ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗಂದೂರು: ಬಾಣಂತಿ, ಮಗು ಇದ್ದ ವಾಹನ ಹತ್ತಿಸದ ಲಾಂಚ್‌ ಸಿಬ್ಬಂದಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 8: ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರು ಮೂಲಕ ಸಿಗಂದೂರು ತಲುಪುವ ಲಾಂಚ್‌ನಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಆಗ್ರಹ ಪುನಃ ಮುನ್ನೆಲೆಗೆ ಬಂದಿದೆ.

"ಶಿವಮೊಗ್ಗ ಜಿಲ್ಲೆಯ ಅಂಬಾರಗೋಡ್ಲು- ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್‌ನಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಸ್ಥಳೀಯರಿಗೆ ಅನುಕೂಲ ಮಾಡಿಕೊಡುವುದೇ ಈ ಲಾಂಚ್‌ಗಳ ಮೂಲ ಉದ್ದೇಶವಾಗಿದೆ," ಎಂದು ಜನಪರ ಹೋರಾಟ ವೇದಿಕೆ ಮುಖಂಡ ಪ್ರದೀಪ್ ಮಾವಿನಕೈ ಒತ್ತಾಯಿಸಿದ್ದಾರೆ.

ಸುರಕ್ಷಿತವಾಗಿ ದಡ ಸೇರಿಸುತ್ತಿದ್ದ ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ; ಕಾರಣವೇನು?ಸುರಕ್ಷಿತವಾಗಿ ದಡ ಸೇರಿಸುತ್ತಿದ್ದ ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ; ಕಾರಣವೇನು?

ಬಾಣಂತಿ ಇದ್ದ ವಾಹನ ಹತ್ತಿಸಲಿಲ್ಲ
"ಇತ್ತೀಚೆಗೆ ಲಾಂಚ್ ಸಿಬ್ಬಂದಿ ಸ್ಥಳೀಯ ಬಾಣಂತಿ ಇದ್ದ ವಾಹವನ್ನು ಲಾಂಚ್‌ಗೆ ಹತ್ತಿಸಿಲ್ಲ. ಅದರ ಬದಲು ಪ್ರವಾಸಿಗರಿದ್ದ ವಾಹನವನ್ನು ಲಾಂಚ್‌ಗೆ ಹತ್ತಿಸಿದ್ದಾರೆ. ಬಾಣಂತಿ ಮತ್ತು ಮಗು ಬಹು ಹೊತ್ತು ಕಾಯುವ ದುಸ್ಥಿತಿ ಉಂಟಾಯಿತು, ಈ ವೇಳೆ ಗಲಾಟೆಯಾಗಿದೆ. ಇಂತಹ ಘಟನೆಗಳ ಬಗ್ಗೆ ಸಾಗರ ತಾಲೂಕು ಆಡಳಿತ ಗಮನ ವಹಿಸಬೇಕು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು," ಎಂದು ಆಗ್ರಹಿಸಿದರು.

Shivamogga: Staff Didnt Board New Mother Car To Launch In Sharavati Back Water

ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ
"ಈ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಲಾಂಚ್ ಸಿಬ್ಬಂದಿ ಪ್ರವಾಸಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಸ್ಥಳೀಯರು, ಪ್ರವಾಸಿಗರು ಮತ್ತು ಲಾಂಚ್ ಸಿಬ್ಬಂದಿ ಮಧ್ಯೆ ಜಗಳ ಆಗುತ್ತಿದೆ. ಈ ಬಗ್ಗೆ ಸಾಗರ ತಾಲೂಕು ಆಡಳಿತ ಗಮನ ವಹಿಸಬೇಕು. ಸ್ಥಳೀಯರ ಅನುಕೂಲಕ್ಕಾಗಿ ಲಾಂಚ್ ಬಿಡಲಾಗಿದೆ. ಹಾಗಾಗಿ ಸ್ಥಳೀಯರಿಗೆ ಮೊದಲು ಆದ್ಯತೆ ನೀಡಬೇಕು," ಎಂದು ಪ್ರದೀಪ್ ಮಾವಿನಕೈ ಒತ್ತಾಯಿಸಿದ್ದಾರೆ.

ಎರಡು ಬದಿಯಲ್ಲಿ ಪೊಲೀಸರು ಇಲ್ಲ
"ಅಂಬಾರಗೋಡ್ಲು- ಕಳಸವಳ್ಳಿ ದಡದಲ್ಲಿ ಪೊಲೀಸರ ಕೊರತೆ ಇದೆ. ಪೊಲೀಸರನ್ನು ನಿಯೋಜಿಸಿ, ಸಮರ್ಪಕವಾಗಿ ವ್ಯವಸ್ಥೆ ಮಾಡಿದರೆ ಅನುಕೂಲ ಆಗಲಿದೆ. ಶಿವಮೊಗ್ಗ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಗಮನ ವಹಿಸಬೇಕು," ಎಂದು ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಆಗ್ರಹಿಸಿದ್ದಾರೆ.

