ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು 8 ದಿನ ರದ್ದು

|
Google Oneindia Kannada News

ಶಿವಮೊಗ್ಗ, ಜೂನ್ 10 : ವಿವಿಧ ಕಾಮಗಾರಿಗಳ ಹಿನ್ನಲೆಯಲ್ಲಿ ರೈಲ್ವೆ ವಿಭಾಗ ಮೈಸೂರು ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲಿನ ಸಂಚಾರ 8 ದಿನಗಳ ಕಾಲ ರದ್ದಾಗಿದೆ.

ನೈಋತ್ಯ ರೈಲ್ವೆಯ ಮೈಸೂರು ವಲಯ ವಿವಿಧ ಕಾಮಗಾರಿಗಳ ಹಿನ್ನಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ. ಕೆಲವು ರೈಲುಗಳು ತಡವಾಗಿ ಸಂಚಾರ ನಡೆಸಲಿವೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿ

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲಿನ ಸಂಚಾರನ್ನು 8 ದಿನಗಳ ಕಾಲ ರದ್ದು ಮಾಡಲಾಗಿದೆ ಎಂದು ಮೈಸೂರು ರೈಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ-ಯಾವ ದಿನ ರೈಲು ಸಂಚಾರ ನಡೆಸುವುದಿಲ್ಲ ಎಂಬ ಪಟ್ಟಿ ಇಲ್ಲಿದೆ.

ರೈಲುಗಳಲ್ಲಿ ಟಿ.ವಿ ಇದೆ, ಆದರೆ ಪ್ರಯೋಜನ ಇಲ್ಲರೈಲುಗಳಲ್ಲಿ ಟಿ.ವಿ ಇದೆ, ಆದರೆ ಪ್ರಯೋಜನ ಇಲ್ಲ

South Western Railway Mysuru Division cancelled several trains

ಭಾರತದ ಅತ್ಯಂತ ಪುರಾತನ ಎಕ್ಸ್ ಪ್ರೆಸ್ ಟ್ರೈನಿನ ಬರ್ಥ್ ಡೇ ಸಂಭ್ರಮಭಾರತದ ಅತ್ಯಂತ ಪುರಾತನ ಎಕ್ಸ್ ಪ್ರೆಸ್ ಟ್ರೈನಿನ ಬರ್ಥ್ ಡೇ ಸಂಭ್ರಮ

ರೈಲುಗಳ ರದ್ದು

* ರೈಲು ಸಂಖ್ಯೆ 56227 : ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ ಜೂನ್ 16 ರಿಂದ 23ರ ತನಕ

* ರೈಲು ಸಂಖ್ಯೆ 56228 : ಶಿವಮೊಗ್ಗ ಟೌನ್- ಬೆಂಗಳೂರು ಪ್ಯಾಸೆಂಜರ್ ಜೂನ್ 17 ರಿಂದ 24ರ ತನಕ

ಭಾಗಶಃ ರದ್ದು

* ರೈಲು ಸಂಖ್ಯೆ 56270 ಮೈಸೂರು-ಶಿವಮೊಗ್ಗ ಜೂನ್ 16 ರಿಂದ 23 ಮೈಸೂರು ಬದಲು ಬೆಳಗುಳದಿಂದ ಸಂಚಾರ ಆರಂಭಿಸಲಿದೆ.

* ರೈಲು ಸಂಖ್ಯೆ 56269 ಶಿವಮೊಗ್ಗ-ಮೈಸೂರು ಜೂನ್ 16 ರಿಂದ 23ರ ತನಕ ಮೈಸೂರು ರೈಲ್ವೆ ನಿಲ್ದಾಣದ ಬದಲು ಬೆಳಗುಳದ ತನಕ ಪ್ರಯಾಣ ಮಾಡಲಿದೆ.

English summary
South Western Railway Mysuru Division canceled several train service due to track works. Here is the list of trains canceled from Bengaluru-Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X