ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಜಿಲ್ಲೆಯ ಚಿತ್ರಣ ಕೆಲವೇ ದಿನಗಳಲ್ಲಿ ಬದಲಾಗಲಿದೆ: ಸಿಎಂ ಯಡಿಯೂರಪ್ಪ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 25: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರಿಕಾ ಸಂವಾದ ಉದ್ದೇಶಿಸಿ ಮಾತನಾಡಿ, ಇನ್ನು ಕೆಲವು ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಚಿತ್ರಣ ಬದಲಾಗುತ್ತದೆ ಎಂದು ಭರವಸೆ ನೀಡಿದರು.

ನಾನು ಎಂಪಿ ಆಗಿದ್ದಾಗ ಶಿವಮೊಗ್ಗ ಸ್ಮಾರ್ಟ್ ಸಿಟಿ ಘೋಷಣೆ ಮಾಡಿಸಿದ್ದೇನೆ. ಕೋವಿಡ್ ಹಣಕಾಸು ನಡುವೆ ಎಲ್ಲಾ ರೀತಿಯ ಕಾಮಗಾರಿ ಪೂರ್ಣ ಮಾಡುತ್ತೇವೆ. ನಗರ ಪಾಲಿಕೆ ಸದಸ್ಯರು ಜವಾಬ್ದಾರಿಯಿಂದ ಕೆಲಸ ಮಾಡಿದರೆ ನಗರ ಅಭಿವೃದ್ಧಿ ಆಗುತ್ತದೆ ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರಯತ್ನ ಪಡಬೇಕು ಎಂದರು.

ಅ.25 ರಂದು ಶಿವಮೊಗ್ಗಕ್ಕೆ ಆಗಮಿಸಲಿರುವ ಸಿಎಂ ಯಡಿಯೂರಪ್ಪ ಅ.25 ರಂದು ಶಿವಮೊಗ್ಗಕ್ಕೆ ಆಗಮಿಸಲಿರುವ ಸಿಎಂ ಯಡಿಯೂರಪ್ಪ

ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಎಲ್ಲಾ ರೀತಿಯ ಅಭಿವೃದ್ಧಿ ಮಾಡಿದ್ದೇವೆ ಕೃಷಿ ತೋಟಗಾರಿಕೆ ಮಹಾವಿದ್ಯಾಲಯ ಆಗಿದೆ. ನಿಮ್ಮ ಅಪೇಕ್ಷೆಯಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ.

ಪ್ರತಿಕಾ ಭವನಕ್ಕೆ ನಿವೇಶನ ಮಂಜೂರು ಮಾಡಿದ್ದೇನೆ

ಪ್ರತಿಕಾ ಭವನಕ್ಕೆ ನಿವೇಶನ ಮಂಜೂರು ಮಾಡಿದ್ದೇನೆ

ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವಿನ ಕೊಂಡಿ ಇದ್ದಂತೆ, ಪ್ರತಿ ಜಿಲ್ಲೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ 25 ಲಕ್ಷ ಮಂಜೂರು ಮಾಡಿದ್ದೇನೆ. ಪ್ರತಿಕಾ ಭವನಕ್ಕೆ ನಿವೇಶನ ಮಂಜೂರು ಮಾಡಿ 25 ಲಕ್ಷ ರೂ. ನೀಡಿದೆ. ಶಿವಮೊಗ್ಗ ಪತ್ರಕರ್ತರು ತಮ್ಮ ವೃತ್ತಿ ನಡೆಸಲು, ಸಾರ್ವಜನಿಕರು ಪತ್ರಿಕಾಗೋಷ್ಠಿ ನಡೆಸಲು 2017 ಶಿವಮೊಗ್ಗದಲ್ಲಿ ಉದ್ಘಾಟನೆ ನಡೆಸಲಾಯಿತು. ಪತ್ರಕರ್ತರ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ನೀಡಿದ್ದೇವೆ ಎಂದು ಹೇಳಿದರು.

ರೈಲ್ವೆ ಯೋಜನೆಗೆ ಹೆಚ್ಚು ಒತ್ತು

ರೈಲ್ವೆ ಯೋಜನೆಗೆ ಹೆಚ್ಚು ಒತ್ತು

ಒಂದು ವರ್ಷದಲ್ಲಿ ಎಲ್ಲಾ ರೀತಿಯ ಕಾಮಗಾರಿ ಪೂರ್ಣವಾಗಲಿದ್ದು, ರೈಲ್ವೆ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ, ಶೀಘ್ರದಲ್ಲೇ ರಿಂಗ್ ರೋಡ್ ಕಾಮಗಾರಿ ಕೂಡ ಆರಂಭವಾಗಿದೆ ಎಂದರು.

