ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಸೇರ್ಪಡೆಯಾದ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷ ಮದನ್ ಹೇಳಿದ್ದೇನು?

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 08:ತೀರ್ಥಹಳ್ಳಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಬೆಳೆಸಿದ ಶಾಂತವೇರಿ ಗೋಪಾಲಗೌಡರ ಮೊಮ್ಮಗ, ತೀರ್ಥಹಳ್ಳಿ ತಾಲೂಕು ಘಟಕ ಅಧ್ಯಕ್ಷರಾಗಿದ್ದ ಮದನ್ ಇಂದು ಸೋಮವಾರ ಬಿಜೆಪಿಗೆ ಸೇರಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮದನ್, ನನ್ನನ್ನ ಜೆಡಿಎಸ್ ನಲ್ಲಿ ಕಡೆಗಣಿಸಲಾಯಿತು. ಈ ಮಧ್ಯದಲ್ಲಿ ಬಿಜೆಪಿ ಪಕ್ಷ ನನ್ನನ್ನ ಸಂಪರ್ಕಿಸಿದ ಪರಿಣಾಮ ನಾನು ಬಿಜೆಪಿಗೆ ಬಂದೆ ಎಂದರು.

ದೇವೇಗೌಡರ ಕುಟುಂಬಕ್ಕೆ ದೋಸ್ತಿ ನಾಯಕರದ್ದೇ ಭಯ..!ದೇವೇಗೌಡರ ಕುಟುಂಬಕ್ಕೆ ದೋಸ್ತಿ ನಾಯಕರದ್ದೇ ಭಯ..!

ಈ ಸಂದರ್ಭದಲ್ಲಿ ಮಾಧ್ಯಮದವರು ಮದನ್ ಅವರಿಗೆ ಎಷ್ಟು ದಿನ ಬಿಜೆಪಿಯಲ್ಲಿರುತ್ತೀರಿ ಎಂದು ಪ್ರಶ್ನಿಸಿದಾಗ ನನ್ನ ರಾಜಕೀಯ ಜೀವನ ಅಂತ್ಯಗೊಳ್ಳುವುದು ಬಿಜೆಪಿಯೊಂದಿಗೆ. ಅಸಮಾಧಾನ ಹೊರಬಿದ್ದರೆ ರಾಜಕೀಯವಾಗಿ ಅಂತ್ಯ ಬಿಜೆಪಿಯಲ್ಲಿಯೇ ಎಂದರು.

Thirthahalli JDS president Madan joined the BJP today

ತೀರ್ಥಹಳ್ಳಿಯಲ್ಲಿ ಮೈತ್ರಿ ಪಕ್ಷದ ಕರಪತ್ರವನ್ನ ಮನೆ ಮನೆಗೂ ಹಂಚಿಲ್ಲ. ಬಿಜೆಪಿ ಪ್ರತಿ ಮನೆಗೆ ಮೂರು ಬಾರಿ ಕರಪತ್ರ ಹಂಚಿದೆ. ಬಹುಶಃ ಮೈತ್ರಿ ಅಭ್ಯರ್ಥಿಗಳಿಗೆ ಚುನಾವಣೆ ಬೇಡವಾಗಿದೆ ಅನಿಸುತ್ತದೆ ಎಂದರು.

Thirthahalli JDS president Madan joined the BJP today

ತೀರ್ಥಹಳ್ಳಿಯಲ್ಲಿ ಜೆಡಿಎಸ್ ಬೆಳೆಸಿದ್ದು ನಾನು. ನನ್ನ ಮನಸ್ಸಿಗೆ ನೋವಾಗುತ್ತಿದೆ. ಪಕ್ಷ ಬಿಟ್ಟು ಬರುವಾಗ ಮಧು ಬಂಗಾರಪ್ಪ ಒಮ್ಮೆಯಾದರೂ ಕುಳಿತು ಮಾತನಾಡಬಹುದಿತ್ತು. ಆದರೆ ಅವರು ಆ ಕೆಲಸ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

English summary
Thirthahalli JDS president Madan joined the BJP today.On this reason Madan spoke in a press conference.He said that I was ignored in the JDS.After that BJP contacted me, So i came to the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X