ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Shivamogga - Tirupati Train : ಏ.17ರಿಂದ ಶಿವಮೊಗ್ಗ-ತಿರುಪತಿ-ಚೆನ್ನೈ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭ

|
Google Oneindia Kannada News

ಶಿವಮೊಗ್ಗ, ಏಪ್ರಿಲ್ 16: ನೈರುತ್ಯ ರೈಲ್ವೆಯು ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ತಿರುಪತಿ ಸಮೀಪದ ರೇನಿಗುಂಟ ಮಾರ್ಗವಾಗಿ ಚೆನ್ನೈ ತಲುಪುವ ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಿದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಧಾರ್ಮಿಕ ಕ್ಷೇತ್ರವಾದ ತಿರುಪತಿ (ರೇಣಿಗುಂಟ)ಗೆ ನೇರ ಸಂಪರ್ಕವನ್ನು ಒದಗಿಸಲಿದೆ.

ವಾರದಲ್ಲಿ ಎರಡು ದಿನ ಹೊರಡುವ ವಿಶೇಷ ರೈಲಿನ ಉದ್ಘಾಟನಾ ಕಾರ್ಯಕ್ರಮವನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಏ.17ರ ಭಾನುವಾರ ಸಂಜೆ 6 ಗಂಟೆಗೆ ಹಸಿರು ಬಾವುಟ ತೋರಿಸುವ ಮೂಲಕ ನೆರವೇರಿಸಲಿದ್ದಾರೆ.

ಹಲವು ರೈಲುಗಳ ಸೇವೆ ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆಹಲವು ರೈಲುಗಳ ಸೇವೆ ವಿಸ್ತರಣೆ ಮಾಡಿದ ನೈಋತ್ಯ ರೈಲ್ವೆ

ಶಿವಮೊಗ್ಗದಿಂದ ಚೆನ್ನೈ ಮತ್ತು ತಿರುಪತಿಗೆ ನೇರ ರೈಲು ಸಂಪರ್ಕದ ಬೇಡಿಕೆಯನ್ನು ನವೆಂಬರ್ 2019 ರಲ್ಲಿ ಪೂರೈಸಿದ್ದು, ಕೋವಿಡ್ ಕಾರಣದಿಂದಾಗಿ ಈ ರೈಲುಗಳ ಸೇವೆಗಳನ್ನು ಕೊನೆಗೊಳಿಸಲಾಗಿತ್ತು. ಆದರೆ ರೈಲು ಸಂಪರ್ಕ ಸೇವೆಯ ಹೆಚ್ಚಿನ ಬೇಡಿಕೆ ಇದ್ದ ಕಾರಣ ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಧಾರ್ಮಿಕ ತಾಣವಾದ ತಿರುಪತಿ (ರೇನಿಗುಂಟ)ಗಳಿಗೆ ರೈಲನ್ನು ಮರು ಪ್ರಾರಂಭಿಸಲು ಸಂಸದ ಬಿ.ವೈ. ರಾಘವೇಂದ್ರ ಅವರ ಬೇಡಿಕೆಯಿಂದ ಈಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಹೊಸ ರೈಲನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯದ ಒಪ್ಪಿಗೆಯನ್ನು ಪಡೆಯಲು ಯಶಸ್ವಿಯಾಗಿದೆ.

Shivamogga-Tirupati-Chennai Express Train Service To Start From April 17th

ರೈಲು ಗಾಡಿ ಸಂ. 06223/06224 ಎರಡು ಎಸ್.ಎಲ್.ಆರ್.ಡಿ., ನಾಲ್ಕು ಸಾಮಾನ್ಯ ಕೋಚ್‍ಗಳು, ಆರು ಸ್ಲೀಪರ್ ಕೋಚ್‍ಗಳು, ಒಂದು ಎರಡನೆಯ ದರ್ಜೆ ಹವಾನಿಯಂತ್ರಿತ ಮತ್ತು ಒಂದು ಮೂರನೆಯ ದರ್ಜೆ ಹವಾನಿಯಂತ್ರಿತ ಕೋಚ್‍ಗಳನ್ನು ಒಳಗೊಂಡಿರುವ ಸಂಯೋಜನೆಯ 14 ಎಲ್‍ಎಚ್‌ಬಿ ಕೋಚ್‍ಗಳನ್ನು ಹೊಂದಿರುತ್ತದೆ.

ವಿಶೇಷ ಎಕ್ಸ್‍ಪ್ರೆಸ್ ರೈಲುಗಾಡಿ ಸಂಖ್ಯೆ. 06223 17.04.2022 ರಿಂದ 28.06.2022 ರವರೆಗೆ (22 ಸಂಚಾರಗಳು) ವಾರದಲ್ಲಿ ಎರಡು ದಿನ ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಹೊರಟು ರೇನಿಗುಂಟಾ (ತಿರುಪತಿ) ಮಾರ್ಗವಾಗಿ ಪುರಚಿ ತಲೈವರ್ ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣ ತಲುಪಲಿವೆ.

ವಾರದಲ್ಲಿ ಎರಡು ದಿನ

ವಿಶೇಷ ಎಕ್ಸ್‍ಪ್ರೆಸ್ ರೈಲು ಗಾಡಿ ಸಂಖ್ಯೆ. 06224 18.04.2022 ರಿಂದ 29.06.2022 ರವರೆಗೆ (22 ಸಂಚಾರಗಳು) ಪ್ರತಿ ಸೋಮವಾರ ಮತ್ತು ಬುಧವಾರ ಈ ಎರಡು ದಿನ ಪುರಚಿ ತಲೈವರ್ ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಟು ರೇನಿಗುಂಟ (ತಿರುಪತಿ) ಮಾರ್ಗವಾಗಿ ಶಿವಮೊಗ್ಗ ಟೌನ್ ನಿಲ್ದಾಣ ತಲುಪಲಿದೆ.

Shivamogga-Tirupati-Chennai Express Train Service To Start From April 17th

ರೈಲು ಸಂಖ್ಯೆ 06223 ಮತ್ತು 06224 ವಿಶೇಷ ಎಕ್ಸ್‍ಪ್ರೆಸ್ ರೈಲು ಸೇವೆಗಳನ್ನು ಪ್ರಾರಂಭದಲ್ಲಿ ಶಿವಮೊಗ್ಗ ಟೌನ್‌ನಿಂದ 17.04.2022 ರಿಂದ 28.06.2022 (22 ಸಂಚಾರಗಳು) ಮತ್ತು ಚೆನ್ನೈನಿಂದ 18.04.2022 ರಿಂದ 29.06.2022 (22 ಸಂಚಾರಗಳು) ಅವಧಿಗೆ ಜನರ ಬಳಕೆ ಪರೀಕ್ಷಿಸಲು ಚಾಲನೆ ನೀಡಲಾಗುತ್ತಿದೆ.

ಪ್ರಾಯೋಗಿಕ ಅವಧಿಯ ನಂತರ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಖಾಯಂಗೊಳಿಸಲಾಗುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ನೈರುತ್ಯ ರೈಲ್ವೇ, ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ನಿಲುಗಡೆ ಸ್ಥಳಗಳು
ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಕೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಗುತ್ತಿ, ಯರಗುಂಟ, ಕಡಪ, ರಾಯಪೇಟ, ರೇಣಿಗುಂಟ, ಅರಕೋಣಂ, ಪರಂಬೂರ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದ್ದು ನಂತರ ಚೆನ್ನೈ ಸೆಂಟ್ರಲ್ ತಲುಪಲಿದೆ.

English summary
South-western Railways has launched a new special express train from Shivamogga to Chennai via Renigunta near Tirupati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X