ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮಾಲ್ಗುಡಿ ಡೇಸ್ ಮ್ಯೂಸಿಯಂ

By Raghu Shikari
|
Google Oneindia Kannada News

ಶಿವಮೊಗ್ಗ, ಆಗಸ್ಟ್ 12: ಜನಪ್ರಿಯ ದೂರದರ್ಶನ ಧಾರಾವಾಹಿ ಮಾಲ್ಗುಡಿ ಡೇಸ್‌ನಲ್ಲಿ ಕಾಲ್ಪನಿಕ ಮಾಲ್ಗುಡಿ ರೈಲ್ವೆ ನಿಲ್ದಾಣವಾಗಿ ಕಾಣಿಸಿಕೊಂಡ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಅರಸಾಳು ರೈಲು ನಿಲ್ದಾಣವನ್ನು ನೈಋತ್ಯ ರೈಲ್ವೆ ಪುನಃ ಸ್ಥಾಪಿಸಿದೆ.

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಶನಿವಾರ ವಸ್ತುಸಂಗ್ರಹಾಲಯವನ್ನು ಮತ್ತು ಹಲವಾರು ರೈಲ್ವೆ ಪ್ರಯಾಣಿಕರ ಸೌಲಭ್ಯಗಳನ್ನು ನಿಲ್ದಾಣದಲ್ಲಿ ಅನಾವರಣಗೊಳಿಸಿದರು.

ಶಿವಮೊಗ್ಗ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಶಿವಮೊಗ್ಗ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯು ಪ್ರವಾಸಿಗರಿಗೆ ಸ್ವರ್ಗವಿದ್ದಂತಿದ್ದು, ಮಲೆನಾಡಿದ ಪ್ರಕೃತಿಕ ಸೌಂದರ್ಯ, ಜಲಪಾತ, ಅರಮನೆ, ಕೋಟೆ, ನದಿ,‌ ಡ್ಯಾಂ, ಬೆಟ್ಟಗುಡ್ಡಗಳ ನೂರಾರು ದೇವಾಲಯಗಳು, ವಾಸ್ತುಶಿಲ್ಪ ಕಲೆಗಳು, ಪೌರಾಣಿಕ, ಐತಿಹಾಸಿಕ ಸುಂದರ ಮಲೆನಾಡಿನ ಪ್ರವಾಸಿತಾಣಗಳ ನಡುವೆ ಹೊಸ ಯುಗದ ಕಾದಂಬರಿ ಆಧಾರಿತ ಹೆಸರಿನಲ್ಲಿ ಮತ್ತೊಂದು ಸ್ಥಳ ಸೇರ್ಪಡೆಯಾಗಿದೆ.

ಕಾಲ್ಪನಿಕ ಮಾಲ್ಗುಡಿ ರೈಲ್ವೆ ನಿಲ್ದಾಣ ನಿರ್ಮಾಣ

ಕಾಲ್ಪನಿಕ ಮಾಲ್ಗುಡಿ ರೈಲ್ವೆ ನಿಲ್ದಾಣ ನಿರ್ಮಾಣ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ಸದಾ ಕಲರವ ಮಾಡುವ ಹಕ್ಕಿಗಳು, ಮಬ್ಬು ಕವಿದಂತಿರುವ ವಾತಾವರಣ, ರೈಲು ಗೇಟಿನಿಂದ ಸ್ವಲ್ಪ ಹಿಂದೆಯೇ ಮರಗಳ ಹಸಿರು ತೋಪಿನ ನಡುವೆ ಅಡಗಿರುವ ಪುಟ್ಟ ನಿಲ್ದಾಣವೀಗ ದೇಶಾದ್ಯಂತ ಹೆಸರು ಮಾಡುತ್ತಿದೆ.

ಶಂಕರ್‌ನಾಗ್‌ ಹಾಗೂ ಅವರ ನಿರ್ದೇಶನದಲ್ಲಿ 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ʻಮಾಲ್ಗುಡಿ ಡೇಸ್‌ʼ ಧಾರಾವಾಹಿ ಅಂದಿನ ಕಾಲದ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ಬ್ರಿಟಿಷ್‌ ಕಾಲದ ಅರಸಾಳು ನಿಲ್ದಾಣಕ್ಕೆ ಮಾಲ್ಗುಡಿ ಎಂದು ಬರೆದಿದ್ದರು

ಬ್ರಿಟಿಷ್‌ ಕಾಲದ ಅರಸಾಳು ನಿಲ್ದಾಣಕ್ಕೆ ಮಾಲ್ಗುಡಿ ಎಂದು ಬರೆದಿದ್ದರು

ʻಮಾಲ್ಗುಡಿ ಡೇಸ್‌ʼ ಧಾರಾವಾಹಿಯ ಸಾಕಷ್ಟು ಚೀತ್ರಿಕರಣ ಇಲ್ಲಿಯೇ ಚಿತ್ರೀಕರಿಸಲಾಗಿತ್ತು. ಸುಮಾರು ಎರಡು ತಿಂಗಳ ಕಾಲ ಶಂಕರ್‌ನಾಗ್‌, ರಮೇಶ್‌ ಭಟ್‌ ಸೇರಿ ಹಲವರು ಅರಸಾಳು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು.