Shivamogga: Staff Didnt Board New Mother Car To Launch In Sharavati Back Water

ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ
ಶರಾವತಿ ಹಿನ್ನೀರು ಭಾಗದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸುರಕ್ಷಿತವಾಗಿ ದಡ ತಲುಪಿಸುವ ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ ಬಂದು ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನಗತಿಯಿಂದಾಗಿ ಲಾಂಚ್ ಸಿಬ್ಬಂದಿ ಒಂಬತ್ತು ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಸಿಬ್ಬಂದಿಗಳ ಭವಿಷ್ಯದ ಕುರಿತು ಆತಂಕ ಎದುರಾಗಿದೆ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವುದು ಶರಾವತಿ ಹಿನ್ನೀರಿನ ಲಾಂಚ್‌ಗಳು. ಅಂಬಾರಗೋಡ್ಲು- ಕಳಸವಳ್ಳಿ ಮಧ್ಯೆ ಲಾಂಚ್‌ನಲ್ಲಿ ಪ್ರಯಾಣಿಸುವುದೇ ಹಿತ ಅನುಭವ. ಪ್ರವಾಸಿಗರು ಮತ್ತು ಸ್ಥಳೀಯರು ನಿರಂತರವಾಗಿ, ಸುರಕ್ಷಿತವಾಗಿ ದಡಕ್ಕೆ ತಲುಪಿಸುವ ಸಿಬ್ಬಂದಿಗಳು ಈ ವರ್ಷದ ಸಂಬಳವನ್ನೇ ಕಂಡಿಲ್ಲ.

Recommended Video

ಮೋದಿ ಫೋಟೋ ಶೇರ್ ಮಾಡಿ ಇಂಗ್ಲೆಂಡ್ ಕಾಲೆಳೆದ ವೀರೇಂದ್ರ ಸೆಹ್ವಾಗ್ | Oneindia Kannada
Shivamogga: Staff Didnt Board New Mother Car To Launch In Sharavati Back Water


2021ರಲ್ಲಿ ಸಂಬಳವನ್ನೇ ಕಂಡಿಲ್ಲ
ಶರಾವತಿ ಹಿನ್ನೀರು ಭಾಗದ ಅಂಬಾರಗೋಡ್ಲು- ಕಳಸವಳ್ಳಿ, ಹಸಿರುಮಕ್ಕಿ, ಮುಪ್ಪಾನೆ ಭಾಗದಲ್ಲಿ ಲಾಂಚ್‌ಗಳು ಕಾರ್ಯನಿರ್ವಹಿಸುತ್ತಿವೆ. 19 ಸಿಬ್ಬಂದಿಗಳು ಲಾಂಚ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಗುತ್ತಿಗೆ ಆಧಾರದ ನೌಕರರಾಗಿದ್ದು, ಪ್ರತಿದಿನ ಸೇವೆ ಒದಗಿಸುವುದು ಅನಿವಾರ್ಯ. ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಅವಧಿ ಕರ್ತವ್ಯ ನಿರ್ವಹಿಸಬೇಕು. ಹೀಗಿದ್ದೂ ಈ ಸಿಬ್ಬಂದಿಗಳು 2021ರಲ್ಲಿ ಒಂದೇ ಒಂದು ತಿಂಗಳು ಸಂಬಳ ಪಡೆದಿಲ್ಲ.

ವಸತಿ ಸೌಲಭ್ಯ ಮರೀಚಿಕೆಯ ಭೀತಿ
ಲಾಂಚ್ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಚಿಂತನೆಯಾಗಿತ್ತು. ಜನಪ್ರತಿನಿಧಿಗಳು ಕೂಡ ಈ ಕುರಿತು ಪ್ರಯತ್ನ ಮಾಡಿದ್ದರು. ಆದರೆ ಈಗ ಅದೂ ಮರೀಚಿಕೆಯಾಗುವ ಸಾಧ್ಯತೆ ಇದೆ. ಅಂಬಾರಗೋಡ್ಲು ಮತ್ತು ಕಳಸವಳ್ಳಿ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಲಾಂಚ್ ಸಿಬ್ಬಂದಿಗೆ ವಸತಿ ಸೌಲಭ್ಯ ಕೊಡುವ ಅಗತ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.

ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವಾದರೆ ಲಾಂಚ್ ಸೇವೆ ಹಂತ ಹಂತವಾಗಿ ಸ್ಥಗಿತವಾಗಬಹುದು ಅಥವಾ ಲಾಂಚ್‌ಗಳ ಸಂಖ್ಯೆ ಕಡಿತಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಲಾಂಚ್ ಸಿಬ್ಬಂದಿ ಆತಂಕದಿಂದಲೇ ದಿನ ದೂಡುವಂತಾಗಿದೆ. ಈ ಮಧ್ಯೆ ವೇತನವು ಸರಿಯಾಗಿ ಕೈಸೇರದೆ ಜೀವನ ನಡೆಸುವುದಕ್ಕೆ ಕಷ್ಟಪಡುವಂತಾಗಿದೆ. ಪ್ರತಿದಿನ ಸಾವಿರಾರು ಜನರನ್ನು ಸುರಕ್ಷಿತವಾಗಿ ದಡ ಸೇರಿಸುತ್ತಿರುವ ಲಾಂಚ್ ಸಿಬ್ಬಂದಿಯ ಜೀವನವನ್ನು ಸರ್ಕಾರ ದಡಕ್ಕೆ ಸೇರಿಸುವ ಅಗತ್ಯವಿದೆ.

English summary
Staff didn't Board new mother car to Launch in Sharavati Back water in Siganduru of Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X