ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಸಚಿವರ ಕಾಲಿಗೆ ಬಿದ್ದ ತಹಶೀಲ್ದಾರ್, ಸಾರ್ವಜನಿಕ ಆಕ್ಷೇಪ

|
Google Oneindia Kannada News

ಶಿವಮೊಗ್ಗ, ಮೇ 1: ಶಿವಮೊಗ್ಗದಲ್ಲಿ ತಹಶೀಲ್ದಾರ್ ಸಚಿವರ ಕಾಲಿಗೆ ಬಿದಿದ್ದು, ಅದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾಗರಾಜ್ ನೂತನ ತಹಶೀಲ್ದಾರ್‌ರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ, ತಹಶೀಲ್ದಾರ್ ನಾಗರಾಜ್ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ನವರ ಕಾಲಿಗೆ ಬಿದಿದ್ದಾರೆ. ತಹಶೀಲ್ದಾರ್ ಗಿರೀಶ್ ವರ್ಗಾವಣೆ ಬಳಿಕ, ನಿನ್ನೆ ಸಂಜೆ ನೂತನ ತಹಶೀಲ್ದಾರ್ ನಾಗರಾಜ್ ಅಧಿಕಾರ ಸ್ವೀಕರಿಸಿದ್ದಾರೆ.

ಸೇಫ್ ಶಿವಮೊಗ್ಗದಲ್ಲಿ ಲಾಕ್‌ಡೌನ್ ಸಡಿಲಿಕೆ: ಏನಿದೆ, ಏನಿಲ್ಲ?ಸೇಫ್ ಶಿವಮೊಗ್ಗದಲ್ಲಿ ಲಾಕ್‌ಡೌನ್ ಸಡಿಲಿಕೆ: ಏನಿದೆ, ಏನಿಲ್ಲ?

ಇಂದು ಸಾರ್ವಜನಿಕರಿಗೆ ಆಹಾರ ಪದಾರ್ಥಗಳನ್ನು ಹಂಚಲು ಈಶ್ವರಪ್ಪ ಬರುತ್ತಿದ್ದರು. ಕೆ ಆರ್ ಪುರ ರಸ್ತೆಯಲ್ಲಿ ಓಂ ಶಕ್ತಿ ಭಕ್ತರಿಗೆ ಆಹಾರ ಕಿಟ್ ನೀಡುತ್ತಿದ್ದರು. ಈ ವೇಳೆ ತಹಶೀಲ್ದಾರ್ ನಾಗರಾಜ್ ಸಾರ್ವಜನಿಕವಾಗಿ ರಸ್ತೆಯಲ್ಲಿ ಸಚಿವರ ಕಾಲಿಗೆ ಬಿದಿದ್ದಾರೆ. ನಾಗರಾಜ್ ಈ ಮೊದಲು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

Tahasheeldar Nagaraj take blessings from KS Eshwarappaa

ತಹಶಿಲ್ದಾರ್ ಜೊತೆಗೆ ರೆವಿನ್ಯೂ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಕೂಡ ಸಚಿವರ ಕಾಲಿಗೆ ಬಿದ್ದು ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಅಧಿಕಾರಿ ನಾಗರಾಜ್ ವರ್ತನೆ ಕಂಡು ಸಾರ್ವಜನಿಕರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಟ್ರೋಲ್‌ಗಳು ಸಹ ಆಗುತ್ತಿವೆ.

English summary
Tahasheeldar Nagaraj take blessings from KS Eshwarappaa in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X