ಪ್ರವಾಸೋದ್ಯಮ ಹೆಚ್ಚು ಒತ್ತು ನೀಡಿ, ಶಿಕಾರಿಪುರದ ಅಕ್ಕಮಹಾದೇವಿಯ ಜನ್ಮಸ್ಥಳ ಅಭಿವೃದ್ಧಿ ಸರ್ಕಾರ ಈ ಬಾರಿ ಪ್ರವಾಸೋದ್ಯಮ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಕೊರೊನಾ ನಡುವೆಯೂ ಅಭಿವೃದ್ಧಿಗೆ ಹಣ ನೀಡುತ್ತಿದ್ದು, ಎಲ್ಲಾ ರೀತಿಯ ಅಭಿವೃದ್ಧಿ ಪೂರ್ಣವಾಗಲಿದೆ.

ಸರ್ಕಾರ ತಪ್ಪು ದಾರಿಗೆ ಇಳಿದರೆ ನಮ್ಮನ್ನು ಎಚ್ಚರಿಸಬೇಕು

ಸರ್ಕಾರ ತಪ್ಪು ದಾರಿಗೆ ಇಳಿದರೆ ನಮ್ಮನ್ನು ಎಚ್ಚರಿಸಬೇಕು

ಸಾಗರದ ಸಿಗಂದೂರು ಸೇತುವೆ ಕೂಡ ಆದಷ್ಟು ಬೇಗ ಪೂರ್ಣವಾಗುತ್ತದೆ. ಇನ್ನೂ ಯಾವುದಾರೂ ಕೆಲಸ ಬಾಕಿ ಇದ್ದರೆ ಹೇಳಿ ಮಾಡಿ ಮುಗಿಸುತ್ತೇನೆ ಎಂದು ಪತ್ರಕರ್ತರನ್ನು ಕೇಳಿದರು. ಶಿವಮೊಗ್ಗ ನಗರದ ಸಂಪೂರ್ಣ ಅಭಿವೃದ್ಧಿಗೆ ಮಾಧ್ಯಮ ಸ್ನೇಹಿತರು ಸಹಕಾರ ನೀಡಬೇಕು, ಸರ್ಕಾರ ತಪ್ಪು ದಾರಿಗೆ ಇಳಿದರೆ ನಮ್ಮನ್ನು ಎಚ್ಚರಿಸಬೇಕು ಎಂದರು.

ಮುಂಬರುವ ಚುನಾವಣೆಗಳನ್ನು ಗೆಲ್ಲುವುದೇ ನನ್ನ ಗುರಿ

ಮುಂಬರುವ ಚುನಾವಣೆಗಳನ್ನು ಗೆಲ್ಲುವುದೇ ನನ್ನ ಗುರಿ

ಮುಂಬರುವ ಎಲ್ಲಾ ಚುನಾವಣೆಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದ ಸಿಎಂ ಯಡಿಯೂರಪ್ಪ, ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ. ನಮ್ಮ ಪಕ್ಷವನ್ನು ಎಲ್ಲಾ ಕ್ಷೇತ್ರದಲ್ಲೂ ಬಲಪಡಿಸುತ್ತೇವೆ. ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆಯನ್ನು ನಾವು ಗೆಲ್ಲುವ ವಿಶ್ವಾಸವಿದ್ದು, ಗೆದ್ದೇ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮುಂದೆ ಬರುವ ಗ್ರಾಮ ಪಂಚಾಯತಿಗಳ ಬಹುತೇಕ ಕಡೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ. ಗ್ರಾಮೀಣ ಮಟ್ಟದಲ್ಲೂ ಪಕ್ಷ ಬಲವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಗೃಹ ಮಂಡಳಿ ಅಧ್ಯಕ್ಷ ಶಾಸಕ ಆರಗ ಜ್ಞಾನೇಂದ್ರ ಹಾಗೂ ಪತ್ರಕರ್ತರು ಇದ್ದರು.

English summary
Chief Minister BS Yediyurappa, addressing a press conference, assured that the whole image of Shivamogga district will change in a few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X