ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಳಗುಪ್ಪ-ಮೈಸೂರು ಇಂಟರ್ ಸಿಟಿ ರೈಲು ಆರಂಭ; ವೇಳಾಪಟ್ಟಿ

|
Google Oneindia Kannada News

ಶಿವಮೊಗ್ಗ, ಜನವರಿ 19: ತಾಳಗುಪ್ಪ- ಮೈಸೂರು ಇಂಟರ್ ಸಿಟಿ ರೈಲು ಸಂಚಾರ ಜನವರಿ 20ರಿಂದ ಆರಂಭವಾಗಲಿದೆ. ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಈ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಜನವರಿ 20 ರಿಂದ 31ರ ತನಕ ಶಿವಮೊಗ್ಗದ ತಾಳಗುಪ್ಪ ಮತ್ತು ಮೈಸೂರು ನಡುವೆ ಇಂಟರ್ ಸಿಟಿ ರೈಲನ್ನು ಓಡಿಸಲಾಗುತ್ತದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೇಳಿದೆ.

ಮೈಸೂರು-ಚೆನ್ನೈ ಹೈ ಸ್ಪೀಡ್‌ ರೈಲು; ಸರ್ವೆಗೆ ಬಿಡ್‌ ಸಲ್ಲಿಕೆ ಮೈಸೂರು-ಚೆನ್ನೈ ಹೈ ಸ್ಪೀಡ್‌ ರೈಲು; ಸರ್ವೆಗೆ ಬಿಡ್‌ ಸಲ್ಲಿಕೆ

ಈ ರೈಲಿನಲ್ಲಿ ಸಂಚಾರ ನಡೆಸಲು ಜನರು ಆನ್‌ಲೈನ್ ಮೂಲಕವೇ ಟಿಕೆಟ್ ಕಾಯ್ದಿರಿಸಬೇಕು. ರೈಲು ನಿಲ್ದಾಣದಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಇಲಾಖೆ ಹೇಳಿದೆ. ಪ್ರಯಾಣ ಮಾಡುವಾಗ ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕಿದೆ.

ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಬೇಡಿಕೆಗಳು ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಬೇಡಿಕೆಗಳು

Talguppa Mysuru Intercity Train From January 20 Schedule

ವೇಳಾಪಟ್ಟಿ; ತಾಳಗುಪ್ಪ-ಮೈಸೂರು ನಡುವೆ ರೈಲು ನಂಬರ್ 06295 ಮತ್ತು06296 ಸಂಚಾರ ನಡೆಸಲಿದೆ. ಸಂಪೂರ್ಣ ಕಾಯ್ದಿರಿಸಿದ ಸೀಟುಗಳನ್ನು ಈ ರೈಲು ಹೊಂದಿದೆ.

ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು; ವೇಳಾಪಟ್ಟಿ ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು; ವೇಳಾಪಟ್ಟಿ

06295 ಸಂಖ್ಯೆಯ ರೈಲು ಜನವರಿ 20ರಂದು ಬೆಳಗ್ಗೆ 6ಕ್ಕೆ ಮೈಸೂರಿನಿಂದ ಹೊರಡಲಿದೆ. ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು ಜಂಕ್ಷನ್, ಬೀರೂರು, ತರೀಕೆರೆ, ಭದ್ರವಾತಿ ಮೂಲಕ ಶಿವಮೊಗ್ಗ ನಗರಕ್ಕೆ 10.45ಕ್ಕೆ ತಲುಪಲಿದೆ. 11.49 ಆನಂದಪುರಂ, ಮಧ್ಯಾಹ್ನ 12.18ಕ್ಕೆ ಸಾಗರ ಮತ್ತು 1.15ಕ್ಕೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 06296 ಮಧ್ಯಾಹ್ನ 3 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. 4.50ಕ್ಕೆ ಶಿವಮೊಗ್ಗ ತಲುಪಲಿದೆ. 4.55ಕ್ಕೆ ಶಿವಮೊಗ್ಗದಿಂದ ಹೊರಟು ಭದ್ರಾವತಿ, ಕಡೂರು, ಬೀರೂರು, ಅರಸೀಕೆರೆ ಮೂಲಕ ಸಂಚಾರ ನಡೆಸಿ ರಾತ್ರಿ 10.15ಕ್ಕೆ ಮೈಸೂರು ತಲುಪಲಿದೆ.

English summary
Talguppa-Mysuru intercity train will run from January 20, 2021. Train service stopped after announcement of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X