ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಳಗುಪ್ಪ-ಬೆಂಗಳೂರು ಇಂಟರ್‌ಸಿಟಿ ವೇಳಾಪಟ್ಟಿಯಲ್ಲಿ ಬದಲಾವಣೆ

|
Google Oneindia Kannada News

ಶಿವಮೊಗ್ಗ, ಮೇ 1: ಶಿವಮೊಗ್ಗದ ತಾಳಗುಪ್ಪ ಮತ್ತು ಬೆಂಗಳೂರು ನಡುವೆ ಸಂಚರಿಸುವ ಇಂಟರ್‌ಸಿಟಿ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆ ತಾತ್ಕಾಲಿಕವಾಗಿರಲಿದೆ.

ಮಂಗಳೂರು - ಮೈಸೂರು ರೈಲ್ವೆ ಹಳಿ ವಿದ್ಯುದೀಕರಣ ಮಂಗಳೂರು - ಮೈಸೂರು ರೈಲ್ವೆ ಹಳಿ ವಿದ್ಯುದೀಕರಣ

ಜೂನ್ 6ರವರೆಗೆ ಅನ್ವಯವಾಗುವಂತೆ ಇಂಟರ್ ಸಿಟಿ ರೈಲಿನ ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ತಾಳಗುಪ್ಪದಿಂದ ಇಂಟರ್‌ಸಿಟಿ ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶಿವಮೊಗ್ಗದಿಂದ ಹೊರಡುವ ವೇಳೆಯಲ್ಲಿ ಮಾತ್ರ ಮಾರ್ಪಾಡು ಮಾಡಲಾಗಿದೆ.

ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲು ತಾಳಗುಪ್ಪದ ತನಕ ವಿಸ್ತರಣೆ ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲು ತಾಳಗುಪ್ಪದ ತನಕ ವಿಸ್ತರಣೆ

ತಾಳಗುಪ್ಪದಿಂದ ಎಂದಿನಂತೆ ಇಂಟರ್‌ಸಿಟಿ ಪ್ರತಿದಿನ ಬೆಳಿಗ್ಗೆ 3.50ಕ್ಕೆ ಹೊರಟು, 6.05ಕ್ಕೆ ಶಿವಮೊಗ್ಗ ತಲುಪಲಿದೆ. ಈ ಹಿಂದಿನ ವೇಳಾಪಟ್ಟಿಯಂತೆ 20652 ಸಂಖ್ಯೆಯ ರೈಲು ಶಿವಮೊಗ್ಗದಿಂದ ಬೆಳಿಗ್ಗೆ 6.40ಕ್ಕೆ ಹೊರಡಬೇಕಿತ್ತು. ಆದರೆ ಒಂದು ಗಂಟೆ ತಡವಾಗಿ, ಅಂದರೆ ಬೆಳಿಗ್ಗೆ 7.40ಕ್ಕೆ ಶಿವಮೊಗ್ಗ ಬಿಡಲಿದೆ. ಇದರಿಂದ ರೈಲು ಬೆಂಗಳೂರು ತಲುಪುವುದು ಒಂದು ಗಂಟೆ ವಿಳಂಬವಾಗುವ ಸಾಧ್ಯತೆ ಇದೆ.

talguppa bengaluru intercity train timings changed for temporary

ಶಿವಮೊಗ್ಗ-ಬೆಂಗಳೂರು ರೈಲ್ವೆ ಮಾರ್ಗ ಅಭಿವೃದ್ಧಿ ಕಾಮಗಾರಿಯ ಪ್ರಯುಕ್ತ ರೈಲು ಹೊರಡುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮೇ 1ರಿಂದ ಜೂನ್ 6ರವರೆಗೆ ಈ ವೇಳಾಪಟ್ಟಿ ಇರಲಿದೆ.

English summary
Indian Railway has made temporary changes in timings of Taluguppa-Bengaluru intercity train. Train will leave Shimoga at 7.40 AM till June 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X