• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಜಿಎಫ್ ಪ್ರಸಾರದ ವೇಳೆ ಕರೆಂಟ್ ತೆಗೆದರೆ ಬಾಂಬ್ ಇಡ್ತೀವಿ: ಮೆಸ್ಕಾಂಗೆ ಬೆದರಿಕೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಭದ್ರಾವತಿ, ಮಾರ್ಚ್ 29: 'ಮಾರ್ಚ್ 30ರ ಶನಿವಾರ ಭದ್ರಾವತಿಯಲ್ಲಿ ಕರೆಂಟ್ ಏನಾದರೂ ತೆಗೆದರೆ ನಿಮ್ಮ ಕಚೇರಿ ಇರುವುದಿಲ್ಲ. ಅದನ್ನು ಸುಟ್ಟು ಭಸ್ಮ ಮಾಡುತ್ತೇವೆ' ಎಂದು ಭದ್ರಾವತಿಯ ಮೆಸ್ಕಾಂ ಕಚೇರಿಗೆ ಬೆದರಿಕೆ ಪತ್ರ ಬಂದಿದೆ.

ನಾನೂ ಮೊದಲ ದಿನವೇ 'ಕೆಜಿಎಫ್' ಸಿನೆಮಾ ನೋಡಲು ಹೋಗಿದ್ದೆ! ನಾನೂ ಮೊದಲ ದಿನವೇ 'ಕೆಜಿಎಫ್' ಸಿನೆಮಾ ನೋಡಲು ಹೋಗಿದ್ದೆ!

ಅನಾಮಧೇಯ ವ್ಯಕ್ತಿಯಿಂದ ಮೆಸ್ಕಾಂ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರ ವಿಳಾಸಕ್ಕೆ ಈ ಪತ್ರ ಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶನಿವಾರ ಸಂಜೆ ಖಾಸಗಿ ವಾಹಿನಿಯಲ್ಲಿ ಯಶ್ ನಟನೆಯ 'ಕೆಜಿಎಫ್' ಚಿತ್ರ ಪ್ರಸಾರವಾಗಲಿದೆ. ಹೀಗಾಗಿ, ರಾಜಕೀಯ ಪುಡಾರಿಗಳ, ಎಚ್ ಡಿ ಕುಮಾರಸ್ವಾಮಿ, ಅಪ್ಪಾಜಿ ಅವರ ಕುಮ್ಮಕ್ಕಿನಿಂದ ವಿದ್ಯುತ್ ಕಡಿತ ಮಾಡಿದರೆ ನಿಮ್ಮ ಕಚೇರಿಗೆ ಸರಿಯಾದ ಬಾಂಬ್ ಅಳವಡಿಸುತ್ತೇವೆ. ಅದಕ್ಕಾಗಿ ಶಿವಮೊಗ್ಗದ ಕೆಇಬಿ ಕಚೇರಿಗೂ ಎಚ್ಚರಿಸಿದ್ದೇವೆ ಎಂದು ಬರೆಯಲಾಗಿದೆ.

ಆ ಶನಿವಾರ ಸಂಜೆ ವಿದ್ಯುತ್ ಕಡಿತವಾದರೆ ನಿಮ್ಮ ಜೀವ ಹೋಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಸೂಚಿಸಲಾಗಿದೆ.

ನ್ಯಾಯಾಲಯವು ಕೆಜಿಎಫ್‌ಗೆ ತಡೆ ನೀಡಿದ್ದು ಏಕೆ? ಇಲ್ಲಿದೆ ಮಾಹಿತಿ ನ್ಯಾಯಾಲಯವು ಕೆಜಿಎಫ್‌ಗೆ ತಡೆ ನೀಡಿದ್ದು ಏಕೆ? ಇಲ್ಲಿದೆ ಮಾಹಿತಿ

ಮಾರ್ಚ್ 21ರಂದು ಈ ಪತ್ರ ಬರೆಯಲಾಗಿದೆ. ಕೆ.ಜಿ.ಎಫ್. ಚಿತ್ರದ ನಾಯಕ ಯಶ್ ಅವರು ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಸಿನಿಮಾ ಪ್ರಸಾರದ ವೇಳೆ ರಾಜಕೀಯ ಮಾಡಿ ಕರೆಂಟ್ ತೆಗೆಯುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.

English summary
A threat letter to Bhadravati Mescom office warned not to do power cut on Saturday during KGF movie telecasting in a channel. We will burn the office if there is electricity disruption happened, it said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X