ಶಿವಮೊಗ್ಗ-ರಾಣೇಬೆನ್ನೂರು ರೈಲು ಯೋಜನೆ ಅನುಷ್ಠಾನ: ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆಶಿವಮೊಗ್ಗ-ರಾಣೇಬೆನ್ನೂರು ರೈಲು ಯೋಜನೆ ಅನುಷ್ಠಾನ: ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ

ಬ್ರಿಟಿಷ್‌ ಕಾಲದ ಅರಸಾಳು ನಿಲ್ದಾಣಕ್ಕೆ ಮಾಲ್ಗುಡಿ ಎಂದು ಬರೆದುಕೊಂಡು, ಶಿವಮೊಗ್ಗ- ತಾಳಗುಪ್ಪ ನಡುವೆ ಓಡಾಡುತ್ತಿದ್ದ ಮೀಟರ್‌ಗೇಜ್‌ ರೈಲನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಣ ಮಾಡುತ್ತಿದ್ದರು.

ಹಿಂದಿ ಹಾಗೂ ಇಂಗ್ಲೀಷ್‌ ಎರಡೂ ಭಾಷೆಯಲ್ಲಿ ಚಿತ್ರೀಕರಿಸಿದ್ದಾರೆ

ಹಿಂದಿ ಹಾಗೂ ಇಂಗ್ಲೀಷ್‌ ಎರಡೂ ಭಾಷೆಯಲ್ಲಿ ಚಿತ್ರೀಕರಿಸಿದ್ದಾರೆ

ʻಮಾಲ್ಗುಡಿ ಡೇಸ್‌ʼ ಧಾರಾವಾಹಿಯನ್ನು ಹಿಂದಿ ಹಾಗೂ ಇಂಗ್ಲೀಷ್‌ ಎರಡೂ ಭಾಷೆಯಲ್ಲಿ ಚಿತ್ರೀಕರಿಸಿದ್ದಾರೆ. ಒಂದು ಕಡೆ ಹಿಂದಿ ಭಾಷೆಯ ಭಾಗವನ್ನು ಚಿತ್ರೀಕರಿಸುತ್ತಿದ್ದರು, ಅರ್ಧ ಗಂಟೆ ನಂತರ ಅದೇ ಮೀಟರ್‌ಗೇಜ್‌ ರೈಲು ಶಿವಮೊಗ್ಗದಿಂದ ವಾಪಸ್‌ ಬರುತ್ತಿತ್ತು. ಆಗ ಇನ್ನೊಂದು ಕಡೆ ಇಂಗ್ಲೀಷ್‌ ಕಂತನ್ನು ಚಿತ್ರೀಕರಣ ಮಾಡುತ್ತಿದ್ದರು.

ಮಲೆನಾಡಿನ ಸಾಂಸ್ಕೃತಿಕ ಸೊಬಗನ್ನು ಮೂಡಿಸಿದೆ

ಮಲೆನಾಡಿನ ಸಾಂಸ್ಕೃತಿಕ ಸೊಬಗನ್ನು ಮೂಡಿಸಿದೆ

ಹೀಗೆ ಅರಸಾಳು ಗ್ರಾಮೀಣ ಪರಿಸರ, ಹೊಲ, ಗದ್ದೆ, ಕಾಡು, ಶಾಲೆಗಳೆಲ್ಲಾ ಸೇರಿ ಮಾಲ್ಗುಡಿಯಾಗಿತ್ತು. ಪಾಳುಬಿದ್ದಿದ್ದ ಹಳೆಯ ರೈಲು ನಿಲ್ದಾಣವನ್ನು ಮೂಲ ವಿನ್ಯಾಸದಂತೆ ಸರಿ ಮಾಡಿ, ರೈಲ್ವೇ ಇಲಾಖೆಯ ತ್ಯಾಜ್ಯ ಕಂಬಿಗಳಿಂದ ಸುಂದರ ಕಾಂಪೌಂಡ್ ನಿರ್ಮಿಸಿ, ಮಲೆನಾಡಿನ ಪಕ್ಷಿಗಳ ಚಿತ್ತಾರವನ್ನು ಗೋಡೆಗಳ ಮೇಲೆ ಮೂಡಿಸಿ, ನಿಲ್ದಾಣದೊಳಗೊಂದು ಹಳ್ಳಿ ಸೊಗಡಿನ ಅಡುಗೆ ಮನೆಯನ್ನೂ ಮಾಡಿ ಮುಗಿಸಿದ್ದಾರೆ. ಮುಂದೆ ಒಂದು ಕಾರಂಜಿಯೂ ಸಿದ್ಧವಾಗಿದೆ ಸ್ಟೀಮ್ ಎಂಜಿನ್‌ ರೈಲು ಕೂಡ ಸಿದ್ಧವಾಗಲಿದೆ. ಸಂಪೂರ್ಣ ಗ್ರಾಮೀಣ ಪರಿಸರದ ಅನಾವರಣಗೊಂಡಿದ್ದು, ಪ್ರಮುಖವಾಗಿ ಮಲೆನಾಡಿನ ಸಾಂಸ್ಕೃತಿಕ ಸೊಬಗನ್ನು ಮೂಡಿಸಿರುವುದನ್ನು ಈ ʻಮಾಲ್ಗುಡಿ ಡೇಸ್‌ʼ ಮ್ಯೂಸಿಯಂನಲ್ಲಿ ಕಾಣಬಹುದು.

English summary
South Western railway restored In Hosanagara Taluk, Arasalu railway station, which was featured in popular TV serial Malgudi days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X