತಕೊರೊನಾ ನಡುವೆ ಮಳೆ: ಶಿವಮೊಗ್ಗ ಜನಜೀವನ ಅಸ್ತವ್ಯಸ್ತ

Tourists Not Banned For Shivamogga District

ಕೊರೊನಾ ವೈರಸ್ ಸೋಂಕಿನ ಪರಿಣಾಮದಿಂದಾಗಿ ಈ ಬಾರಿ ಪ್ರವಾಸಿಗರು ಆಗಮಿಸಬಾರದು ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಆಗಮಿಸುವ ವಾಹನಗಳನ್ನು ತಡೆದು ವಾಪಸ್ ಕಳಿಸಿದ ಪ್ರಕರಣಗಳು ವರದಿಯಾಗಿವೆ.

ಶಿವಮೊಗ್ಗ: ಸೋಲಾರ್ ಬೇಲಿಯಿಂದಾಗಿ ಮನೆಯಿಂದ ಹೊರಬಾರದ ಗ್ರಾಮಗಳ ಜನ ಶಿವಮೊಗ್ಗ: ಸೋಲಾರ್ ಬೇಲಿಯಿಂದಾಗಿ ಮನೆಯಿಂದ ಹೊರಬಾರದ ಗ್ರಾಮಗಳ ಜನ

ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡದಂತೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಸರ್ಕಾರದಿಂದಲೂ ಈ ಕುರಿತು ಯಾವುದೇ ಸೂಚನೆ ಬಂದಿಲ್ಲ" ಎಂದು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ 17 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 335. ಕೊಡಚಾದ್ರಿ, ಕುಂದಾದ್ರಿ ಬೆಟ್ಟಕ್ಕೆ ಪ್ರವಾಸಿಗರು ಆಗಮಿಸದಂತೆ ಗ್ರಾಮಸ್ಥರು ಸ್ವಯಂ ನಿರ್ಬಂಧ ಹಾಕಿದ್ದಾರೆ.

English summary
K. B. Sivakumar deputy commissioner of Shivamogga said that tourists not banned for the district due to Coronavirus out break.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X